ಶಿರಸಿಯಲ್ಲಿ ಆಗಸ್ಟ್ 9 ರಂದು 'ಗುರುವಂದನಾ' ಸಂಗೀತ ಕಾರ್ಯಕ್ರಮ ಆಯೋಜನೆ
ಶಿರಸಿ: ಇಲ್ಲಿನ ನಿನಾದ ಸಂಗೀತ ಸಭಾ ವತಿಯಿಂದ ಆ. 9ರಂದು ನಗರದ ಸಾಮ್ರಾಟ್ ವಿನಾಯಕ ಹಾಲ್ನಲ್ಲಿ ‘ಗುರುವಂದನಾ’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಂದ ಗಾಯನ ನಡೆಯಲಿದೆ. ಸಂಜೆ 5ಕ್ಕೆ ಪಂ. ಶ್ರೀಪಾದ ಹಾಗೂ ವಿದುಷಿ ಬಕುಲಾ ಹೆಗಡೆ ಅವರಿಂದ ಗಾಯನ ಜುಗಲ್ಬಂಧಿ ಜರುಗಲಿದೆ. ಸಂಜೆ 6 ಗಂಟೆಗೆ ತಬಲಾ ಗುರು ವಿದ್ವಾನ್ ಎಂ.

ಶಿರಸಿ: ಇಲ್ಲಿನ ನಿನಾದ ಸಂಗೀತ ಸಭಾ ವತಿಯಿಂದ ಆ. 9ರಂದು ನಗರದ ಸಾಮ್ರಾಟ್ ವಿನಾಯಕ ಹಾಲ್ನಲ್ಲಿ ‘ಗುರುವಂದನಾ’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಂದ ಗಾಯನ ನಡೆಯಲಿದೆ. ಸಂಜೆ 5ಕ್ಕೆ ಪಂ. ಶ್ರೀಪಾದ ಹಾಗೂ ವಿದುಷಿ ಬಕುಲಾ ಹೆಗಡೆ ಅವರಿಂದ ಗಾಯನ ಜುಗಲ್ಬಂಧಿ ಜರುಗಲಿದೆ. ಸಂಜೆ 6 ಗಂಟೆಗೆ ತಬಲಾ ಗುರು ವಿದ್ವಾನ್ ಎಂ.ಜಿ. ಭಟ್ ನೆಬ್ಬೂರು ಅವರಿಗೆ ಸನ್ಮಾನ ಕಾರ್ಯಕ್ರಮವಿದ್ದು, ಪಂ. ಎಂ.ಪಿ.ಹೆಗಡೆ, ಅಶೋಕ ಹಾಸ್ಯಗಾರ ಪಾಲ್ಗೊಳ್ಳುವರು. ಸಂಜೆ 7ರಿಂದ ಉಸ್ತಾದ್ ಫಯಾಜ್ ಖಾನ್ ಅವರಿಂದ ವಿಶೇಷ ಗಾಯನ ನಡೆಯಲಿದ್ದು, ಪಂ. ಗೋಪಾಲಕೃಷ್ಣ ಹೆಗಡೆ ಮತ್ತು ಅಜಯ ಹೆಗಡೆ ಸಹವಾದನ ನೀಡುವರು.ಭಾಸ್ಕರ ಹೆಗಡೆ ಮುತ್ತಿಗೆ, ಡಾ. ಸಮೀರ್ ಬದ್ರಿ ಸೇರಿದಂತೆ ಹಲವು ಸಹಕಲಾವಿದರು ಭಾಗವಹಿಸಲಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಸ್ಥೆ ಕೋರಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260722-20-730796814