ಖಗೋಳ ಅಧ್ಯಯನದ ಜಾಗ ‘ಜಂತರ್ ಮಂತರ್’ ಪ್ರತಿಭಟನೆಗಳ ಕೇಂದ್ರವಾಗಿದ್ದು ಹೇಗೆ?
ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಯ ಸದ್ದು ಜೋರಾಗಿದೆ. ಜಂತರ್ ಮಂತರ್ ಬಳಿ ಪ್ರತಿಭಟನಾಕಾರರ ದಂಡೇ ಜಮಾಯಿಸಿದೆ. ಆದರೆ ನಿಜವಾಗಿಯೂ ಜಂತರ್ ಮಂತರ್ ಪ್ರತಿಭಟನೆ ಮಾಡುವ ಸ್ಥಳವೇ, ಎಂದು ಕೇಳಿದರೆ ಅಲ್ಲ ಎನ್ನುತ್ತದೆ ಇತಿಹಾಸ. ಜಂತರ್ ಮಂತರ್ಗೆ 300 ವರ್ಷಗಳ ಇತಿಹಾಸವಿದೆ. ಇದು 18ನೇ ಶತಮಾನದಲ್ಲಿ ನಿರ್ಮಿಸಲಾದ ಪ್ರಾಚೀನ ಖಗೋಳ ವೀಕ್ಷಣ

ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಯ ಸದ್ದು ಜೋರಾಗಿದೆ. ಜಂತರ್ ಮಂತರ್ ಬಳಿ ಪ್ರತಿಭಟನಾಕಾರರ ದಂಡೇ ಜಮಾಯಿಸಿದೆ. ಆದರೆ ನಿಜವಾಗಿಯೂ ಜಂತರ್ ಮಂತರ್ ಪ್ರತಿಭಟನೆ ಮಾಡುವ ಸ್ಥಳವೇ, ಎಂದು ಕೇಳಿದರೆ ಅಲ್ಲ ಎನ್ನುತ್ತದೆ ಇತಿಹಾಸ. ಜಂತರ್ ಮಂತರ್ಗೆ 300 ವರ್ಷಗಳ ಇತಿಹಾಸವಿದೆ. ಇದು 18ನೇ ಶತಮಾನದಲ್ಲಿ ನಿರ್ಮಿಸಲಾದ ಪ್ರಾಚೀನ ಖಗೋಳ ವೀಕ್ಷಣಾಲಯಗಳ ಸಮುಚ್ಛಯವಾಗಿದೆ.ಆಕಾಶ ಅಧ್ಯಯನಕ್ಕೆ ನಿರ್ಮಿಸಿದ್ದ ಜಾಗಪ್ರತಿಭಟನೆಗಳ ಕೇಂದ್ರವಾಗಿರುವ ಜಂತರ್ ಮಂತರ್ ನಿರ್ಮಾಣವಾಗಿದ್ದು, ಖಗೋಳ ವೀಕ್ಷಣಾಲಯಕ್ಕಾಗಿ. ಜೈಪುರದ ಕಚ್ವಾಹಾ ರಜಪೂತ ಮನೆತನದ ಮಹಾರಾಜ 2ನೇ ಸವಾಯಿ ಜೈ ಸಿಂಗ್ ಆದೇಶದ ಮೇರೆಗೆ ಇದನ್ನು ನಿರ್ಮಿಸಲಾಗಿತ್ತು. 1724 ರಲ್ಲಿ ಇದು ಪೂರ್ಣಗೊಂಡು ಪ್ರಮುಖ ವೀಕ್ಷಣಾಲಯವಾಗಿ ಹೊರಹೊಮ್ಮಿತ್ತು. ಉತ್ತರ ಭಾರತದಾದ್ಯಂತ ನಿರ್ಮಿಸಿದ ಐದು ವೀಕ್ಷಣಾಲಯಗಳ ಪೈಕಿ ಜಂತರ್ ಮಂತರ್ ಮೊದಲನೆಯದು. ಇದರ ನಂತರ ಜೈಪುರ, ಉಜ್ಜಯಿನಿ, ವಾರಾಣಸಿ ಮತ್ತು ಮಥುರಾದಲ್ಲಿ ಇಂತಹ ವೀಕ್ಷಣಾಲಯಗಳನ್ನು ನಿರ್ಮಿಸಲಾಯಿತು.ಖಗೋಳದಲ್ಲಿ ಆಸಕ್ತಿ ಹೊಂದಿದ್ದ ಜೈ ಸಿಂಗ್ಮಹಾರಾಜ ಜೈ ಸಿಂಗ್ಗೆ ಖಗೋಳಶಾಸ್ತ್ರ ಎಂದರೆ ಎಲ್ಲಿಲ್ಲದ ಆಸಕ್ತಿ. ಆಕಾಶಕಾಯಗಳ ವೀಕ್ಷಣೆ ನಿಖರವಾಗಿರಬೇಕೆಂದು ಕೇವಲ ಸಣ್ಣ ಉಪಕರಣಗಳನ್ನೇ ನೆಚ್ಚಿಕೊಳ್ಳದೆ, ಆಕಾಶಕಾಯಗಳ ಸ್ಥಾನವನ್ನು ಅಳೆಯಲು, ಸಮಯವನ್ನು ಲೆಕ್ಕಹಾಕಲು ಹಾಗೂ ಪಂಚಾಂಗ ಮತ್ತು ನೌಕಾಯಾನದಲ್ಲಿ ಬಳಸುವ ಖಗೋಳ ಕೋಷ್ಟಕಗಳನ್ನು ಸುಧಾರಿಸಲು ಬೃಹತ್ ಕಲ್ಲಿನ ರಚನೆಗಳನ್ನು ನಿರ್ಮಿಸಿದ್ದರು. ಇಂದಿಗೂ, ಜಂತರ್ ಮಂತರ್ನ ಆಕಾರ ದೆಹಲಿಯ ಬಹುತೇಕ ಐತಿಹಾಸಿಕ ಸ್ಮಾರಕಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಇದು ಕೋಟೆಯೂ ಅಲ್ಲ, ಅರಮನೆಯೂ ಅಲ್ಲ. ಬದಲಾಗಿ, ಇದು ಒಂದು ವೈಜ್ಞಾನಿಕ ಸ್ಮಾರಕವಾಗಿ ನಿಂತಿದೆ.ಆಳ–ಅಗಲ | ಉಪವಾಸ ಸತ್ಯಾಗ್ರಹ: ‘ಖಾಲಿ ಹೊಟ್ಟೆ’ಯ ಕಿಚ್ಚು20 ದಿನಗಳಿಗೂ ಹೆಚ್ಚು ಉಪವಾಸವಿರಲು ಸಾಧ್ಯವೇ, ಅಂಗಾಂಗಗಳ ಮೇಲಾಗುವ ಪರಿಣಾಮವೇನು?ಜಂತರ್ ಮಂತರ್ ಎಂದರೇನು?ಜಂತರ್ ಮಂತರ್ ಎಂಬ ಹೆಸರು ಸಂಸ್ಕೃತ ಪದವಾದ ‘ಯಂತ್ರ’ದಿಂದ ಬಂದಿದೆ ಎನ್ನಲಾಗಿದೆ. ಇದರರ್ಥ ‘ಉಪಕರಣ’.ಇಲ್ಲಿ ಹಲವಾರು ಬೃಹತ್ ಖಗೋಳ ಉಪಕರಣಗಳಿವೆ. ಇವುಗಳಲ್ಲಿ ಪ್ರತಿಯೊಂದೂ ಸೂರ್ಯನ ಚಲನೆಯನ್ನು ಗಮನಿಸುವುದರಿಂದ ಹಿಡಿದು, ಸಮಯವನ್ನು ನಿರ್ಧರಿಸುವುದು ಮತ್ತು ಆಕಾಶಕಾಯಗಳ ವೀಕ್ಷಿಸುವವರೆಗೆ ವಿನ್ಯಾಸಗೊಳಿಸಲಾಗಿದೆ.ಸಾರ್ವಜನಿಕ ಸಭೆಯ ತಾಣವಾಗಿದ್ದು...20ನೇ ಶತಮಾನದ ಅಂತ್ಯದವರೆಗೂ, ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗಳು ಸಾಮಾನ್ಯವಾಗಿ ಇಂಡಿಯಾ ಗೇಟ್ ಸಮೀಪವಿರುವ ‘ಬೋಟ್ ಕ್ಲಬ್’ ಆವರಣದಲ್ಲಿ ನಡೆಯುತ್ತಿದ್ದವು.1980ರ ಸಮಯದಲ್ಲಿ ಜಂತರ್ ಮಂತರ್ ರಸ್ತೆಯಲ್ಲಿ ಆಯೋಜನೆಗೊಳ್ಳುತ್ತಿದ್ದವು. 1990ರ ವೇಳೆಗೆ ಜಂತರ್ ಮಂತರ್, ಪ್ರತಿಭಟನೆಗಳ ಪ್ರಮುಖ ಕೇಂದ್ರವಾಗಿ ಬದಲಾಯಿತು. ಇದು ನಗರದ ಮಧ್ಯಭಾಗದಲ್ಲಿದೆ. ಜತೆಗೆ ಸಂಸತ್ ಮತ್ತು ಪ್ರಮುಖ ಸರ್ಕಾರಿ ಕಚೇರಿಗಳಿಗೂ ಹತ್ತಿರವಿದೆ. ಅಲ್ಲದೆ ನಗರದಲ್ಲಿ ಸಂಚಾರ ಅಥವಾ ಇನ್ಯಾವುದಕ್ಕೂ ಅಡ್ಡಿಯುಂಟು ಮಾಡದ ಜಾಗದಲ್ಲಿ ಇರುವುದರಿಂದ ಕಾಲಕ್ರಮೇಣ, ನಾಗರಿಕರ, ಸಂಘಟನೆಗಳ ಸಾರ್ವಜನಿಕವಾಗಿ ನಡೆಸುವ ಪ್ರತಿಭಟನೆ, ಸಭೆಯ ತಾಣವಾಗಿ ಮಾರ್ಪಟ್ಟಿತು. ಈಗ ದೆಹಲಿಯಲ್ಲಿ ಪ್ರಮುಖ ಪ್ರತಿಭಟನೆಗಳ ಕೇಂದ್ರವಾಗಿ ಜಂತರ್ ಮಂತರ್ ಹೆಸರು ಪಡೆದುಕೊಂಡಿದೆ. ಮಾಹಿತಿ: ಬೆಟರ್ ಇಂಡಿಯಾ, ಫಸ್ಟ್ ಪೋಸ್ಟ್