ಸಾರ್ವಜನಿಕರ ಗಮನಕ್ಕೆ – ಜು.22ರಂದು ಆನೇಕಲ್, ಸಮಂದೂರು ಭಾಗದಲ್ಲಿ ವಿದ್ಯುತ್ ವ್ಯತ್ಯಯ
ಆನೇಕಲ್: ಬೆಸ್ಕಾಂ (BESCOM) ಚಂದಾಪುರ ವಿಭಾಗದ ವ್ಯಾಪ್ತಿಗೆ ಒಳಪಡುವ ಸಮಂದೂರು (Samanduru) ಮತ್ತು ಆನೇಕಲ್ (Anekal) ವಿದ್ಯುತ್ ಉಪ-ಕೇಂದ್ರಗಳಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದಾಗಿ ಜುಲೈ 22ರ ಬುಧವಾರದಂದು ಈ ಭಾಗದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ (Electricity) ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಮೊದಲನೆಯ

ಆನೇಕಲ್: ಬೆಸ್ಕಾಂ (BESCOM) ಚಂದಾಪುರ ವಿಭಾಗದ ವ್ಯಾಪ್ತಿಗೆ ಒಳಪಡುವ ಸಮಂದೂರು (Samanduru) ಮತ್ತು ಆನೇಕಲ್ (Anekal) ವಿದ್ಯುತ್ ಉಪ-ಕೇಂದ್ರಗಳಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದಾಗಿ ಜುಲೈ 22ರ ಬುಧವಾರದಂದು ಈ ಭಾಗದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ (Electricity) ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಮೊದಲನೆಯದಾಗಿ, ಸಮಂದೂರು ಉಪ-ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಸಮಂದೂರು, ರಾಜಾಪುರಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೇಪುರ, ಪಿ.ಗೊಲ್ಲಹಳ್ಳಿ, ತೆಲಗರಹಳ್ಳಿ, ವಾಣಕನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ. ಇದನ್ನೂ ಓದಿ: ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ – ಮಹಿಳಾ SIR ಸಿಬ್ಬಂದಿಗೆ ಜೀವ ಬೆದರಿಕೆ, ಯುವಕನ ವಿರುದ್ಧ ಎಫ್ಐಆರ್ ಅದೇ ರೀತಿ, ಆನೇಕಲ್ ಉಪ-ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಆನೇಕಲ್ ಪಟ್ಟಣ, ಕಾವಲುಹೊಸಹಳ್ಳಿ, ಗೋರೇನಹಳ್ಳಿ, ಹಾಳೇನಹಳ್ಳಿ, ಹೊಂಪಲಾಘಟ್ಟ, ಚೂಡೇನಹಳ್ಳಿ, ಹೊನ್ನಕಳಶಾಪುರ, ಕರ್ಮೂರು, ಬ್ಯಾಗದದೇನಹಳ್ಳಿ, ವಿ.ಬಿ.ಹೆಚ್.ಸಿ ಅಪಾರ್ಟ್ಮೆಂಟ್, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ಬೆಳಗ್ಗೆ 10 ಗಂಟೆಯಿAದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ. ಇದನ್ನೂ ಓದಿ: ಮನೆಗೆ ನುಗ್ಗಿ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿ ಅರೆಸ್ಟ್ ಸಾರ್ವಜನಿಕರು ಮುನ್ನೆಚ್ಚರಿಕೆಯಾಗಿ ತಮ್ಮ ಅಗತ್ಯ ಕೆಲಸಗಳನ್ನು ಮುಗಿಸಿಕೊಳ್ಳಲು ಹಾಗೂ ಸಹಕರಿಸಲು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಚಲೋ ಸಂಸದ್ ಮುಂದುವರಿಯಲಿದೆ: ಅಭಿಜಿತ್ ದೀಪ್ಕೆ ಘೋಷಣೆ