IPL ಸಂಸ್ಥಾಪಕ ಲಲಿತ್ ಮೋದಿ ಭಾರತಕ್ಕೆ ವಾಪಸ್ ಸುಳಿವು
ನವದೆಹಲಿ: ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ (Lalit Modi) ಭಾರತಕ್ಕೆ ವಾಪಸ್ ಆಗುವ ಸುಳಿವು ನೀಡಿದ್ದಾರೆ. ಈ ವರ್ಷಾಂತ್ಯ ಅಥವಾ ಮುಂದಿನ ವರ್ಷಾರಂಭದಲ್ಲಿ ವಾಪಸ್ ಬರೋದಾಗಿ ಹೇಳಿದ್ದಾರೆ. 2009 ರ ಇಂಡಿಯನ್ ಪ್ರೀಮಿಯರ್ ಲೀಗ್ ದಕ್ಷಿಣ ಆಫ್ರಿಕಾ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಪ್ರಕರಣದಲ್ಲಿ ಮೇಲ್ಮನವಿ ನ್ಯಾಯಮಂಡಳಿಯಿಂದ ರಿಲೀಫ್ ಸಿಕ್ಕಿದೆ. ಹೀಗಾಗಿ,

ನವದೆಹಲಿ: ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ (Lalit Modi) ಭಾರತಕ್ಕೆ ವಾಪಸ್ ಆಗುವ ಸುಳಿವು ನೀಡಿದ್ದಾರೆ. ಈ ವರ್ಷಾಂತ್ಯ ಅಥವಾ ಮುಂದಿನ ವರ್ಷಾರಂಭದಲ್ಲಿ ವಾಪಸ್ ಬರೋದಾಗಿ ಹೇಳಿದ್ದಾರೆ. 2009 ರ ಇಂಡಿಯನ್ ಪ್ರೀಮಿಯರ್ ಲೀಗ್ ದಕ್ಷಿಣ ಆಫ್ರಿಕಾ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಪ್ರಕರಣದಲ್ಲಿ ಮೇಲ್ಮನವಿ ನ್ಯಾಯಮಂಡಳಿಯಿಂದ ರಿಲೀಫ್ ಸಿಕ್ಕಿದೆ. ಹೀಗಾಗಿ, 16 ವರ್ಷಗಳ ನಂತರ ಭಾರತಕ್ಕೆ ಮರಳಲು ಯೋಜಿಸಿದ್ದೇನೆ ಎಂದು ಲಲಿತ್ ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ – ಕೇವಲ 10 ವಿಭಾಗಳಲ್ಲಿ ಸ್ಪರ್ಧೆ 2010 ರಿಂದ ಭಾರತದ ಹೊರಗೆ ವಾಸಿಸುತ್ತಿರುವ ಮೋದಿ, ನ್ಯಾಯಮಂಡಳಿಯ ತೀರ್ಪು 16 ವರ್ಷಗಳ ಕಾಲ ನಡೆದ ಕಾನೂನು ಹೋರಾಟವನ್ನು ಕೊನೆಗೊಳಿಸಿದೆ. ನಿನ್ನೆಯ ತೀರ್ಪಿನಿಂದ ನನಗೆ ನಿಜಕ್ಕೂ ಸಂತೋಷವಾಗಿದೆ. ಇದು ನಿಜಕ್ಕೂ ಅದ್ಭುತ ದಿನವಾಗಿತ್ತು. ಹದಿನಾರು ವರ್ಷಗಳಿಂದ ನಾನು ಹೋರಾಡಿದ್ದೇನೆ. ನಾನು ಮಾಧ್ಯಮಗಳಿಗೆ ಮತ್ತು ಎಲ್ಲರಿಗೂ ಹೇಳುತ್ತಿದ್ದ ಎಲ್ಲವೂ ಅಂತಿಮವಾಗಿ ಸತ್ಯವಾಗಿದೆ ಎಂದಿದ್ದಾರೆ. ನ್ಯಾಯಮಂಡಳಿ ನನ್ನ ಪರವಾಗಿ ತೀರ್ಪು ನೀಡಿದೆ ಎಂದು ನನಗೆ ನಿಜವಾಗಿಯೂ ಸಂತೋಷವಾಗಿದೆ. ನಾನು ಐಪಿಎಲ್ ಬಗ್ಗೆ ಮಾತ್ರ ಕಾಳಜಿ ವಹಿಸಿದ್ದೆ. ಅದುಬಿಟ್ಟರೆ ಬೇರೇನೂ ಇಲ್ಲ. ಅದು ನನಗೆ ಅತ್ಯಂತ ಪ್ರಿಯವಾದದ್ದು. ಈಗ ಆ ಅಧ್ಯಾಯ ನನ್ನ ಹಿಂದೆ ಇದೆ. ನಾನು ನನ್ನ ಜೀವನದಲ್ಲಿ ಮುಂದುವರಿಯಲಿದ್ದೇನೆ. ಭಾರತಕ್ಕೆ ಹಿಂತಿರುಗಲು ಎದುರು ನೋಡುತ್ತಿದ್ದೇನೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ನಾನು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹಿಂತಿರುಗುತ್ತೇನೆ. ನನ್ನ ಮಗಳು ಅಕ್ಟೋಬರ್ನಲ್ಲಿ ನನ್ನ ಮೊಮ್ಮಗನೊಂದಿಗೆ ಬರಲಿದ್ದಾಳೆ. ಎಲ್ಲವೂ ಚೆನ್ನಾಗಿ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ ಕಬಡ್ಡಿ ಇತಿಹಾಸದಲ್ಲಿ ಹೊಸ ಅಧ್ಯಾಯ – ಕೆಕೆಪಿಎಲ್ ಆಟಗಾರರ ಹರಾಜು ಯಶಸ್ವಿ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ 2ನೇ ಸೀಸನ್ ವೇಳೆ ಆರ್ಬಿಐ ಪೂರ್ವಾನುಮತಿ ಇಲ್ಲದೇ ಸುಮಾರು 243.45 ಕೋಟಿ ರೂ. ವಿದೇಶಿ ವಿನಿಮಯವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ರವಾನಿಸಿದೆ ಎಂದು ಇಡಿ ಆರೋಪಿಸಿತ್ತು. ಇದಕ್ಕೆ ಅಂದಿನ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರ ಬೇಜವಾಬ್ದಾರಿ ಆರ್ಥಿಕ ನಿರ್ಧಾರಗಳೇ ಕಾರಣ ಎಂದು ಅವರಿಗೆ 10.65 ಕೋಟಿ ದಂಡ ವಿಧಿಸಿತ್ತು. ಪ್ರಕರಣ ಸಂಬಂಧ ಸುದೀರ್ಘ 16 ವರ್ಷಗಳ ಹೋರಾಟದ ಬಳಿಕ, ಲಲಿತ್ ಮೋದಿ ಮೇಲಿದ್ದ ಪ್ರಕರಣಗಳನ್ನು ಸಫೆಮಾ ಅಪೀಲು ನ್ಯಾಯಾಧಿಕರಣವು ವಜಾ ಮಾಡಿ ದಂಡವನ್ನು ರದ್ದುಗೊಳಿಸಿದೆ.