ಸರ್ಕಾರಿ ಗೌರವಕ್ಕಾಗಿ ಧನ್ಯವಾದ: ಸಿಎಂಗೆ ದೇವೇಗೌಡ ಪುತ್ರ ಬಾಲಕೃಷ್ಣ ಪತ್ರ
ಬೆಂಗಳೂರು: ತಮ್ಮ ತಾಯಿ ಚನ್ನಮ್ಮ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಟ್ಟದ್ದಕ್ಕಾಗಿ, ಧನ್ಯವಾದಗಳನ್ನು ತಿಳಿಸಿ, ಎಚ್.ಡಿ.ದೇವೇಗೌಡ ಅವರ ಪುತ್ರ ಎಚ್.ಡಿ.ಬಾಲಕೃಷ್ಣ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.‘ನಮ್ಮ ತಾಯಿ ಅವರು ಏಳು ದಶಕಗಳ ಕಾಲ ಎಚ್.ಡಿ.ದೇವೇಗೌಡ ಅವರ ಜತೆಗೆ ಇದ್ದುಕೊಂಡು ಮಾಡಿದ ನಿಸ್ವಾರ್ಥ ಸ

ಬೆಂಗಳೂರು: ತಮ್ಮ ತಾಯಿ ಚನ್ನಮ್ಮ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಟ್ಟದ್ದಕ್ಕಾಗಿ, ಧನ್ಯವಾದಗಳನ್ನು ತಿಳಿಸಿ, ಎಚ್.ಡಿ.ದೇವೇಗೌಡ ಅವರ ಪುತ್ರ ಎಚ್.ಡಿ.ಬಾಲಕೃಷ್ಣ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.‘ನಮ್ಮ ತಾಯಿ ಅವರು ಏಳು ದಶಕಗಳ ಕಾಲ ಎಚ್.ಡಿ.ದೇವೇಗೌಡ ಅವರ ಜತೆಗೆ ಇದ್ದುಕೊಂಡು ಮಾಡಿದ ನಿಸ್ವಾರ್ಥ ಸೇವೆ ಮತ್ತು ತೋರಿದ ಮಾತೃತ್ವವನ್ನು ಗುರುತಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಿದ್ದಾಗಿ ನಮ್ಮ ಧನ್ಯವಾದಗಳು. ಅಂತ್ಯಕ್ರಿಯೆಯ ವೇಳೆ ತಾವು ಸ್ವತಃ ಹಾಜರಿದ್ದು, ತ್ರಿವರ್ಣ ಧ್ವಜವನ್ನು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾವೇ ಹಸ್ತಾಂತರಿಸಿದಿರಿ. ಇದಕ್ಕಾಗಿ ನಾನು ಅಭಾರಿಯಾಗಿದ್ದೇನೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.‘ಮೃತರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವಲ್ಲಿ, ಯಾತ್ರೆಯ ಸಂದರ್ಭದಲ್ಲಿ ಒದಗಿಸಿದ ಭದ್ರತೆಗಾಗಿ ಮತ್ತು ಅಂತ್ಯಕ್ರಿಯೆಯನ್ನು ಗೌರವಪೂರ್ವಕವಾಗಿ ನಡೆಸಿಕೊಡುವಲ್ಲಿ ನೆರವಾದ ಕರ್ನಾಟಕ ಸರ್ಕಾರಕ್ಕೂ ಧನ್ಯವಾದಗಳು’ ಎಂದಿದ್ದಾರೆ.
Read the complete story at Prajavani