ಕುಡಿದು ವಾಹನ ಚಾಲನೆ: ತಪ್ಪೊಪ್ಪಿಕೊಂಡ ಡೇವಿಡ್ ವಾರ್ನರ್
ಮೆಲ್ಬರ್ನ್: ಆಸ್ಟ್ರೇಲಿಯಾದ ಮಾಜಿ ಆರಂಭ ಆಟಗಾರ ಡೇವಿಡ್ ವಾರ್ನರ್ ಅವರು ಮದ್ಯಸೇವಿಸಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.ಅವರಿಗೆ 9 ತಿಂಗಳ ಜೈಲು ಶಿಕ್ಷೆಯಾಗುವ ಸಂಭವವಿದೆ. ಸಿಡ್ನಿಯಲ್ಲಿ ಏಪ್ರಿಲ್ 5ರಂದು ಅವರು ಮದ್ಯಸೇವಿಸಿ ಕಾರು ಚಾಲನೆ ಮಾಡುವಾಗ ಸಿಕ್ಕಿಬಿದ್ದಿದ್ದರು. ಅವರು ತಮ್ಮ ವಕೀಲ ಬಾಬಿ ಹಿಲ್ ಮೂಲಕ ಸಿಡ್ನಿಯ ನ್ಯಾಯಾಲಯದಲ

ಮೆಲ್ಬರ್ನ್: ಆಸ್ಟ್ರೇಲಿಯಾದ ಮಾಜಿ ಆರಂಭ ಆಟಗಾರ ಡೇವಿಡ್ ವಾರ್ನರ್ ಅವರು ಮದ್ಯಸೇವಿಸಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.ಅವರಿಗೆ 9 ತಿಂಗಳ ಜೈಲು ಶಿಕ್ಷೆಯಾಗುವ ಸಂಭವವಿದೆ. ಸಿಡ್ನಿಯಲ್ಲಿ ಏಪ್ರಿಲ್ 5ರಂದು ಅವರು ಮದ್ಯಸೇವಿಸಿ ಕಾರು ಚಾಲನೆ ಮಾಡುವಾಗ ಸಿಕ್ಕಿಬಿದ್ದಿದ್ದರು. ಅವರು ತಮ್ಮ ವಕೀಲ ಬಾಬಿ ಹಿಲ್ ಮೂಲಕ ಸಿಡ್ನಿಯ ನ್ಯಾಯಾಲಯದಲ್ಲಿ ತಪ್ಪನ್ನು ಒಪ್ಪಿಕೊಂಡಿದ್ದಾರೆ.ಆಗಸ್ಟ್ 18ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗುವುದು. ಅವರಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿವರೆಗೆ ದಂಡ ತೆರಬೇಕಾಗಿ ಬರಬಹುದು.‘ಮದ್ಯಪಾನದ ನಂತರ ಊಬರ್ ಸೇವೆ ಪಡೆಯುವ ಬದಲು ಸ್ವಂತ ಕಾರು ಚಲಾಯಿಸಿದ್ದು ಬೇಕಾಬಿಟ್ಟಿ ನಿರ್ಧಾರ ಎಂದು ವಾರ್ನರ್ ಒಪ್ಪಿಕೊಂಡಿದ್ದಾರೆ’ ಎಂದು ಹಿಲ್ ನಂತರ ವರದಿಗಾರರಿಗೆ ತಿಳಿಸಿದ್ದಾರೆ.
Read the complete story at Prajavani