ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂವಾದ, ಪಾರದರ್ಶಕತೆ ಮೂಲಕ ಪರಿಹಾರ: ಹಿಂಸಾಚಾರ ಖಂಡಿಸಿದ ಎಬಿವಿಪಿ
ನವದೆಹಲಿ: ವಿದ್ಯಾರ್ಥಿಗಳ ನ್ಯಾಯಯುತ ಸಮಸ್ಯೆಗಳನ್ನು ಸಂವಾದ, ಪಾರದರ್ಶಕತೆ ಮತ್ತು ಸುಧಾರಣೆಗಳ ಮೂಲಕ ಪರಿಹರಿಸಬೇಕು ಹಾಗೂ ಹಿಂಸಾತ್ಮಕ ಘರ್ಷಣೆಗಳು ದುರದೃಷ್ಟಕರ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಖಂಡಿಸಿದೆ. ಈ ಸಂಬಂಧ ಎಬಿವಿಪಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ಸಾಂಸ್ಥಿಕ ಸುಧಾರಣೆಗಳನ್ನು ಖಚಿ

ನವದೆಹಲಿ: ವಿದ್ಯಾರ್ಥಿಗಳ ನ್ಯಾಯಯುತ ಸಮಸ್ಯೆಗಳನ್ನು ಸಂವಾದ, ಪಾರದರ್ಶಕತೆ ಮತ್ತು ಸುಧಾರಣೆಗಳ ಮೂಲಕ ಪರಿಹರಿಸಬೇಕು ಹಾಗೂ ಹಿಂಸಾತ್ಮಕ ಘರ್ಷಣೆಗಳು ದುರದೃಷ್ಟಕರ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಖಂಡಿಸಿದೆ. ಈ ಸಂಬಂಧ ಎಬಿವಿಪಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ಸಾಂಸ್ಥಿಕ ಸುಧಾರಣೆಗಳನ್ನು ಖಚಿತಪಡಿಸಲು ಭಾರತ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು ಹಾಗೂ ವಿದ್ಯಾರ್ಥಿಗಳು ಸಂಕುಚಿತ ರಾಜಕೀಯ ಹಿತಾಸಕ್ತಿಗಳು ಮತ್ತು ರಾಷ್ಟ್ರವಿರೋಧಿ ಪಿತೂರಿಗಳ ಸಾಧನವಾಗಬಾರದು ಎಂದು ಕಿಡಿಕಾರಿದೆ. ಇದನ್ನೂ ಓದಿ: ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲೂ ಪ್ರಶ್ನೆಪತ್ರಿಕೆ ಲೀಕ್ ಆಗಿದೆ: ಕಾಂಗ್ರೆಸ್ಗೆ ಜೆ.ಪಿ.ನಡ್ಡಾ ತಿರುಗೇಟು ನೀಟ್-ಯುಜಿ (NEET-UG) ಮತ್ತು ಶಿಕ್ಷಣ ಸುಧಾರಣೆಗೆ ಸಂಬಂಧಿಸಿದ ಇತ್ತೀಚಿನ ಪ್ರತಿಭಟನೆಗಳ ವೇಳೆ ಜಂತರ್ ಮಂತರ್ನಲ್ಲಿ ನಡೆದ ಗೊಂದಲ, ಸಾರ್ವಜನಿಕ ಅಡಚಣೆ ಮತ್ತು ಹಿಂಸಾತ್ಮಕ ಘರ್ಷಣೆಗಳು ನಡೆದಿರುವುದು ಸರಿಯಲ್ಲ. ನಿಜವಾದ ವಿದ್ಯಾರ್ಥಿ ಚಳವಳಿಯ ಸೋಗಿನಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗಳು ಮತ್ತು ಸಮಾಜವಿರೋಧಿ ಅಂಶಗಳು ಉದ್ದೇಶಪೂರ್ವಕವಾಗಿ ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಮಾಡಲು ಹಿಂಸಾಚಾರವನ್ನು ಸಂಘಟಿಸಿವೆ. ಈ ವೇಳೆ ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದು, ಇಂತಹ ಸಂಘರ್ಷಗಳು ಮತ್ತೆ ಸಂಭವಿಸಬಾರದು ಎಂದು ತಿಳಿಸಿದೆ. ಎನ್ಟಿಎ ಕಚೇರಿ ಮುಂದೆ ಮೊದಲು ಪ್ರತಿಭಟಿಸಿದ್ದ ಎಬಿವಿಪಿ: ನೀಟ್-ಯುಜಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಆರಂಭದಿಂದಲೂ ನಾವು ವಿದ್ಯಾರ್ಥಿಗಳೊಂದಿಗೆ ನಿಂತಿದ್ದೇವೆ. ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಮೊದಲು ಒತ್ತಾಯಿಸಿದ್ದೆವು. ಜೊತೆಗೆ ಹೊಣೆಗಾರಿಕೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಪ್ರಧಾನ ಕಚೇರಿಯ ಮುಂದೆ ಪ್ರತಿಭಟನೆಯನ್ನು ಆಯೋಜಿಸಿದ್ದೆವು. 2024ರಿಂದ ಇಂದಿನವರೆಗೆ ನೀಟ್-ಯುಜಿ ವಿಷಯದಲ್ಲಿ ವಿದ್ಯಾರ್ಥಿಗಳ ಹಿತಕ್ಕಾಗಿ ನಿರಂತರವಾಗಿ ಹೋರಾಡಿದ್ದೇವೆ ಎಂದಿದೆ. ಇದನ್ನೂ ಓದಿ: 3 ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ – ಮಾತುಕತೆಗೆ ತಡ ಯಾಕೆ: ಕೇಂದ್ರ ಸರ್ಕಾರಕ್ಕೆ ಅಣ್ಣಾಮಲೈ ಪ್ರಶ್ನೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆ, ಪಾರದರ್ಶಕತೆ ಮತ್ತು ಅಗತ್ಯ ಸಾಂಸ್ಥಿಕ ಸುಧಾರಣೆಗಳ ಸಮಗ್ರ ಪರಿಶೀಲನೆಗಾಗಿ ಭಾರತ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಅದು ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಹೊಣೆಯಾಗಿಸಲು ನಿರ್ದಿಷ್ಟ, ಸಮಯಬದ್ಧ ಶಿಫಾರಸುಗಳನ್ನು ಸಲ್ಲಿಸಬೇಕೇಂದು ಎಂದು ಒತ್ತಾಯಿಸಿದೆ. ರಾಷ್ಟ್ರವಿರೋಧಿ ಪಿತೂರಿಗಳ ವಿರುದ್ಧ ಎಚ್ಚರಿಕೆ: ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳು ಮತ್ತು ನ್ಯಾಯಯುತ ಬೇಡಿಕೆಗಳನ್ನು ಸಂಕುಚಿತ ರಾಜಕೀಯ ಹಿತಾಸಕ್ತಿಗಳು, ರಾಷ್ಟ್ರವಿರೋಧಿ ಕಾರ್ಯಸೂಚಿಗಳು ಅಥವಾ ದೇಶದಲ್ಲಿ ಅಸ್ಥಿರತೆ, ಸಂಘರ್ಷ ಮತ್ತು ಕಾನೂನುಬಾಹಿರತೆಯ ವಾತಾವರಣವನ್ನು ಸೃಷ್ಟಿಸಲು ಬಳಸಿಕೊಳ್ಳಬಾರದು. ಇಂತಹ ದುರುದ್ದೇಶದ ಪ್ರಯತ್ನಗಳು ಭಾರತದ ಆಂತರಿಕ ಸ್ಥಿರತೆ, ಸಮಗ್ರತೆ, ಸಾರ್ವಭೌಮತೆ ಹಾಗೂ ಏಕತೆಯನ್ನು ದುರ್ಬಲಗೊಳಿಸಲು ಮತ್ತು ಸಾಮಾಜಿಕ ಕಲಹವನ್ನು ಉತ್ತೇಜಿಸಲು ದೀರ್ಘಕಾಲದಿಂದ ಅವಕಾಶಕ್ಕಾಗಿ ಕಾಯುತ್ತಿರುವ ‘ಡೀಪ್ ಸ್ಟೇಟ್’ನಂತಹ ಭಾರತ-ವಿರೋಧಿ ಜಾಲಗಳಿಗೆ ಪುಷ್ಠಿ ನೀಡುತ್ತವೆ ಎಂದು ಎಚ್ಚರಿಸಿದೆ. ಭಾರತದ ವಿದ್ಯಾರ್ಥಿ ಸಮುದಾಯವು ಜಾಗೃತ, ದೇಶಭಕ್ತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧವಾಗಿದೆ. ಅದು ರಾಜಕೀಯ ದಾರಿತಪ್ಪಿಸುವಿಕೆ, ಬಾಹ್ಯ ಪ್ರಭಾವ ಅಥವಾ ರಾಷ್ಟ್ರವಿರೋಧಿ ಪಿತೂರಿಗಳಿಗೆ ಸಾಧನವಾಗಲು ಬಿಡಬಾರದು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ರಾಜಕೀಯ ಕುಶಾಮತ ಮತ್ತು ಪ್ರಚೋದನೆಯಿಂದ ದೂರವಿಟ್ಟು, ರಾಷ್ಟ್ರವಿರೋಧಿ ಪಿತೂರಿಗಳ ವಿರುದ್ಧ ಜಾಗರೂಕರಾಗಿರಲು ಸಕಾರಾತ್ಮಕ, ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳುವಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ವಿದ್ಯಾರ್ಥಿಗಳು, ಯುವಕರು, ಪೋಷಕರು, ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಎಲ್ಲಾ ಸಾಮಾಜಿಕ ಪಾಲುದಾರರಿಗೆ ಕರೆ ನೀಡಿದೆ.ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಸಂಚಾರ ಇದೀಗ ಮತ್ತಷ್ಟು ದುಬಾರಿ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಕಳವಳ: ನೀಟ್-ಯುಜಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳು ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಕಳವಳ ಹುಟ್ಟುಹಾಕಿದೆ. ಈ ನ್ಯಾಯಯುತ ವಿಷಯಗಳಲ್ಲಿ ಆರಂಭದಿಂದಲೂ ವಿದ್ಯಾರ್ಥಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಸಂಕುಚಿತ ರಾಜಕೀಯ ಹಿತಾಸಕ್ತಿಗಳತ್ತ ತಿರುಗಿಸುವ ಯಾವುದೇ ಪ್ರಯತ್ನವು ವಿದ್ಯಾರ್ಥಿ ಕಲ್ಯಾಣಕ್ಕೆ ಗಂಭೀರ ಅನ್ಯಾಯ. ರಾಜಕೀಯ ಕಾರ್ಯಸೂಚಿಗಳಿಗೆ ಅಥವಾ ಭಾರತದ ಏಕತೆ, ಸಮಗ್ರತೆ ಮತ್ತು ಸಾಮಾಜಿಕ ಸಾಮರಸ್ಯದ ವಿರುದ್ಧ ಕೆಲಸ ಮಾಡುವ ಶಕ್ತಿಗಳಿಗೆ ಸೇವೆ ಸಲ್ಲಿಸಲು ವಿದ್ಯಾರ್ಥಿ ಶಕ್ತಿಯನ್ನು ಬಳಸಲು ಬಿಡಬಾರದು ಎಂದು ಸಂಸ್ಥೆ ಹೇಳಿದೆ. ಅಂತಹ ದುರುದ್ದೇಶದ ಪ್ರಯತ್ನಗಳು ಪರೋಕ್ಷವಾಗಿ ಭಾರತದ ಆಂತರಿಕ ಸ್ಥಿರತೆ ಮತ್ತು ಸಾರ್ವಭೌಮತೆಯನ್ನು ದುರ್ಬಲಗೊಳಿಸಲು ದೀರ್ಘಕಾಲದಿಂದ ಪ್ರಯತ್ನಿಸುತ್ತಿರುವ ‘ಡೀಪ್ ಸ್ಟೇಟ್’ನಂತಹ ಭಾರತ-ವಿರೋಧಿ ಕಾರ್ಯವಿಧಾನಗಳನ್ನು ಬಲಪಡಿಸುತ್ತವೆ. ವಿದ್ಯಾರ್ಥಿಗಳ ನ್ಯಾಯಯುತ ಸಮಸ್ಯೆಗಳ ಪರಿಹಾರವು ಅರ್ಥಪೂರ್ಣ ಸಂವಾದ, ಸಂವೇದನೆ ಮತ್ತು ಸಾಂಸ್ಥಿಕ ಸುಧಾರಣೆಗಳ ಮೂಲಕ ಮಾತ್ರ ಸಾಧಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಶುದ್ಧತೆ, ಪಾರದರ್ಶಕತೆ ಮತ್ತು ಅಗತ್ಯ ಸಾಂಸ್ಥಿಕ ಸುಧಾರಣೆಗಳ ಸಮಗ್ರ ಪರಿಶೀಲನೆಗಾಗಿ ಭಾರತ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕೆಂದು ಎಬಿವಿಪಿ ಒತ್ತಾಯಿಸುತ್ತದೆ. ಇದರಿಂದ ಪರೀಕ್ಷಾ ವ್ಯವಸ್ಥೆಗೆ ವಿಶ್ವಾಸಾರ್ಹತೆ ಮತ್ತು ಹೊಣೆಗಾರಿಕೆ ಮರಳುತ್ತದೆ ಎಂದು ಸ್ಪಷ್ಟಪಡಿಸಿದೆ.ಇದನ್ನೂ ಓದಿ: ಇನ್ಮುಂದೆ ಫುಟ್ಪಾತ್ನಲ್ಲಿ ಬೈಕ್ ಚಲಾಯಿಸಿದ್ರೆ 5,000 ರೂ. ದಂಡ: ಕೃಷ್ಣ ಬೈರೇಗೌಡ