ನಾಳೆಯಿಂದ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ – ಕೇವಲ 10 ವಿಭಾಗಳಲ್ಲಿ ಸ್ಪರ್ಧೆ
– ಕಣಕ್ಕಿಳಿಯಲಿದೆ 126 ಸದಸ್ಯರ ಭಾರತೀಯ ಪಡೆ – ಭಾರತಕ್ಕೆ ಪದಕ ತಂದಿದ್ದ ಕ್ರೀಡೆಗಳು ಔಟ್ ಗ್ಲಾಸ್ಗೋ: ಸ್ಕಾಟ್ಲ್ಯಾಂಡ್ನ ಬಂದರು ನಗರಿ ಗ್ಲಾಸ್ಗೋದಲ್ಲಿ(Glasgow) ಕಾಮನ್ವೆಲ್ತ್ ಗೇಮ್ಸ್ 2026 (Commonwealth Games) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಆಗಸ್ಟ್ 2ರವರೆಗೆ ಗೇಮ್ಸ್ ನಡೆಯಲಿದ್ದು ಜಗತ್ತಿನ ಪ್ರಮುಖ ಕಾಮನ್ವೆಲ್ತ್ ರಾಷ್ಟ್ರಗಳ ಸುಮಾರು

– ಕಣಕ್ಕಿಳಿಯಲಿದೆ 126 ಸದಸ್ಯರ ಭಾರತೀಯ ಪಡೆ – ಭಾರತಕ್ಕೆ ಪದಕ ತಂದಿದ್ದ ಕ್ರೀಡೆಗಳು ಔಟ್ ಗ್ಲಾಸ್ಗೋ: ಸ್ಕಾಟ್ಲ್ಯಾಂಡ್ನ ಬಂದರು ನಗರಿ ಗ್ಲಾಸ್ಗೋದಲ್ಲಿ(Glasgow) ಕಾಮನ್ವೆಲ್ತ್ ಗೇಮ್ಸ್ 2026 (Commonwealth Games) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಆಗಸ್ಟ್ 2ರವರೆಗೆ ಗೇಮ್ಸ್ ನಡೆಯಲಿದ್ದು ಜಗತ್ತಿನ ಪ್ರಮುಖ ಕಾಮನ್ವೆಲ್ತ್ ರಾಷ್ಟ್ರಗಳ ಸುಮಾರು 3 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು 10 ಪ್ರಮುಖ ಕ್ರೀಡೆಗಳ 215 ವಿಭಾಗಗಳಲ್ಲಿ ಸೆಣಸಾಡಲಿದ್ದಾರೆ. ಈ ಕ್ರೀಡಾಕೂಟದ ಪಟ್ಟಿಯಿಂದ ಭಾರತದ(India) ‘ಪದಕದ ಗಣಿ’ ಎನಿಸಿಕೊಂಡಿದ್ದ ಕ್ರೀಡೆಗಳನ್ನು ಕೈಬಿಡಲಾಗಿದೆ. ವೆಚ್ಚವನ್ನು ಕಡಿಮೆ ಮಾಡಲು ಕ್ರೀಡಾಕೂಟದ ಆಯೋಜಕರು ಕೇವಲ 10 ಪ್ರಮುಖ ಕ್ರೀಡೆಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಈ ಬಾರಿಯ ಕ್ರೀಡಾಕೂಟದಲ್ಲಿ 126 ಅಥ್ಲೀಟ್ಗಳನ್ನೊಳಗೊಂಡ ಬಲವಾದ ಭಾರತೀಯ ಪಡೆ ಪದಕಕ್ಕಾಗಿ ಹೋರಾಟ ನಡೆಸಲಿದೆ. ಯಾರ ಮೇಲೆ ನಿರೀಕ್ಷೆಯಿದೆ? ನೀರಜ್ ಚೋಪ್ರಾ (ಜಾವೆಲಿನ್ ಥ್ರೋ): ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದ ಭಾರತದ ಅತಿದೊಡ್ಡ ಭರವಸೆ. ಮೀರಾಬಾಯಿ ಚಾನು (ವೇಟ್ಲಿಫ್ಟಿಂಗ್): ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕದ ನಿರೀಕ್ಷೆ ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್): ರಿಂಗ್ನಲ್ಲಿ ಭಾರತದ ಪದಕದ ಕನಸನ್ನು ಜೀವಂತವಾಗಿರಿಸಿರುವ ಸ್ಟಾರ್ ಬಾಕ್ಸರ್. ಮುರಳಿ ಶ್ರೀಶಂಕರ್ (ಲಾಂಗ್ ಜಂಪ್): ಅಥ್ಲೆಟಿಕ್ಸ್ನಲ್ಲಿ ಪದಕದ ಭರವಸೆ ಮೂಡಿಸಿರುವ ಯುವ ತಾರೆ. ಭಾರತಕ್ಕೆ ನಷ್ಟ ಎಷ್ಟು? ಆಯೋಜಕರ ಬಜೆಟ್ ಕೊರತೆಯಿಂದಾಗಿ ಈ ಬಾರಿ ಪಂದ್ಯಾವಳಿಯ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಪರಿಣಾಮವಾಗಿ, 2022ರ ಬರ್ಮಿಂಗ್ಹ್ಯಾಮ್ ಗೇಮ್ಸ್ನಲ್ಲಿ ಭಾರತಕ್ಕೆ ಬರಪೂರ ಪದಕ ತಂದುಕೊಟ್ಟಿದ್ದ ಪ್ರಮುಖ ಕ್ರೀಡೆಗಳನ್ನೇ ಕೈಬಿಡಲಾಗಿದೆ. ಇದನ್ನೂ ಓದಿ: FIFA World Cup: ಚಾಂಪಿಯನ್ ಸ್ಪೇನ್ಗೆ ಸಿಕ್ಕಿದ್ದೆಷ್ಟು? ಬಹುಮಾನಕ್ಕೆ ಕೋಟಿ ಕೋಟಿ ಸುರಿದ ಫಿಫಾ ಕುಸ್ತಿ: 2022ರಲ್ಲಿ ಬರೆದಿದ್ದ 12 ಪದಕಗಳ (6 ಚಿನ್ನ) ಇತಿಹಾಸ ಈ ಬಾರಿ ಪುನರಾವರ್ತನೆಯಾಗುವುದಿಲ್ಲ. ಬ್ಯಾಡ್ಮಿಂಟನ್: ಪಿ.ವಿ. ಸಿಂಧು, ಲಕ್ಷ್ಯ ಸೇನ್ ಹಾಗೂ ಸಾತ್ವಿಕ್-ಚಿರಾಕ್ ಜೋಡಿ ಸೇರಿ 3 ಚಿನ್ನದೊಂದಿಗೆ 6 ಪದಕ ತಂದಿದ್ದರು. ಹಾಕಿ: ಪುರುಷ ಮತ್ತು ಮಹಿಳಾ ತಂಡಗಳ ಪದಕದ ಹ್ಯಾಟ್ರಿಕ್ ಅವಕಾಶ ತಪ್ಪಿದೆ. ಟೇಬಲ್ ಟೆನಿಸ್: ಶರತ್ ಕಮಲ್ ನೇತೃತ್ವದಲ್ಲಿ 7 ಪದಕಗಳು ಬಂದಿದ್ದವು. 2022ರ ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ಭಾರತ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚು ಸೇರಿ ಒಟ್ಟು 61 ಪದಕಗಳೊಂದಿಗೆ 4ನೇ ಸ್ಥಾನ ಪಡೆದಿತ್ತು. ಆದರೆ ಕೈಬಿಡಲಾದ ಈ 4 ಕ್ರೀಡೆಗಳಿಂದಲೇ ಭಾರತಕ್ಕೆ 30ಕ್ಕೂ ಹೆಚ್ಚು ಪದಕಗಳು ಬಂದಿದ್ದವು! ಕೈಬಿಡಲಾದ ಪ್ರಮುಖ ಕ್ರೀಡೆಗಳು: ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಟೇಬಲ್ ಟೆನಿಸ್, ಶೂಟಿಂಗ್, ಕ್ರಿಕೆಟ್, ಸ್ಕ್ವಾಷ್ ಕ್ರೀಡೆಗಳನ್ನು ಕೈಬಿಟ್ಟಿದ್ದು ಯಾಕೆ? ಆರಂಭದಲ್ಲಿ ಆಸ್ಟ್ರೇಲಿಯಾದ ‘ವಿಕ್ಟೋರಿಯಾ’ ರಾಜ್ಯವು ಈ ಕ್ರೀಡಾಕೂಟವನ್ನು ಆಯೋಜಿಸಬೇಕಿತ್ತು. ಆದರೆ ಅತಿಯಾದ ಖರ್ಚಿನ ಕಾರಣಕ್ಕೆ ಆಸ್ಟ್ರೇಲಿಯಾ ಹಿಂದೆ ಸರಿಯಿತು. ಕೊನೆಯ ಕ್ಷಣದಲ್ಲಿ ಗ್ಲಾಸ್ಗೋ (ಸ್ಕಾಟ್ಲ್ಯಾಂಡ್) ಕ್ರೀಡಾಕೂಟ ಆಯೋಜಿಸಲು ಮುಂದೆ ಬಂದಿದ್ದು, ಕಡಿಮೆ ಬಜೆಟ್ನಲ್ಲಿ ಪಂದ್ಯಾವಳಿ ಮುಗಿಸಲು ನಾಲ್ಕೇ ಕ್ರೀಡಾಂಗಣಗಳಿಗೆ ಪಂದ್ಯಗಳನ್ನು ಸೀಮಿತಗೊಳಿಸಿ, ಕ್ರೀಡೆಗಳ ಸಂಖ್ಯೆಯನ್ನು ಕಡಿತಗೊಳಿಸಿದೆ. ಯಾವ ಕ್ರೀಡೆಗಳು ಇರುತ್ತವೆ? ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ಬಾಕ್ಸಿಂಗ್, ವೇಟ್ಲಿಫ್ಟಿಂಗ್, ಜಿಮ್ನಾಸ್ಟಿಕ್ಸ್, ಜೂಡೋ, ಟ್ರ್ಯಾಕ್ ಸೈಕ್ಲಿಂಗ್, ಬಾಸ್ಕೆಟ್ಬಾಲ್, ನೆಟ್ಬಾಲ್, ಲಾನ್ ಬೌಲ್ಸ್.