ಕಾರವಾರದ ಕದಂಬ ನೌಕಾನೆಲೆಯಲ್ಲಿ 'ಐಎನ್ಎಸ್ ಮಾಲ್ವಣ್' ನೌಕಾಪಡೆಗೆ ಸೇರ್ಪಡೆ
ಕಾರವಾರ: ಜಲಾಂತರ್ಗಾಮಿಗಳನ್ನು ಗುರುತಿಸಿ, ಹೊಡೆದುರುಳಿಸ ಬಲ್ಲ ಸಾಮರ್ಥ್ಯದ ಮಾಹೆ ಶ್ರೇಣಿಯ ಎರಡನೇ ಯುದ್ಧನೌಕೆ ‘ಐಎನ್ಎಸ್ ಮಾಲ್ವಣ್’ ಬುಧವಾರ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಂಡಿತು. ನೌಕಾನೆಲೆಯ ಹಡಗುಕಟ್ಟೆಯಲ್ಲಿ ನಡೆದ ಸಮಾರಂಭದಲ್ಲಿ ಯುದ್ಧನೌಕೆಯ ಮೇಲೆ ಧ್ವಜಾರೋಹಣ ನೆರವೇರಿಸಿ, ಈ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.ಅಧ್ಯಕ್ಷತೆ ವಹಿಸಿ

ಕಾರವಾರ: ಜಲಾಂತರ್ಗಾಮಿಗಳನ್ನು ಗುರುತಿಸಿ, ಹೊಡೆದುರುಳಿಸ ಬಲ್ಲ ಸಾಮರ್ಥ್ಯದ ಮಾಹೆ ಶ್ರೇಣಿಯ ಎರಡನೇ ಯುದ್ಧನೌಕೆ ‘ಐಎನ್ಎಸ್ ಮಾಲ್ವಣ್’ ಬುಧವಾರ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಂಡಿತು. ನೌಕಾನೆಲೆಯ ಹಡಗುಕಟ್ಟೆಯಲ್ಲಿ ನಡೆದ ಸಮಾರಂಭದಲ್ಲಿ ಯುದ್ಧನೌಕೆಯ ಮೇಲೆ ಧ್ವಜಾರೋಹಣ ನೆರವೇರಿಸಿ, ಈ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಾಯುಪಡೆಯ ಮುಖ್ಯಸ್ಥ ಎ.ಪಿ.ಸಿಂಗ್ ಮಾತನಾಡಿ, ‘ಐಎನ್ಎಸ್ ಮಾಲ್ವಣ್ ಸೇರ್ಪಡೆಯು ದೇಶದ ಕರಾವಳಿ ರಕ್ಷಣೆಯನ್ನು ಇನ್ನಷ್ಟು ಬಲಪಡಿಸಲಿದೆ. ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಸಶಸ್ತ್ರ ಪಡೆಗಳ ನಡುವಿನ ಸಮನ್ವಯ ವನ್ನು ಇನ್ನಷ್ಟು ಬಲಗೊಳಿಸಲಿದೆ’ ಎಂದರು.‘ನೌಕಾಪಡೆಯು ಸಮುದ್ರ ಮಾರ್ಗ ರಕ್ಷಣೆಯನ್ನು ಪರಿಣಾಮಕಾರಿಯಾಗಿ ಮಾಡುತ್ತಿರುವುದರಿಂದ ವಿದೇಶಗಳೊಂದಿಗೆ ವಾಣಿಜ್ಯ ವಹಿವಾಟು ವೃದ್ಧಿಸಿದೆ. ಭವಿಷ್ಯದಲ್ಲಿ ಯುದ್ಧ ನಡೆದರೆ ಒಂದು ಪಡೆಯ ನಿರ್ದಿಷ್ಟ ಹೋರಾಟ ಆಗದು. ಎಲ್ಲ ಪಡೆಗಳು ಒಟ್ಟಾಗಿ ಹೋರಾಡಬೇಕು. ಬಲಿಷ್ಠ ದೇಶ ನಿರ್ಮಾಣಕ್ಕೆ ಪರಸ್ಪರ ಸಮನ್ವಯ ಮುಖ್ಯ’ ಎಂದು ತಿಳಿಸಿದರು.ಪಶ್ಚಿಮ ನೌಕಾ ಪಡೆಯ ಮುಖ್ಯಸ್ಥ ಸಂಜಯ್ ವಾತ್ಸಾಯನ್ ಮಾತನಾಡಿ, ‘ಆತ್ಮನಿರ್ಭರ ಭಾರತ ಯೋಜನೆಯಡಿ ನಿರ್ಮಾಣಗೊಂಡ ನೌಕೆಯು ಇದೇ ವರ್ಷ ಭಾರತೀಯ ನೌಕಾಪಡೆ ಸಿದ್ಧಪಡಿಸಿ, ಲೋಕಾರ್ಪಣೆ ಆದ 7ನೇ ನೌಕೆ ಆಗಿದೆ. ಇನ್ನೂ 12 ಯುದ್ಧನೌಕೆಗಳು ನೌಕಾಪಡೆಗೆ ಸೇರ್ಪಡೆ ಆಗುವ ಹಂತದಲ್ಲಿವೆ’ ಎಂದು ಹೇಳಿದರು.ಮಾಲ್ವಣ್ ವೈಶಿಷ್ಟ್ಯ'ಕೇರಳದ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ 2023ರ ಫೆಬ್ರವರಿ 21ರಂದು ನೌಕೆ ನಿರ್ಮಾಣ ಆರಂಭವಾಯಿತು. 2025ರ ಡಿಸೆಂಬರ್ 22ರಂದು ಮೊದಲ ಪ್ರಾಯೋಗಿಕ ಸಮುದ್ರಯಾನ ನಡೆಸಿತು. ನೌಕೆ ನಿರ್ಮಾಣಕ್ಕೆ ಶೇ 80ಕ್ಕಿಂತ ಹೆಚ್ಚು ಸ್ವದೇಶಿ ಸಂಪನ್ಮೂಲಗಳನ್ನೇ ಬಳಸಲಾಗಿದೆ.ಅಂದಾಜು ₹789 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೌಕೆಯು 78.8 ಮೀಟರ್ ಉದ್ದ, 11.26 ಮೀ. ಅಗಲವಿದ್ದು, 896 ಟನ್ ತೂಕ ಹೊಂದಿದೆ. ನೀರಿನೊಳಗೆ ಇರುವ ಜಲಾಂತರ್ಗಾಮಿಗಳನ್ನು ಗುರುತಿಸಲು ಅಭಯ್ ಹೆಸರಿನ ಸುಧಾರಿತ ಸೋನಾರ್ ವ್ಯವಸ್ಥೆಯನ್ನು ಹೊಂದಿದೆ. ಹಗುರವಾದ ಟೊರ್ಪೆಡೊಗಳು, 30 ಎಂ.ಎಂ ಗನ್ ಸೇರಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ.'ನೌಕಾಪಡೆ ಬಲಗೊಳಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಗೌರವಾರ್ಥವಾಗಿ ಮರಾಠಾ ಸಾಮ್ರಾಜ್ಯದ ಪ್ರಮುಖ ನೌಕಾನೆಲೆಯಾಗಿದ್ದ ಮಾಲ್ವಣ್ ಹೆಸರನ್ನು ಇಡಲಾಗಿದೆ. ಗುಪ್ತ ಕಾರ್ಯಾಚರಣೆ, ಚುರುಕುತನದ ಸಂಕೇತವಾಗಿ ವ್ಯಾಘ್ರ ನಖದ (ಹುಲಿ ಉಗುರು) ಲಾಂಛನವನ್ನು ಯುದ್ಧನೌಕೆ ಒಳಗೊಂಡಿದೆ' ಎಂಬುದಾಗಿ ನೌಕಾಪಡೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.