ಅಸ್ಸಾಂ ಪ್ರವಾಹ: ಒಂದೇ ದಿನ 21 ಸಾವು
ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ತೀವ್ರಗೊಂಡಿದೆ. ಮಂಗಳವಾರ ರಾಜ್ಯದ 16 ಜಿಲ್ಲೆಗಳ 21ಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದು, ಸುಮಾರು 5.64 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ತಡರಾತ್ರಿ ಬಿಡುಗಡೆ ಮಾಡಿದ ಮಾಹಿತಿಯಂತೆ, ರಾಜ್ಯದ ಶಿವಸಾಗರ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದೆ

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ತೀವ್ರಗೊಂಡಿದೆ. ಮಂಗಳವಾರ ರಾಜ್ಯದ 16 ಜಿಲ್ಲೆಗಳ 21ಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದು, ಸುಮಾರು 5.64 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ತಡರಾತ್ರಿ ಬಿಡುಗಡೆ ಮಾಡಿದ ಮಾಹಿತಿಯಂತೆ, ರಾಜ್ಯದ ಶಿವಸಾಗರ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದೆ. ಅಲ್ಲಿ 24 ಗಂಟೆಗಳಲ್ಲಿ 13 ಸಾವು ಸಂಭವಿಸಿದೆ ಎಂದು ಹೇಳಿದೆ.ಚರಾಯಿದೇವ್ ಜಿಲ್ಲೆಯಲ್ಲಿ ಐವರು, ಗೋಲಾಘಾಟ್ ಜಿಲ್ಲೆಯಲ್ಲಿ ಇಬ್ಬರು ಮತ್ತು ಜೊರ್ಹಾಟ್ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ. ಇದರೊಂದಿಗೆ ಈ ವರ್ಷ ರಾಜ್ಯದಲ್ಲಿ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಿಗೆ ಬುಧವಾರದಿಂದ ಭೇಟಿ ನೀಡುವುದಾಗಿ ಮತ್ತು ಪರಿಹಾರ ಹಾಗೂ ರಕ್ಷಣಾ ಸಂಬಂಧಿತ ಕ್ರಮಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.ಐಸಿಆರ್ ಸೌಲಭ್ಯ ಸಕ್ರಿಯ ಶಿವಸಾಗರ್ ಚರಾಯಿದೇವ್ ಮತ್ತು ಜೊರ್ಹಾಟ್ನಲ್ಲಿ ನಿರಂತರ ಮೊಬೈಲ್ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ದೂರ ಸಂಪರ್ಕ ಇಲಾಖೆಯು ಜುಲೈ 24ರವರೆಗೆ ಇಂಟ್ರಾ ಸರ್ಕಲ್ ರೋಮಿಂಗ್ (ಐಸಿಆರ್) ಸೌಲಭ್ಯವನ್ನು ಸಕ್ರಿಯಗೊಳಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮೊಬೈಲ್ ಚಂದಾದಾರರಿಗೆ ತಮ್ಮಲ್ಲಿರುವ ಸಿಮ್ ಕಾರ್ಡ್ ನೆಟ್ವರ್ಕ್ ಲಭ್ಯವಿಲ್ಲದಿದ್ದಾಗ ಲಭ್ಯವಿರುವ ಯಾವುದೆ ಟೆಲಿಕಾಂ ನೆಟ್ವರ್ಕ್ ಮೂಲಕ ಸೇವೆಗಳನ್ನು ಪಡೆಯಲು ಐಸಿಆರ್ ಸೌಲಭ್ಯವು ಅನುವು ಮಾಡಿಕೊಡುತ್ತದೆ.