ಎಟರ್ನಲ್ ಕಂಪನಿಯ ಲಾಭ ನಾಲ್ಕು ಪಟ್ಟು ಏರಿಕೆ
ನವದೆಹಲಿ: ಜೊಮಾಟೊ ಮತ್ತು ಬ್ಲಿಂಕಿಟ್ ಮಾಲೀಕತ್ವ ಹೊಂದಿರುವ ಎಟರ್ನಲ್ ಕಂಪನಿಯು ಜೂನ್ ತ್ರೈಮಾಸಿಕದಲ್ಲಿ ₹92 ಕೋಟಿ ಲಾಭ ಕಂಡಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಲಾಭ ನಾಲ್ಕು ಪಟ್ಟು ಹೆಚ್ಚು.ಕ್ವಿಕ್–ಕಾಮರ್ಸ್ ವಹಿವಾಟಿನಲ್ಲಿ ವರಮಾನ ಹೆಚ್ಚಳವು ಲಾಭದ ಏರಿಕೆಗೆ ಒಂದು ಪ್ರಮುಖ ಕಾರಣವಾಗಿ ಒದಗಿಬಂದಿದೆ. ಹಿಂದಿನ ವರ್ಷದ ಜೂನ್ ತ್ರ

ನವದೆಹಲಿ: ಜೊಮಾಟೊ ಮತ್ತು ಬ್ಲಿಂಕಿಟ್ ಮಾಲೀಕತ್ವ ಹೊಂದಿರುವ ಎಟರ್ನಲ್ ಕಂಪನಿಯು ಜೂನ್ ತ್ರೈಮಾಸಿಕದಲ್ಲಿ ₹92 ಕೋಟಿ ಲಾಭ ಕಂಡಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಲಾಭ ನಾಲ್ಕು ಪಟ್ಟು ಹೆಚ್ಚು.ಕ್ವಿಕ್–ಕಾಮರ್ಸ್ ವಹಿವಾಟಿನಲ್ಲಿ ವರಮಾನ ಹೆಚ್ಚಳವು ಲಾಭದ ಏರಿಕೆಗೆ ಒಂದು ಪ್ರಮುಖ ಕಾರಣವಾಗಿ ಒದಗಿಬಂದಿದೆ. ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ₹25 ಕೋಟಿ ನಿವ್ವಳ ಲಾಭ ವರದಿ ಮಾಡಿತ್ತು.ಕಂಪನಿಯು ಈ ಜೂನ್ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ವರಮಾನದ ರೂಪದಲ್ಲಿ ₹20,211 ಕೋಟಿ ಗಳಿಸಿದೆ. ಇದು ಹಿಂದಿನ ಬಾರಿ ₹7,167 ಕೋಟಿ ಆಗಿತ್ತು.ಕಂಪನಿಯು ರೆಸ್ಟಾರೆಂಟ್ಗಳಿಂದ ಗ್ರಾಹಕರಿಗೆ ಆಹಾರ ವಸ್ತುಗಳನ್ನು ತಲುಪಿಸುವ ವಹಿವಾಟಿನಿಂದ (ಜೊಮಾಟೊ) ಈ ತ್ರೈಮಾಸಿಕದಲ್ಲಿ ₹10,769 ಕೋಟಿ ವರಮಾನ ಗಳಿಸಿದೆ. ಕ್ವಿಕ್–ಕಾಮರ್ಸ್ (ಬ್ಲಿಂಕಿಟ್) ವಹಿವಾಟಿನಿಂದ ₹17,132 ಕೋಟಿ ಗಳಿಸಿದೆ.
Read the complete story at Prajavani