ಮೈಸೂರು: ಓಣಂ ಪ್ರಯುಕ್ತ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ
ಮೈಸೂರು: ಓಣಂ ಹಬ್ಬದ ವೇಳೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಹಾಗೂ ಸುಗಮ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು, ನೈರೈತ್ಯ ರೈಲ್ವೆಯು ಮೈಸೂರು–ಕಣ್ಣೂರು–ಬೆಂಗಳೂರು ಕಂಟೋನ್ಮೆಂಟ್ ನಡುವೆ ತಲಾ ಎರಡು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಕಾರ್ಯಾಚರಣೆ ನಡೆಸಲಿದೆ.ರೈಲು ಸಂಖ್ಯೆ 06227 ಮೈಸೂರು–ಕಣ್ಣೂರು ವಿಶೇಷ ಎಕ್ಸ್ಪ್ರೆಸ್ ಆ.25ರಂದು (ಮಂಗಳವಾರ) ರಾತ್ರಿ 10
ಮೈಸೂರು: ಓಣಂ ಹಬ್ಬದ ವೇಳೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಹಾಗೂ ಸುಗಮ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು, ನೈರೈತ್ಯ ರೈಲ್ವೆಯು ಮೈಸೂರು–ಕಣ್ಣೂರು–ಬೆಂಗಳೂರು ಕಂಟೋನ್ಮೆಂಟ್ ನಡುವೆ ತಲಾ ಎರಡು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಕಾರ್ಯಾಚರಣೆ ನಡೆಸಲಿದೆ.ರೈಲು ಸಂಖ್ಯೆ 06227 ಮೈಸೂರು–ಕಣ್ಣೂರು ವಿಶೇಷ ಎಕ್ಸ್ಪ್ರೆಸ್ ಆ.25ರಂದು (ಮಂಗಳವಾರ) ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2ಕ್ಕೆ ಕಣ್ಣೂರು ತಲುಪಲಿದೆ.ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06228 ಕಣ್ಣೂರು–ಬೆಂಗಳೂರು ದಂಡು ವಿಶೇಷ ಎಕ್ಸ್ಪ್ರೆಸ್ ದಿನಾಂಕ ಆ.26ರಂದು ಸಂಜೆ 6.25ಕ್ಕೆ ಕಣ್ಣೂರಿನಿಂದ ಹೊರಟು, ಮರುದಿನ 8.35ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.ರೈಲು ಸಂಖ್ಯೆ 06229 ಮೈಸೂರು–ಕಣ್ಣೂರು ವಿಶೇಷ ಎಕ್ಸ್ಪ್ರೆಸ್ ಆ.29ರಂದು (ಶನಿವಾರ) ರಾತ್ರಿ 11.55ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 5.50ಕ್ಕೆ ಕಣ್ಣೂರು ತಲುಪಲಿದೆ.ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06230 ಕಣ್ಣೂರು–ಬೆಂಗಳೂರು ದಂಡು ವಿಶೇಷ ಎಕ್ಸ್ಪ್ರೆಸ್ ಆ.30ರಂದು (ಭಾನುವಾರ) ಸಂಜೆ 7.45ಕ್ಕೆ ಕಣ್ಣೂರಿನಿಂದ ಹೊರಟು ಮರುದಿನ ಬೆಳಿಗ್ಗೆ 10ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.ಈ ರೈಲುಗಳು ಮಾರ್ಗ ಮಧ್ಯೆ ಮಂಡ್ಯ, ಕೆಎಸ್ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪೂರು, ಪೊದನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಶೋರನೂರು ಜಂಕ್ಷನ್, ತಿರೂರು, ಕೋಝಿಕ್ಕೋಡ್, ವಡಕರ ಮತ್ತು ತಲಶ್ಶೇರಿ ನಿಲ್ದಾಣಗಳಲ್ಲಿ ನಿಲ್ಲಿಸಲಿವೆ. ಹಿಂತಿರುಗುವ ದಿಕ್ಕಿನಲ್ಲಿ ಸಂಚರಿಸುವ ಕಣ್ಣೂರು–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಪ್ರಯಾಣ ಅಂತ್ಯಗೊಳಿಸಲಿದೆ.ಈ ರೈಲು ಒಟ್ಟು 20 ಬೋಗಿಗಳು ಇರಲಿದ್ದು, ಅವುಗಳಲ್ಲಿ 1 ಎಸಿ ಟು ಟಯರ್ ಬೋಗಿ, 2 ಎಸಿ ತ್ರಿ ಟಯರ್ ಬೋಗಿಗಳು, 9 ಸ್ಲೀಪರ್ ಕ್ಲಾಸ್ ಬೋಗಿಗಳು, 6 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಲಗೇಜ್-ಕಮ್-ಬ್ರೇಕ್ ವ್ಯಾನ್ಗಳನ್ನು ಒಳಗೊಂಡಿರಲಿದೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.