ನನಗೆ ಮಿಸೆಸ್ ಸಿಕ್ಕಾಯ್ತು: ವಿವಾಹವಾದ ವಿಶ್ವದ ನಂ.1 ಯೂಟ್ಯೂಬರ್ ಮಿಸ್ಟರ್ ಬೀಸ್ಟ್
ನ್ಯೂಯಾರ್ಕ್: ವಿಶ್ವದ ಜನಪ್ರಿಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 12ನೇ ವಯಸ್ಸಿನಲ್ಲಿ ಯೂಟ್ಯೂಬ್ ಪಯಣ ಆರಂಭಿಸಿದ ಬೀಸ್ಟ್ ಅವರು ತಮ್ಮ ಕೆಲಸದಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ.ಮಿಸ್ಟರ್ ಬೀಸ್ಟ್ ಅವರ ನಿಜವಾದ ಹೆಸರು ಜಿಮ್ಮಿ ಡೊನಾಲ್ಡ್ಸನ್. ಯೂಟ್ಯೂಬ್ನಲ್ಲಿ 50. 9 ಕೋಟಿ ಚಂದಾದಾರರನ್ನು ಹೊಂದಿರುವ ಮಿಸ್ಟರ್ ಬೀ

ನ್ಯೂಯಾರ್ಕ್: ವಿಶ್ವದ ಜನಪ್ರಿಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 12ನೇ ವಯಸ್ಸಿನಲ್ಲಿ ಯೂಟ್ಯೂಬ್ ಪಯಣ ಆರಂಭಿಸಿದ ಬೀಸ್ಟ್ ಅವರು ತಮ್ಮ ಕೆಲಸದಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ.ಮಿಸ್ಟರ್ ಬೀಸ್ಟ್ ಅವರ ನಿಜವಾದ ಹೆಸರು ಜಿಮ್ಮಿ ಡೊನಾಲ್ಡ್ಸನ್. ಯೂಟ್ಯೂಬ್ನಲ್ಲಿ 50. 9 ಕೋಟಿ ಚಂದಾದಾರರನ್ನು ಹೊಂದಿರುವ ಮಿಸ್ಟರ್ ಬೀಸ್ಟ್ ತಮ್ಮ ದೀರ್ಘಕಾಲದ ಗೆಳತಿ ತಿಯಾ ಬೊಯ್ಸನ್ ಅವರೊಂದಿಗೆ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಸುಂದರ ಫೋಟೊಗಳನ್ನು ಹಂಚಿಕೊಂಡಿರುವ ಜಿಮ್ಮಿ, ‘ನನಗೆ ಮಿಸೆಸ್ ಬೀಸ್ಟ್ ಸಿಕ್ಕಾಯ್ತು’ ಎಂದು ಬರೆದುಕೊಂಡಿದ್ದು, ಇದು ತಮ್ಮ ಜೀವನದ ಅತ್ಯುತ್ತಮ ದಿನ ಎಂದು ಬಣ್ಣಿಸಿದ್ದಾರೆ.ಯಾರು ಈ 'ಮಿಸೆಸ್ ಬೀಸ್ಟ್' ತಿಯಾ ಬೊಯ್ಸನ್?ದಕ್ಷಿಣ ಆಫ್ರಿಕಾ ಮೂಲದ ತಿಯಾ ಬೊಯ್ಸನ್ ಯೂಟ್ಯೂಬರ್ ಹಾಗೂ ಟ್ವಿಚ್ ಸ್ಟ್ರೀಮರ್ ಆಗಿ ಗುರುತಿಸಿಕೊಂಡಿದ್ದಾರೆ. ಕೇವಲ ಸಾಮಾಜಿಕ ಮಾಧ್ಯಮ ಮಾತ್ರವಲ್ಲದೆ, ಕಾನೂನು ಮತ್ತು ಮನೋವಿಜ್ಞಾನ ವಿಷಯಗಳಲ್ಲಿ ಎರಡು ಪದವಿಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಮದುವೆಯ ನಂತರ ಇನ್ಸ್ಟಾಗ್ರಾಂನಲ್ಲಿ ತಮ್ಮ ಹೆಸರನ್ನು 'ತಿಯಾ ಡೊನಾಲ್ಡ್ಸನ್' ಎಂದು ಬದಲಾಯಿಸಿಕೊಂಡಿದ್ದಾರೆ.2022ರಲ್ಲಿ ಜಿಮ್ಮಿ ಅವರು ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದಾಗ ಇಬ್ಬರ ಪರಿಚಯವಾಗಿತ್ತು. ‘ಸಾಮಾನ್ಯವಾಗಿ ಯೂಟ್ಯೂಬರ್ಗಳು ಸೋಶಿಯಲ್ ಮೀಡಿಯಾದಲ್ಲಷ್ಟೇ ಪ್ರದರ್ಶನ ನೀಡುತ್ತಾರೆ ಅಂದುಕೊಂಡಿದ್ದೆ. ಆದರೆ ಜಿಮ್ಮಿ ಅವರನ್ನು ಭೇಟಿಯಾದಾಗ ಅವರಲ್ಲಿದ್ದ ಸರಳತೆ ಮತ್ತು ಬುದ್ಧಿವಂತಿಕೆ ನನ್ನನ್ನು ಆಕರ್ಷಿಸಿತು. ಅವರಲ್ಲಿ ಯಾವುದೇ ಅಹಂಕಾರವಿರಲಿಲ್ಲ’ ಎಂದು ತಿಯಾ ನೆನಪಿಸಿಕೊಂಡಿದ್ದಾರೆ. ಆ ನಂತರ ಟ್ವಿಟರ್ ಮೂಲಕ ಮಾತುಕತೆ ಬೆಳೆದು, ಇಬ್ಬರೂ ಪ್ರೀತಿಸತೊಡಗಿದ್ದರು. View this post on Instagram A post shared by MrBeast (@mrbeast) ದ್ವೀಪದಲ್ಲಿ ಒಂದು ವಾರ ನಡೆದ ಮದುವೆಯ ಸಂಭ್ರಮ..ರಿಚರ್ಡ್ ಬ್ರಾನ್ಸನ್ ಅವರ ಮಾಲೀಕತ್ವದ ‘ನೆಕರ್ ಐಲ್ಯಾಂಡ್’ನಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಕೇವಲ 70 ಜನ ಆಪ್ತರು ಹಾಗೂ ಸ್ನೇಹಿತರಷ್ಟೇ ಭಾಗವಹಿಸಿದ್ದರು. ಜುಲೈ 14ರಿಂದ ಆರಂಭವಾದ ಈ ವಿವಾಹದ ಸಂಭ್ರಮಾಚರಣೆ ಒಂದು ವಾರಗಳ ಕಾಲ ನಡೆಯಿತು.‘ನಾವು ಪ್ರೀತಿಸಲು ಆರಂಭಿಸಿದಾಗಲೇ ಮದುವೆಯಾಗುವ ಗುರಿ ಹೊಂದಿದ್ದೆವು. ಈಗ ಜಗತ್ತಿಗೆ ನಾವು ಗಂಡ-ಹೆಂಡತಿ ಎಂದು ತಿಳಿದಿದೆ ಅಷ್ಟೇ. ಮನೆಗೆ ಮರಳಿ ನಮ್ಮ ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುತ್ತಾ ಮುಂದಿನ ಹೊಸ ಜೀವನಕ್ಕೆ ಕಾಲಿಡಲಿದ್ದೇವೆ’ ಎಂದು ತಿಯಾ ಹರ್ಷ ವ್ಯಕ್ತಪಡಿಸಿದ್ದಾರೆ.