ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಚೇತರಿಕೆ ಕಷ್ಟ: ನಟ ಅಮಿತಾಭ್ ಅಚ್ಚರಿಯ ಪೋಸ್ಟ್
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ವೈಯಕ್ತಿಕ ಬ್ಲಾಗ್ನಲ್ಲಿ ಆರೋಗ್ಯದ ಕುರಿತು ಅಚ್ಚರಿಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ ‘ಆಸ್ಪತ್ರೆಗೆ ದಾಖಲಾಗಿ, ಶಸ್ತ್ರಚಿಕಿತ್ಸೆ ಹಾಗೂ ಐಸಿಯುಗೆ ಒಳಗಾದ ಬಳಿಕ ಚೇತರಿಕೆ ಕಾಣುವುದು ಕಷ್ಟಕರವಾಗಿರುತ್ತದೆ’ ಎಂದು ಬರೆದುಕೊಂಡಿದ್ದರು. ಅಮಿತಾಭ್ ಅವರಿಗೆ 83 ವರ್ಷ ವಯಸ್ಸಾಗಿದೆ. ಬ್ಲಾಗ್ನಲ್ಲಿ ಅಮಿತಾ

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ವೈಯಕ್ತಿಕ ಬ್ಲಾಗ್ನಲ್ಲಿ ಆರೋಗ್ಯದ ಕುರಿತು ಅಚ್ಚರಿಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ ‘ಆಸ್ಪತ್ರೆಗೆ ದಾಖಲಾಗಿ, ಶಸ್ತ್ರಚಿಕಿತ್ಸೆ ಹಾಗೂ ಐಸಿಯುಗೆ ಒಳಗಾದ ಬಳಿಕ ಚೇತರಿಕೆ ಕಾಣುವುದು ಕಷ್ಟಕರವಾಗಿರುತ್ತದೆ’ ಎಂದು ಬರೆದುಕೊಂಡಿದ್ದರು. ಅಮಿತಾಭ್ ಅವರಿಗೆ 83 ವರ್ಷ ವಯಸ್ಸಾಗಿದೆ. ಬ್ಲಾಗ್ನಲ್ಲಿ ಅಮಿತಾಭ್ ಆರೋಗ್ಯದ ಕುರಿತು ಉದಾಹರಣೆ ಕೊಡುವ ಮೂಲಕ ರೋಗಿಯ ಕಷ್ಟಗಳ ಬಗ್ಗೆ ಹಂಚಿಕೊಂಡಿದ್ದಾರೆ. ಚಾಂಪಿಯನ್ಗೂ ಸೋಲು ಇದ್ದದ್ದೆ; ಮೆಸ್ಸಿ ಆಟದ ಬಗ್ಗೆ ಅಮಿತಾಭ್ ಹೇಳಿದ್ದಿಷ್ಟು....ಅಯೋಧ್ಯೆಯ ಭೂಮಿಗಾಗಿ ಅಮಿತಾಭ್ ₹15 ಕೋಟಿ ವರ್ಗಾಯಿಸಿದ್ದರು: ಅಭಿನಂದನ್ ಲೋಧಾರಾಜ್ಯದಲ್ಲಿ ಅಮಿತಾಭ್, ಅಮೀರ್ ಐಷಾರಾಮಿ ಕಾರುಗಳ ಸಂಚಾರ; ₹38.26 ಲಕ್ಷ ದಂಡ!ಜಿ–20 ಶೆರ್ಪಾ ಹುದ್ದೆಗೆ ಅಮಿತಾಭ್ ಕಾಂತ್ ರಾಜೀನಾಮೆಕಜರಾರೇ.. ನೆನಪಿಸಿಕೊಂಡ ಅಮಿತಾಭ್ ಬಚ್ಚನ್ ಒಬ್ಬ ರೋಗಿ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾನೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಹೋದಾಗ ಆತನಿಗೆ ಎದುರಾಗುವ ಸವಾಲುಗಳ ಬಗ್ಗೆ ಬರೆದಿರುವ ಅಮಿತಾಭ್, ‘ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಐಸಿಯುನಲ್ಲಿದ್ದು, ನುರಿತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿದ್ದು, ಡಿಸ್ಚಾರ್ಜ್ ಆಗಿ ಮನೆಗೆ ಮರಳುತ್ತಾನೆ. ಮನೆಗೆ ಮರಳುವುದು ದೈಹಿಕ ಹಾಗೂ ಮಾನಸಿಕವಾಗಿ ಅತ್ಯಂತ ಕಷ್ಟಕರವಾಗಿರುತ್ತದೆ’ ಎಂದು ಬರೆದುಕೊಂಡಿದ್ದಾರೆ. T 5806 - खेल समाप्त हो गया ! पर काम चल रहा है— Amitabh Bachchan (@SrBachchan) July 20, 2026 ರೋಗಿಗಳ ಮನಸ್ಥಿತಿಯ ಕುರಿತು ಮಾತನಾಡಿರುವ ಅವರು, ‘ಕೆಲವರು ಧೈರ್ಯದಿಂದ ಎಲ್ಲವನ್ನೂ ಎದುರಿಸಿ ಬದುಕುಳಿಯುತ್ತಾರೆ. ಕೆಲವರು ಮೃತಪಡುತ್ತಾರೆ. ಧೈರ್ಯದಿಂದ ಮೆಟ್ಟಿನಿಂತವರು ಚಾಂಪಿಯನ್ಗಳಾಗಿ ಉಳಿಯುತ್ತಾರೆ. ಉಳಿದವರು ಹಳೆಯ ನೆನಪುಗಳಲ್ಲೇ ಬದುಕುತ್ತಾರೆ’ ಎಂದು ಬರೆದಿದ್ದಾರೆ.ಅಚ್ಚರಿಯ ಬ್ಲಾಗ್ ಪೋಸ್ಟ್ ಅನ್ನು ಹಂಚಿಕೊಂಡ ಒಂದು ದಿನದ ಬಳಿಕ ಅಮಿತಾಭ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, ‘ಆಟ ಮುಗಿದಿದೆ! ಆದರೆ ಕೆಲಸ ಇನ್ನು ನಡೆಯುತ್ತಿದೆ’ ಎಂದು ಬರೆದುಕೊಂಡಿದ್ದರು. ಸದ್ಯ ಈ ಪೋಸ್ಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಬಳಿಕ ಅಂತಿಮವಾಗಿ ಇದು ಕೇವಲ ಉದಾಹರಣೆ ಎಂದು ಅಮಿತಾಭ್ ಹೇಳಿದ್ದಾರೆ. ಕಳೆದ ಮೇನಲ್ಲಿ ಅಮಿತಾಭ್ ಬಚ್ಚನ್, ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಾಗಿತ್ತು. ಬಳಿಕ ಆ ವರದಿಗಳು ಸುಳ್ಳು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಎಲ್ಲದರ ನಡುವೆ ಅಮಿತಾಭ್ ಅವರ ಪೋಸ್ಟ್ ಅಭಿಮಾನಿಗಳನ್ನು ಗೊಂದಲಕ್ಕೆ ದೂಡಿದೆ. ಐಸಿಯು ಪೋಸ್ಟ್ ಬಗ್ಗೆ ಅಮಿತಾಬ್ ಬಚ್ಚನ್ ಸ್ಪಷ್ಟನೆವೆರೈಟಿ ಇಂಡಿಯಾ ಜೊತೆ ಮಾತನಾಡಿರುವ ಅಮಿತಾಭ್, ‘ನಾನು ಆರೋಗ್ಯವಾಗಿದ್ದೇನೆ. ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿಲ್ಲ. ಈ ಪೋಸ್ಟ್ ಅನ್ನು ನೀವು ತಪ್ಪು ತಿಳಿದುಕೊಂಡಿದ್ದೀರಿ. ಶಸ್ತ್ರಚಿಕಿತ್ಸೆ ಅಥವಾ ಐಸಿಯು ನಂತರದ ರೋಗಿ ಮನೆಗೆ ಮರಳಿ ಎದುರಿಸಬೇಕಾದ ಕಷ್ಟವನ್ನು ನಾನು ಒಂದು ಉದಾಹರಣೆಯಾಗಿ ನೀಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.