ವಿಶ್ವ ಯುವ ಅಥ್ಲೆಟಿಕ್ಸ್: ಭಾರತ ತಂಡದಲ್ಲಿ ರಾಜ್ಯದ ಸಬೀರ್
ಬೆಂಗಳೂರು: ಕರ್ನಾಟಕದ 400 ಮೀ. ಓಟಗಾರ ಸಯೀದ್ ಸಬೀರ್ ಅವರು ಮುಂದಿನ ತಿಂಗಳು ಒರೆಗಾನ್ನಲ್ಲಿ ನಡೆಯಲಿರುವ ವಿಶ್ವ 20 ವರ್ಷದೊಳಗಿವರ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಭಾರತ 36 ಮಂದಿ ಅಥ್ಲೀಟುಗಳ ತಂಡವನ್ನು ಈ ಕೂಟಕ್ಕೆ ಕಳುಹಿಸುತ್ತಿದ್ದು ಸಬೀರ್ ಕರ್ನಾಟಕದ ಏಕೈಕ ಅಥ್ಲೀಟ್ ಆಗಿದ್ದಾರೆ.ಹುಬ್ಬಳ್ಳಿಯ ಶಬೀರ್ 4x400

ಬೆಂಗಳೂರು: ಕರ್ನಾಟಕದ 400 ಮೀ. ಓಟಗಾರ ಸಯೀದ್ ಸಬೀರ್ ಅವರು ಮುಂದಿನ ತಿಂಗಳು ಒರೆಗಾನ್ನಲ್ಲಿ ನಡೆಯಲಿರುವ ವಿಶ್ವ 20 ವರ್ಷದೊಳಗಿವರ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಭಾರತ 36 ಮಂದಿ ಅಥ್ಲೀಟುಗಳ ತಂಡವನ್ನು ಈ ಕೂಟಕ್ಕೆ ಕಳುಹಿಸುತ್ತಿದ್ದು ಸಬೀರ್ ಕರ್ನಾಟಕದ ಏಕೈಕ ಅಥ್ಲೀಟ್ ಆಗಿದ್ದಾರೆ.ಹುಬ್ಬಳ್ಳಿಯ ಶಬೀರ್ 4x400 ಮೀ. ರಿಲೇ ತಂಡದಲ್ಲಿದ್ದಾರೆ. ಈ ತಂಡವು ಮೊಹಮ್ಮದ್ ಅಶ್ಫಾಖ್, ಪಿಯುಷ್ ರಾಜ್, ಎಸ್.ರಝನಿತ್ ಕುಮಾರ್ ಅವರನ್ನು ಒಳಗೊಂಡಿದೆ. ಇದೇ ತಂಡ ಮೇ ತಿಂಗಳಲ್ಲಿ ಹಾಂಗ್ಕಾಂಗ್ನಲ್ಲಿ ನಡೆದ ಏಷ್ಯನ್ 20 ವರ್ಷದೊಳಗಿನವರ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು.18 ವರ್ಷ ವಯಸ್ಸಿನ ಸಬೀರ್ ಅವರು ವಿದ್ಯಾನಗರದಲ್ಲಿರುವ ಖೇಲೊ ಇಂಡಿಯಾದ ರಾಜ್ಯ ಶ್ರೇಷ್ಠತಾ ಕೇಂದ್ರದಲ್ಲಿ ವಸಂತ್ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ‘ತಂಡಕ್ಕೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದನ್ನು ನಿರೀಕ್ಷಿಸಿಯೂ ಇದ್ದೆ’ ಎಂದು ಸಬೀರ್ ಪ್ರತಿಕ್ರಿಯಿಸಿದರು. ರಾಜ್ಯ ಸರ್ಕಾರ ತಮ್ಮನ್ನು ರಾಜ್ಯದ ‘ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್’ಗೆ ಸೇರ್ಪಡೆ ಮಾಡಬಹುದು ಎಂಬ ವಿಶ್ವಾಸವಿದೆ ಎಂದರು.ಏಷ್ಯನ್ 20 ವರ್ಷದೊಳಗಿನವರ 3000 ಮೀ. ಸ್ಟೀಪಲ್ ಚೇಸರ್ ನಿಖಿಲ್ ಚಂದ್ರಶೇಖರ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅವರು ನೇರ ಅರ್ಹತಾ ಮಾನದಂಡ (8:39.79 ಸೆ.) ತಲುಪಲು ವಿಫಲರಾಗಿದ್ದಾರೆ.2024 ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ನಾಲ್ಕು ಮಂದಿ (200 ಮೀ. 100 ಮೀ. ಓಟದಲ್ಲಿ ಉನ್ನತಿ ಅಯ್ಯಪ್ಪ, 100 ಮೀ. ಓಟದಲ್ಲಿ ಸುಧೀಕ್ಷಾ ವಿ., ಲಾಂಗ್ಜಂಪ್ನಲ್ಲಿ ಪಾವನಾ ನಾಗರಾಜ್ ಮತ್ತು 4x100 ಮೀ. ರಿಲೆಯಲ್ಯಿ ಲಲ್ ಅನ್ನಾ ಕಾರ್ನೇಲಿಯೊ) ಕಣಕ್ಕಿಳಿದಿದ್ದರು.