ಕಾಮನ್ವೆಲ್ತ್ ಗೇಮ್ಸ್: ಅಥ್ಲೆಟಿಕ್ಸ್, ಬಾಕ್ಸಿಂಗ್ ಪದಕಗಳ ಮೇಲೆ ಕಣ್ಣು
ಗ್ಲಾಸ್ಗೊ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಳೆದ ಎರಡು ದಶಕಗಳಿಂದ ಭಾರತದ ಅಥ್ಲೀಟ್ಗಳು ಪದಕ ಗಳಿಕೆಯಲ್ಲಿ ಅಗ್ರ ಐದರಲ್ಲಿ ಸ್ಥಾನ ಪಡೆದಿದೆ. ಈ ಬಾರಿಯೂ ಲಭ್ಯವಿರುವ ಅವಕಾಶಗಳಲ್ಲಿ ಪದಕಗಳನ್ನು ಬಾಚಿಕೊಳ್ಳಲು ಸಿದ್ಧವಾಗಿದೆ. ಗುರುವಾರ ಆರಂಭವಾಗಲಿರುವ ಕೂಟದಲ್ಲಿ ಈ ಬಾರಿ ಭಾರತ ತಂಡವು ಬಾಕ್ಸಿಂಗ್, ವೇಟ್ಲಿಫ್ಟಿಂಗ್ ಮತ್ತು ಅಥ್ಲೆಟಿಕ್ಸ್ ವಿಭಾಗಗಳಲ್ಲಿ

ಗ್ಲಾಸ್ಗೊ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಳೆದ ಎರಡು ದಶಕಗಳಿಂದ ಭಾರತದ ಅಥ್ಲೀಟ್ಗಳು ಪದಕ ಗಳಿಕೆಯಲ್ಲಿ ಅಗ್ರ ಐದರಲ್ಲಿ ಸ್ಥಾನ ಪಡೆದಿದೆ. ಈ ಬಾರಿಯೂ ಲಭ್ಯವಿರುವ ಅವಕಾಶಗಳಲ್ಲಿ ಪದಕಗಳನ್ನು ಬಾಚಿಕೊಳ್ಳಲು ಸಿದ್ಧವಾಗಿದೆ. ಗುರುವಾರ ಆರಂಭವಾಗಲಿರುವ ಕೂಟದಲ್ಲಿ ಈ ಬಾರಿ ಭಾರತ ತಂಡವು ಬಾಕ್ಸಿಂಗ್, ವೇಟ್ಲಿಫ್ಟಿಂಗ್ ಮತ್ತು ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಪದಕಗಳನ್ನು ಜಯಿಸುವತ್ತ ಚಿತ್ತ ನೆಟ್ಟಿದೆ. ಒಲಿಂಪಿಯನ್ ನೀರಜ್ ಚೋಪ್ರಾ ಅವರ ಮುಂದಾಳತ್ವದ ಅಥ್ಲೆಟಿಕ್ಸ್ ತಂಡದ ಮೇಲೆ ಈಗ ಎಲ್ಲರ ಕಣ್ಣಿದೆ. ಕಳೆದ ಮೂರು ದಶಕಗಳಲ್ಲಿ ಅತ್ಯಂತ ಮಿತವ್ಯಯದ ಕಾಮನ್ವೆಲ್ತ್ ಕೂಟ ಇದಾಗಿದೆ. 74 ದೇಶಗಳ 3000 ಅಥ್ಲೀಟ್ಗಳು ಕಣಕ್ಕಿಳಿಯಲಿದ್ದಾರೆ. ನಾಲ್ಕು ತಾಣಗಳಲ್ಲಿ ನಡೆಯಲಿರುವ 10 ಕ್ರೀಡಾ ಪ್ರಕಾರಗಳಲ್ಲಿ ಸ್ಪರ್ಧಿಸಲಿದ್ದಾರೆ.ಇದೇ ಆರು ಪ್ಯಾರಾ ಸ್ಪೋರ್ಟ್ಸ್ ಕೂಡ ಏಕಕಾಲಕ್ಕೆ ಆಯೋಜನೆಯಾಗಲಿವೆ. 2023ರಲ್ಲಿ ಆಸ್ಟ್ರೇಲಿಯಾದ ರಾಜ್ಯ ವಿಕ್ಟೋರಿಯಾವು ಕಾಮನ್ವೆಲ್ತ್ ಕೂಟದ ಆಯೋಜನೆಯಿಂದ ಹಿಂದೆ ಸರಿದಿತ್ತು. ದುಬಾರಿ ವೆಚ್ಚದಿಂದಾಗಿ ಆತಿಥ್ಯ ರದ್ದುಗೊಳಸಿತ್ತು. ಅಲ್ಲದೇ ಕಾಮನ್ವೆಲ್ತ್ ಕೂಟದ ಭವಿಷ್ಯವೂ ಡೋಲಾಯಮಾನವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೆಲ್ಲದರ ನಡುವೆ ಕೂಟದ ಅಸ್ತಿತ್ವ ಉಳಿಸಿಕೊಳ್ಳಲು ಗ್ಲಾಸ್ಗೊ ಮುಂದಾಗಿ, ಆತಿಥ್ಯ ವಹಿಸಿದೆ. 2014ರಲ್ಲಿ ಇಲ್ಲಿಯೇ ನಡೆದಿದ್ದ ಕೂಟವು ಯಶಸ್ವಿಯಾಗಿತ್ತು. 2022ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿದ್ದ ಕೂಟಕ್ಕೆ ₹ 2064 ಕೋಟಿ ಮಿಲಿಯನ್ ಪೌಂಡ್ ಖರ್ಚಾಗಿತ್ತು. ಈ ಬಾರಿ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕೂಟಕ್ಕೆ ಬರ್ಮಿಂಗ್ಹ್ಯಾಮ್ಗಿಂತಲೂ ಶೇ 60ರಷ್ಟು ಹಣವನ್ನು ವಿನಿಯೋಗಿಸಲಾಗುತ್ತಿದೆ. ಮಿತವ್ಯಯದ ಮೂಲಕವೂ ಕ್ರೀಡಾಕೂಟವನ್ನು ಜೀವಂತವಾಗಿರಿಸಬಹುದು ಎಂಬ ಸಂದೇಶ ನೀಡಲು ಆಯೋಜಕರು ಸಿದ್ಧರಾಗಿದ್ದಾರೆ.ಆದರೆ; ಕುಸ್ತಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಶೂಟಿಂಗ್ ಈ ಬಾರಿ ಆಯೋಜನೆಯಾಗುತ್ತಿಲ್ಲ. ಭಾರತದ ಮಟ್ಟಿಗೆ ಅತಿ ಹೆಚ್ಚು ಪದಕ ಗೆಲ್ಲುವ ಕ್ರೀಡೆಗಳು ಇವಾಗಿವೆ. ಹೋದ ಸಲ ಭಾರತವು ಗೆದ್ದ 61 ಪದಕಗಳ ಪೈಕಿ 25 ಇದೇ ಕ್ರೀಡೆಗಳಿಂದ ಒಲಿದಿದ್ದವು. ಅಥ್ಲೆಟಿಕ್ಸ್ನಲ್ಲಿ ಭಾರತವು 32 ಅಥ್ಲೀಟ್ಗಳನ್ನು ಕಣಕ್ಕಿಳಿಸುತ್ತಿದೆ. 22 ಪದಕಗಳನ್ನು ಜಯಿಸುವ ಅವಕಾಶ ಈ ವಿಭಾಗದಲ್ಲಿದೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಅವರಿಗೆ ಶ್ರೀಲಂಕಾದ ರುಮೇಶ್ ತರಂಗಾ ಮತ್ತು ಪಾಕಿಸ್ತಾನದ ಅರ್ಷದ್ ನದೀಂ ಅವರು ಕಠಿಣ ಸವಾಲೊಡ್ಡುವ ಸವಾಲಿದೆ. ರುಮೇಶ್ ಅವರು ಈಚೆಗೆ ರೋಮ್ ಡೈಮಂಡ್ ಲೀಗ್ ನಲ್ಲಿ 92.62 ಮೀ ಎಸೆತದ ಸಾಧನೆ ಮಾಡಿದ್ದರು. ಹೈಜಂಪ್ ಅಥ್ಲೀಟ್ ಸರ್ವೇಶ್ ಕುಶಾರೆ, ಲಾಂಗ್ಜಂಪ್ನಲ್ಲಿ ಮುರಳಿ ಶ್ರೀಶಂಕರ್, ಟ್ರಿಪಲ್ ಜಂಪ್ನಲ್ಲಿ ಪ್ರವೀಣ ಚಿತ್ರವೇಲ್ ಮತ್ತು ಪುರುಷ ಹಾಗೂ ಮಹಿಳೆಯರ 4X400 ಮೀ ರಿಲೆ ತಂಡಗಳೂ ಪದಕಗೆಲುವಿನ ಭರವಸೆ ಮೂಡಿಸಿವೆ.ವೇಟ್ಲಿಫ್ಟಿಂಗ್ನಲ್ಲಿ ಒಲಿಂಪಿಯನ್ ಮೀರಾಬಾಯಿ ಚಾನು, ಬಾಕ್ಸಿಂಗ್ನಲ್ಲಿ ಲವ್ಲಿನಾ ಬೊರ್ಗೊಹೈನ್, ಜೈಸ್ಮೈನ್ ಲಂಬೊರಿಯಾ, ಪ್ರೀತಿ ಪವಾರ್, ಸಾಕ್ಷಿ ಚೌಧರಿ ಮತ್ತು ಅರುಂಧತಿ ಚೌಧರಿ ಮಹಿಳೆಯರ ವಿಭಾಗದ ಸವಾಲನ್ನುಮುನ್ನಡೆಸಲಿದ್ದಾರೆ. ಪುರುಷರ ಬಾಕ್ಸಿಂಗ್ನಲ್ಲಿ ನರೇಂದರ್ ಬೆರವಾಲ್ ಮತ್ತು ಸಿಚನ್ ಸಿವಾಚ್ ಮೇಲೆ ವಿಶ್ವಾಸ ಇದೆ. ಕಳೆದ ಬಾರಿ ಜುಡೊ ವಿಭಾಗದಲ್ಲಿ ಮೂರು ಪದಕಗಳು ಒಲಿದಿದ್ದವು.ಪ್ಯಾರಾ ಅಥ್ಲೀಟ್ಗಳು ಕೂಡ ತಮ್ಮ ಸಾಮರ್ಥ್ಯ ಮೆರೆಯುವ ಛಲದಲ್ಲಿದ್ದಾರೆ.