ಟಿಪ್ಪು ಬೇಸಿಗೆ ಅರಮನೆಗೆ ಫ್ರಾನ್ಸ್ ರಾಯಭಾರಿ ಥಿಯೇರಿ ಮಥೋ ಭೇಟಿ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ (Srirangapatna) ಐತಿಹಾಸಿಕ ಸ್ಮಾರಕಗಳ ನಿರ್ವಹಣೆ ಹಾಗೂ ಸಂರಕ್ಷಣೆಯನ್ನು ಕಂಡು ಫ್ರಾನ್ಸ್ ದೇಶದ ರಾಯಭಾರಿ (French Ambassador) ಥಿಯೇರಿ ಮಥೋ (Thierry Matho) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀರಂಗಪಟ್ಟಣದ ಐತಿಹಾಸಿಕ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗೆ (ದರಿಯಾ ದೌಲತ್ ಬಾಗ್) ಫ್ರಾನ್ಸ್ ದೇಶದ ರಾಯಭಾರಿ ಥಿಯ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ (Srirangapatna) ಐತಿಹಾಸಿಕ ಸ್ಮಾರಕಗಳ ನಿರ್ವಹಣೆ ಹಾಗೂ ಸಂರಕ್ಷಣೆಯನ್ನು ಕಂಡು ಫ್ರಾನ್ಸ್ ದೇಶದ ರಾಯಭಾರಿ (French Ambassador) ಥಿಯೇರಿ ಮಥೋ (Thierry Matho) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀರಂಗಪಟ್ಟಣದ ಐತಿಹಾಸಿಕ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗೆ (ದರಿಯಾ ದೌಲತ್ ಬಾಗ್) ಫ್ರಾನ್ಸ್ ದೇಶದ ರಾಯಭಾರಿ ಥಿಯೇರಿ ಮಥೋ, ಅವರ ಪತ್ನಿ ಸೀಸೆಲ್ ಮಥೋ ಹಾಗೂ ಫ್ರಾನ್ಸ್ ದೇಶದ ಕನ್ಸಲ್ ಜನರಲ್ ಮಾರ್ಕ್ ಲಾಮಿ ಅವರು ಭೇಟಿ ನೀಡಿದರು. ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆಗೆ ನುಗ್ಗಲು ಯತ್ನಿಸಿದ ರೈತ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲು ಈ ಸಂದರ್ಭದಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆಯ ಸಹಾಯಕ ಪುರಾತತ್ವ ಅಧೀಕ್ಷಕ ಡಾ.ಆರ್.ರಮೇಶ್ ಮತ್ತು ಸಿಬ್ಬಂದಿ ಉದಯ್ ಗೈಡ್ರಾಗಿ ಉಪಸ್ಥಿತರಿದ್ದು, ಸ್ಮಾರಕದ ಇತಿಹಾಸವನ್ನು ವಿವರಿಸಿದರು. ಗಂಜಾಂ ರಸ್ತೆಯಲ್ಲಿರುವ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡಿದ ರಾಯಭಾರಿಗಳು, ಟಿಪ್ಪು ಮತ್ತು ಹೈದರ್ ಅಲಿ ಬಳಸುತ್ತಿದ್ದ ಯುದ್ಧ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು, ರೇಷ್ಮೆ ವಸ್ತ್ರಗಳು ಹಾಗೂ ಆಂಗ್ಲೋ-ಮೈಸೂರು ಕದನ ಬಿಂಬಿಸುವ ತೈಲ ವರ್ಣ ಚಿತ್ರಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಬೇಸಿಗೆ ಅರಮನೆಯ ಸುಂದರ ಉದ್ಯಾನ ಮತ್ತು ಹಸಿರು ಪರಿಸರದಲ್ಲಿ ವಿಹರಿಸಿದ ಅವರು, ಇಲಾಖೆಯ ವತಿಯಿಂದ ಸ್ಮಾರಕವನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವಸ್ತು ಸಂಗ್ರಹಾಲಯದ ದೀಕ್ಷಾ ಪುಸ್ತಕದಲ್ಲಿ ಅಭಿಪ್ರಾಯ ದಾಖಲಿಸಿದ ರಾಯಭಾರಿಗಳು, ಭಾರತ-ಫ್ರಾನ್ಸ್ ದೇಶಗಳ ನಡುವಿನ ಐತಿಹಾಸಿಕ ಸ್ನೇಹ ಬಾಂಧವ್ಯವನ್ನು ಸ್ಮರಿಸುತ್ತಾ, ಸ್ಮಾರಕದ ನಿರ್ವಹಣೆ ಹಾಗೂ ಪುನರುಜ್ಜೀವನ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.ಇದನ್ನೂ ಓದಿ: ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂವಾದ, ಪಾರದರ್ಶಕತೆ ಮೂಲಕ ಪರಿಹಾರ: ಹಿಂಸಾಚಾರ ಖಂಡಿಸಿದ ಎಬಿವಿಪಿ