ಮದ್ಯ ಕುಡಿಸಿ ಬಾಲಕಿಯ ಮೇಲೆ ಇಡೀ ರಾತ್ರಿ ಅತ್ಯಾಚಾರ – ಮಹಿಳೆ ಸೇರಿ ಮೂವರು ಪಾಪಿಗಳು ಅರೆಸ್ಟ್
– ಬಾಲಕಿಯನ್ನು ಪುಸಲಾಯಿಸಿ ಕಾಮುಕರಿಗೆ ಒಪ್ಪಿಸಿದ್ದ ಮಹಿಳೆ ಚಿಕ್ಕಬಳ್ಳಾಪುರ: ಮದ್ಯ ಕುಡಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಕಾಮುಕರು ಹಾಗೂ ಅವರಿಗೆ ಸಹಕರಿಸಿದ ಮಹಿಳೆಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಆಟೋದಲ್ಲಿ ದೇವಸ್ಥಾನಕ್ಕೆ ಎಂದು ಮಹಿಳೆ ಕರೆದುಕೊಂಡು ಬಂದಿದ್ದಳು. ಬಳಿಕ ಇಬ್ಬರು ಕಾಮುಕರಿಗೆ ಬಾಲಕಿಯನ್ನು ಒಪ್ಪಿಸಿದ್ದಳು. ನಂತರ

– ಬಾಲಕಿಯನ್ನು ಪುಸಲಾಯಿಸಿ ಕಾಮುಕರಿಗೆ ಒಪ್ಪಿಸಿದ್ದ ಮಹಿಳೆ ಚಿಕ್ಕಬಳ್ಳಾಪುರ: ಮದ್ಯ ಕುಡಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಕಾಮುಕರು ಹಾಗೂ ಅವರಿಗೆ ಸಹಕರಿಸಿದ ಮಹಿಳೆಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಆಟೋದಲ್ಲಿ ದೇವಸ್ಥಾನಕ್ಕೆ ಎಂದು ಮಹಿಳೆ ಕರೆದುಕೊಂಡು ಬಂದಿದ್ದಳು. ಬಳಿಕ ಇಬ್ಬರು ಕಾಮುಕರಿಗೆ ಬಾಲಕಿಯನ್ನು ಒಪ್ಪಿಸಿದ್ದಳು. ನಂತರ ನಿರ್ಮಾಣ ಹಂತದ ಕಟ್ಟಡದಲ್ಲಿ ಬಾಲಕಿಗೆ ಮದ್ಯಪಾನ ಮಾಡಿಸಿ ಇಬ್ಬರು ರಾತ್ರಿ ಇಡೀ ಅತ್ಯಾಚಾರ ಎಸಗಿದ್ದರು. ಜು.17ರ ರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಲಾರಿ ಡಿಕ್ಕಿ – ತಂದೆ, ಮಗಳು ಸ್ಥಳದಲ್ಲೇ ದುರ್ಮರಣ ಬೆಳಗ್ಗೆ ಬಾಲಕಿಯನ್ನು ಮನೆ ಬಳಿ ಬಿಟ್ಟು ಯಾರಿಗಾದ್ರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ರಾತ್ರಿಯೆಲ್ಲ ಮನೆಗೆ ಬಾರದೇ ಬೆಳಗ್ಗೆ ಮನೆಗೆ ಬಂದ ಮಗಳನ್ನ ಅನುಮಾನಗೊಂಡು ಪ್ರಶ್ನಿಸಿದ್ದ ತಾಯಿ ಬಳಿ ಬಾಲಕಿ ಈ ವಿಚಾರವನ್ನು ತಿಳಿಸಿದ್ದಳು. ಅಪ್ರಾಪ್ತೆ ನೀಡಿದ ದೂರಿನ ಮೆರೆಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ – ಗಂಭೀರ ಗಾಯ