ಬೆಂಗಳೂರು–ಮೈಸೂರು ಹೆದ್ದಾರಿ ಶುಲ್ಕ ಮತ್ತೆ ದುಬಾರಿ: ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೇಲಿನ ಟೋಲ್ ಶುಲ್ಕ ಮತ್ತೆ ದುಬಾರಿಯಾಗಿದೆ.ಐದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಶುಲ್ಕವನ್ನು ಹೆಚ್ಚಿಸಲಾಗಿದೆ.ಒಂದು ಬಾರಿಗೆ ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳ ಪ್ರವೇಶ ಶುಲ್ಕವನ್ನು ₹ 355ರಿಂದ 370ಕ್ಕೆ ಮಂಗಳವಾರದಿಂದಲೇ ಹೆಚ್ಚಿಸಲಾಗಿದೆ. 56.2 ಕಿಮೀ

ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೇಲಿನ ಟೋಲ್ ಶುಲ್ಕ ಮತ್ತೆ ದುಬಾರಿಯಾಗಿದೆ.ಐದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಶುಲ್ಕವನ್ನು ಹೆಚ್ಚಿಸಲಾಗಿದೆ.ಒಂದು ಬಾರಿಗೆ ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳ ಪ್ರವೇಶ ಶುಲ್ಕವನ್ನು ₹ 355ರಿಂದ 370ಕ್ಕೆ ಮಂಗಳವಾರದಿಂದಲೇ ಹೆಚ್ಚಿಸಲಾಗಿದೆ. 56.2 ಕಿಮೀ ಅಂತರದ ಕಣಿಮಿಣಿಕೆ–ಶೇಷಗಿರಿ ಹಳ್ಳಿ ಪ್ಲಾಜಾದ ಶುಲ್ಕ ₹170ರಿಂದ 185ಕ್ಕೆ ಹೆಚ್ಚಳವಾಗಿದೆ. ಗಣಂಗೂರು ಪ್ಲಾಜಾ ಮೂಲಕ ಸಂಚರಿಸುವ ಕಾರುಗಳ ಪ್ರವೇಶ ಶುಲ್ಕವನ್ನು ₹ 175ರಿಂದ ₹ 185ಕ್ಕೆ ಹೆಚ್ಚಿಸಲಾಗಿದೆ. ಬೆಂಗಳೂರು–ಮೈಸೂರು ಮಧ್ಯೆ ಒಮ್ಮೆ ಹೋಗಿ ಬರುವ ಶುಲ್ಕ ₹ 500 ಆಗಿದೆ.ಲಘು ವಾಣಿಜ್ಯ ವಾಹನಗಳು, ಲಘು ಸರಕು ಸಾಗಣೆ ವಾಹನಗಳು ಹಾಗೂ ಮಿನಿ ಬಸ್ಗಳಿಗೆ ಒಂದು ಕಡೆಯ ಸಂಚಾರಕ್ಕೆ ₹ 295, ಎರಡು ಬಾರಿಗೆ ₹ 445 ನಿಗದಿಯಾಗಿದೆ. ಟ್ರಕ್ಗಳು ಮತ್ತು ಬಸ್ಗಳಿಗೆ ಒಂದು ಬಾರಿಗೆ ₹ 620, ಎರಡು ಬಾರಿಗೆ ₹ 930 ನಿಗದಿಯಾಗಿದೆ. ಮೂರು ಆಕ್ಸೆಲ್ಗಳ ವಾಣಿಜ್ಯ ವಾಹನಗಳು, ಕಟ್ಟಡ ನಿರ್ಮಾಣ ಯಂತ್ರಗಳು ಹಾಗೂ ಅತಿಭಾರದ ವಾಹನಗಳ ಪ್ರವೇಶ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಜೊತೆಗೆ, ಸ್ಯಾಟಲೈಟ್ ಟೌನ್ ರಿಂಗ್ ರೋಡ್ನ ದಾಬಸ್ಪೇಟೆ–ದೊಡ್ಡಬಳ್ಳಾಪುರ ನಡುವಿನ 80 ಕಿ.ಮೀ ಸಂಚಾರ ಶುಲ್ಕವನ್ನೂ ಬುಧವಾರದಿಂದಲೇ ಹೆಚ್ಚಿಸಲಾಗಿದೆ. ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ಕಾರು, ವ್ಯಾನ್, ಜೀಪ್ ಸೇರಿ ಲಘು ಮೋಟಾರು ವಾಹನಗಳು ಒಮ್ಮೆ ಸಂಚರಿಸಲು₹ 105ರ ಬದಲಿಗೆ ₹ 110 ಹಾಗೂ ಎರಡು ಬಾರಿ ಸಂಚರಿಸಲು ₹ 165 ಪಾವತಿಸಬೇಕು. ನಲ್ಲೂರು ಪ್ಲಾಜಾದಲ್ಲಿ ಒಮ್ಮೆ ಸಂಚರಿಸಲು ₹ 85 ಹಾಗೂ ಎರಡು ಬಾರಿಗೆ ₹130 ಪಾವತಿಸಬೇಕು. ಇತರೆ ವಾಹನಗಳಿಗೂ ಶುಲ್ಕ ಹೆಚ್ಚಿಸಲಾಗಿದೆ. ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಕಳೆದ ಏಪ್ರಿಲ್ 1ರಿಂದ ಶುಲ್ಕ ಹೆಚ್ಚಿಸಿದ ಬಳಿಕ, ಈಗ ಎರಡನೇ ಬಾರಿಗೆ ಶುಲ್ಕ ಹೆಚ್ಚಿಸಲಾಗಿದೆ.‘ಸಗಟು ಬೆಲೆ ಸೂಚ್ಯಂಕವು ಮತ್ತೆ ಪರಿಷ್ಕರಣೆಗೊಂಡಿದ್ದರಿಂದ ದರ ಏರಿಕೆಯು ಅನಿವಾರ್ಯವಾಗಿತ್ತು. ಇದು ಹೆಚ್ಚೇನಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ಬೆಂಗಳೂರು–ಹೈದರಾಬಾದ್ ಹೆದ್ದಾರಿ ಶುಲ್ಕವನ್ನೂ ಪ್ರಾಧಿಕಾರವು ಬುಧವಾರದಿಂದಲೇ ಹೆಚ್ಚಿಸಿದ್ದು, ಕಾರು ಒಮ್ಮೆ ಸಂಚರಿಸಲು ₹125, ದ್ವಿಮುಖ ಸಂಚಾರಕ್ಕೆ ₹ 185 ಅನ್ನು ಬಾಗೇಪಲ್ಲಿ ಪ್ಲಾಜಾದಲ್ಲಿ ಪಾವತಿಸಬೇಕು. ಬೆಂಗಳೂರು–ಕನಕಪುರ–ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಅಟ್ಟಿಗೂಳಿಪುರ, ಸತ್ಯಗಾಲ ಮತ್ತು ಸೋಮನಹಳ್ಳಿ ಪ್ಲಾಜಾಗಳಲ್ಲಿ ಇದು ಮಂಗಳವಾರದಿಂದಲೆ ಜಾರಿಗೊಂಡಿದೆ.ಕಲಬುರಗಿಯ ಹರವಾಳ, ವಿಜಯಪುರ –ಸಂಕೇಶ್ವರ ವಿಭಾಗದ ರಾಂಪುರ, ಬೀದರ್–ಹುಮ್ನಾಬಾದ್ ವಿಭಾಗದ ಖಾದೇರ್ನಗರ್ ಮತ್ತು ಕಣ್ಣೋಲಿ ಪ್ಲಾಜಾಗಳಲ್ಲೂ ದರ ಏರಿಕೆಯಾಗಿದೆ.