ಜೆನೆರಿಕ್ ಔಷಧ ಮೇಲೆ ಭಾರಿ ಸುಂಕ ವಿಧಿಸಲಿರುವ ಅಮೆರಿಕ: ಭಾರತಕ್ಕೆ ತಟ್ಟಲಿದೆ ಬಿಸಿ
ವಾಷಿಂಗ್ಟನ್: ದೇಶೀಯವಾಗಿ ಔಷಧಿ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶಕ್ಕೆ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ ಮೇಲೆ ಭಾರಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ಈ ಹೊಸ ಸುಂಕ ವ್ಯವಸ್ಥೆ 2028ರ ಆಗಸ್ಟ್ನಿಂದ ಜಾರಿಯಾಗಲಿದೆ. ಇದರಿಂದ ಅಮೆರಿಕಕ್ಕೆ ಅತಿ ಹೆಚ್ಚು ಜೆನೆರಿಕ್ ಔಷಧಗಳನ್ನು ರಫ್ತು ಮಾಡುವ ಭಾ

ವಾಷಿಂಗ್ಟನ್: ದೇಶೀಯವಾಗಿ ಔಷಧಿ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶಕ್ಕೆ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ ಮೇಲೆ ಭಾರಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ಈ ಹೊಸ ಸುಂಕ ವ್ಯವಸ್ಥೆ 2028ರ ಆಗಸ್ಟ್ನಿಂದ ಜಾರಿಯಾಗಲಿದೆ. ಇದರಿಂದ ಅಮೆರಿಕಕ್ಕೆ ಅತಿ ಹೆಚ್ಚು ಜೆನೆರಿಕ್ ಔಷಧಗಳನ್ನು ರಫ್ತು ಮಾಡುವ ಭಾರತದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾಮಾಜಿಕ ಮಾಧ್ಯಮ 'ಟ್ರುಥ್'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, 2026ರ ಆಗಸ್ಟ್ 1ರಿಂದ ಜಾರಿಯಾಗುವಂತೆ ಮುಂದಿನ ಎರಡು ವರ್ಷಗಳ ಕಾಲ ಅಮೆರಿಕಕ್ಕೆ ಆಮದಾಗುವ ಎಲ್ಲ ಜೆನೆರಿಕ್ ಔಷಧಗಳ ಮೇಲೆ ಸುಂಕವು ಶೂನ್ಯವಾಗಿರಲಿದೆ. ನಂತರದ ಒಂದು ವರ್ಷದ ಅವಧಿಗೆ ಸುಂಕವನ್ನು ಶೇ 100ರಷ್ಟು ಬಳಿಕ ಶೇ 200ರಷ್ಟು ಹೆಚ್ಚಿಸಲಾಗುವುದು' ಎಂದು ಹೇಳಿದ್ದಾರೆ. ಅಮೆರಿಕದಲ್ಲೇ ಜೆನೆರಿಕ್ ಔಷಧಗಳನ್ನು ಉತ್ಪಾದಿಸುವುದು ಈ ನೀತಿಯ ಹಿಂದಿನ ಉದ್ದೇಶವಾಗಿದೆ. 'ಅಮೆರಿಕದ ಜನರ ಹಿತರಕ್ಷಣೆಯೇ ಗುರಿ' ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಈ ನೀತಿಯಿಂದ 'ಫಾರ್ಮಸಿ ಆಫ್ ದಿ ವರ್ಲ್ಡ್' ಎನಿಸಿರುವ ಭಾರತಕ್ಕೆ ತೀವ್ರ ಹಿನ್ನೆಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್ಐ) ವರದಿ ಪ್ರಕಾರ, 2025ರಲ್ಲಿ ಭಾರತವು ಒಟ್ಟು 25.8 ಬಿಲಿಯನ್ ಡಾಲರ್ ಮೌಲ್ಯದ ಔಷಧಗಳನ್ನು ರಫ್ತು ಮಾಡಿದ್ದು, ಇದರಲ್ಲಿ ಶೇ 38ರಷ್ಟು (9.7 ಬಿಲಿಯನ್ ಡಾಲರ್) ಪಾಲು ಅಮೆರಿಕಕ್ಕೆ ರಫ್ತಾಗಿದೆ.ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಸಾಂಕ್ರಾಮಿಕ ರೋಗಗಳು ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ತಯಾರಾಗುವ ಜೆನೆರಿಕ್ ಮಾತ್ರೆಗಳನ್ನು ಅಮೆರಿಕದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.ಬ್ರ್ಯಾಂಡ್ ಬಂಧನವಿರದ ಜೆನೆರಿಕ್ ಔಷಧಜೆನೆರಿಕ್ ಔಷಧಿಗಳೆಂಬ ವಂಚನೆಯ ಮಹಾಜಾಲ