ಕಾರವಾರದಲ್ಲಿ ಭಾರತೀಯರೇ ನಿರ್ಮಿಸಿದ ಯುದ್ಧನೌಕೆ ಲೋಕಾರ್ಪಣೆ – ವಿಶೇಷತೆ ಏನು?
ಕಾರವಾರ: ಭಾರತೀಯ ತಂತ್ರಜ್ಞಾನದಲ್ಲಿ ತಯಾರಿಸಲಾದ ಮಾಲ್ವಾಣ್ ಯುದ್ಧ ನೌಕೆ ಭಾರತೀಯ ನೌಕಾಸೇನೆಗೆ ಇಂದು ಅಧಿಕೃತವಾಗಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ಸೇರ್ಪಡೆಯಾಯಿತು. ಇಂಡಿಯನ್ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ರವರು ಪ್ಲಾಗ್ ಏರಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟನೆ ನೆರವೇರಿಸಿದರು. ಕೇರಳ ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನಿರ್ಮಾಣವಾದ ಈ ಯುದ್ದ ಹಡಗು ಜಲ

ಕಾರವಾರ: ಭಾರತೀಯ ತಂತ್ರಜ್ಞಾನದಲ್ಲಿ ತಯಾರಿಸಲಾದ ಮಾಲ್ವಾಣ್ ಯುದ್ಧ ನೌಕೆ ಭಾರತೀಯ ನೌಕಾಸೇನೆಗೆ ಇಂದು ಅಧಿಕೃತವಾಗಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ಸೇರ್ಪಡೆಯಾಯಿತು. ಇಂಡಿಯನ್ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ರವರು ಪ್ಲಾಗ್ ಏರಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟನೆ ನೆರವೇರಿಸಿದರು. ಕೇರಳ ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನಿರ್ಮಾಣವಾದ ಈ ಯುದ್ದ ಹಡಗು ಜಲಾಂತರ್ಗಾಮಿಗಳನ್ನು ಹೊಡೆದುರುಳಿಸಬಹುದಾದ ಅತ್ಯಾಧುನಿಕ ಯುದ್ಧ ಸಾಮಗ್ರಿಗಳನ್ನು ಹೊಂದಿದ ನೌಕೆಯಾಗಿದ್ದು, ಭಾರತೀಯ ಸೇನೆ ನಿರ್ಮಿಸುತ್ತಿರುವ ಮೂರು ನೌಕೆಗಳಲ್ಲಿ ಇದು ಎರಡನೇಯದಾಗಿದೆ. ಶೇ.80 ಕ್ಕೀತ ಹೆಚ್ಚು ಭಾರತೀಯ ತಂತ್ರಜ್ಞಾನ ಹೊಂದಿರುವ ಹಾಗೂ ಸುಮಾರು 13,440 ಕೋಟಿ ರೂ. ವೆಚ್ಚದಲ್ಲಿ ಶೇ.80 ಕ್ಕಿಂತ ಹೆಚ್ಚು ಭಾರತೀಯ ತಂತ್ರಜ್ಞಾನವನ್ನ ಮಾತ್ರ ಅಳವಡಿಸಿ ಈ ನೌಕೆಯನ್ನು ನಿರ್ಮಿಸಲಾಗಿದೆ. ಕೊಚ್ಚಿಯ ಸ್ಮಾರ್ಟ್ ಇಂಜಿನಿಯರಿಂಗ್ ಆ್ಯಂಡ್ ಡಿಸೈನ್ ಸೊಲ್ಯೂಶನ್ ಕಂಪನಿಯ ಇಂಜಿನಿಯರ್ಗಳು ಇದರ ಮೂಲ ಸ್ವರೂಪವನ್ನು ಡಿಸೈನ್ ಮಾಡಿದ್ದಾರೆ. ಡಿಆರ್ಡಿಒ ಸಿದ್ಧಪಡಿಸಿದ ಸೋನಾರ್, ಶಸ್ತ್ರಾಸ್ತ್ರ ಇದರಲ್ಲಿ ಅಳವಡಿಸಲಾಗಿದೆ. BEL, ಮಹೀಂದ್ರಾ ಮುಂತಾದ ಭಾರತೀಯ ಕಂಪನಿಗಳ ಬಿಡಿ ಭಾಗಗಳನ್ನು ಹಡಗಿನ ವಿವಿಧ ವಿಭಾಗಗಳಲ್ಲಿ ಅಳವಡಿಸಲಾಗಿದೆ. ಕೆಲವು ಸಾಫ್ಟವೇರ್ಗಳನ್ನು ಮಾತ್ರ ಪಿನ್ಲ್ಯಾಂಡ್ನಿಂದ ಪಡೆಯಲಾಗಿದೆ. 2023 ರ ಫೆಬ್ರವರಿಯಲ್ಲಿ ಹಡಗಿನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದೇ ಮಾರ್ಚ್ನಲ್ಲಿ ನಿರ್ಮಾಣ ಕಾರ್ಯ ಪೂರ್ಣವಾಗಿ ಈಗಾಗಲೇ ಪರೀಕ್ಷಾರ್ಥ ಓಡಾಟವೂ ಮುಗಿಸಿದೆ. ಈ ಹಡಗು 78 ಮೀಟರ್ ಉದ್ದ 11.26 ಮೀಟರ್ ಅಗಲ ಹಾಗೂ 2.7 ಮೀಟರ್ನಷ್ಟು ಆಳವಿರುವ ನೌಕೆಯಾಗಿದ್ದು, 800 ಟನ್ಗೂ ಅಧಿಕ ಭಾರವಿದೆ. ಗಂಟೆಗೆ 25 ನಾಟಿಕಲ್ ಮೈಲ್ ವೇಗದಲ್ಲಿ ತೆರಳಬಲ್ಲದು. 7 ಅಧಿಕಾರಿಗಳು ಸೇರಿ 57 ಸೇಲರ್ಗಳು ಇದರಲ್ಲಿ ಕಾರ್ಯ ನಿರ್ವಹಿಸುವರು. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಶಕ್ತಿಶಾಲಿಯಾಗಿರುವ ಈ ಹಡಗು, ಕಡಿಮೆ ನೀರಿನಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಲು ಅಗತ್ಯವಿರುವ ಚುರುಕುತನ, ನಿಖರತೆ ಮತ್ತು ಸಹಿಷ್ಣುತೆಯನ್ನು ಹೊಂದಿದೆ. ಜಲಾಂತರ್ಗಾಮಿಗಳನ್ನು ಹೊಡೆದು ಮುಳುಗಿಸಬಹುದಾದ ಟಾರ್ಪಿಡೋ ಲಾಂಚರ್, ರಾಕೆಟ್ ಲಾಂಚರ್ಗಳನ್ನು, ಗನ್ಗಳನ್ನು ಹಡಗಿನಲ್ಲಿ ಅಳವಡಿಸಲಾಗಿದೆ. ಸಾಮಾನ್ಯವಾಗಿ ಯುದ್ಧ ನೌಕೆಗಳಿಗೆ ಒಂದೊಂದು ಪ್ರಮುಖ ಊರುಗಳ ಹೆಸರಿಡುವ ವಾಡಿಕೆ ಇದೆ. ಮಾಲ್ವಾಣ್ ಎಂಬುದು ಮಹಾರಾಷ್ಟದ ಸಿಂದದುರ್ಗ ಜಿಲ್ಲೆಯ ಕರಾವಳಿಯ ಪ್ರಸಿದ್ಧ ಊರು. 1983 ರಿಂದ 2003 ರ ಅವಧಿಯಲ್ಲಿ ಭಾರತೀಯ ನೌಕೆಯಲ್ಲಿ ಇದೇ ಹೆಸರಿನ ಸಣ್ಣ ಹಡಗು ಕಾರ್ಯ ನಿರ್ವಹಿಸಿತ್ತು. ಈಗ ಈ ನೌಕೆಗೆ ಆ ಊರಿನ ಹೆಸರಿಡಲಾಗಿದೆ. ನೌಕಾಸೇನೆ ಸೇರಿದ ನಂತರ ಈ ಹಡಗು ಕಾರವಾರದಿಂದಲೇ ಕಾರ್ಯ ನಿರ್ವಹಿಸಲಿದೆ.