ಸಿಎಜಿ-ಐಸಿಎಸ್ಎಸ್ಆರ್ ಲೇಖನ ಸ್ಪರ್ಧೆ: ₹1.25 ಲಕ್ಷ ಬಹುಮಾನ ಪಡೆಯುವ ಅವಕಾಶ...
ಭಾರತೀಯ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ (ಐಸಿಎಸ್ಎಸ್ಆರ್) ಜೊತೆ ಕೈಜೋಡಿಸಿ, ಸಿಎಜಿ-ಐಸಿಎಸ್ಎಸ್ಆರ್ ಸಂಶೋಧನಾ ಲೇಖನ ಸ್ಪರ್ಧೆ 2026 (CAG-ICSSR Research Article Competition 2026) ಆಯೋಜಿಸಿದೆ. ಈ ಸ್ಪರ್ಧೆಯು ಸುಮಾರು ₹1 ಕೋಟಿ ಬಹುಮಾನದ ಮೊತ್ತ ಒಳಗೊಂಡಿದೆ.ಯುವ ನಾಯಕರನ್ನು ದೇಶದ ಸಾರ್ವಜನಿಕ ಹಣಕಾಸು ನಿರ್

ಭಾರತೀಯ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ (ಐಸಿಎಸ್ಎಸ್ಆರ್) ಜೊತೆ ಕೈಜೋಡಿಸಿ, ಸಿಎಜಿ-ಐಸಿಎಸ್ಎಸ್ಆರ್ ಸಂಶೋಧನಾ ಲೇಖನ ಸ್ಪರ್ಧೆ 2026 (CAG-ICSSR Research Article Competition 2026) ಆಯೋಜಿಸಿದೆ. ಈ ಸ್ಪರ್ಧೆಯು ಸುಮಾರು ₹1 ಕೋಟಿ ಬಹುಮಾನದ ಮೊತ್ತ ಒಳಗೊಂಡಿದೆ.ಯುವ ನಾಯಕರನ್ನು ದೇಶದ ಸಾರ್ವಜನಿಕ ಹಣಕಾಸು ನಿರ್ವಹಣೆ, ಆಡಳಿತ, ಪಾರದರ್ಶಕತೆ ಮತ್ತು ನೀತಿ ನಿರೂಪಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ.ಸ್ಪರ್ಧೆಯಲ್ಲಿ ಭಾಗವಹಿಸುವವರು CAG ನೀಡುವ ವಿವಿಧ ಆಡಿಟ್ ವರದಿಗಳು ಮತ್ತು ಸಾರ್ವಜನಿಕ ದತ್ತಾಂಶಗಳನ್ನು ಆಧರಿಸಿ ಕೆಳಗಿನ ಪ್ರಮುಖ ವಿಷಯಗಳ ಅಡಿಯಲ್ಲಿ ಸಂಶೋಧನಾ ಲೇಖನಗಳನ್ನು ಸಿದ್ಧಪಡಿಸಬೇಕಾಗುತ್ತದೆ.ಈ ಕೆಳಗಿನ ವಿಷಯಗಳ ಮೇಲೆ ಇರಲಿ ನಿಮ್ಮ ಲೇಖನಹಣಕಾಸಿನ ಒಕ್ಕೂಟ ವ್ಯವಸ್ಥೆ ಮತ್ತು ಆಡಳಿತಸಾಮಾಜಿಕ ವಲಯದ ಖರ್ಚು ಮತ್ತು ಅಭಿವೃದ್ಧಿಕೌಶಲ, ಉದ್ಯೋಗ ಸೃಷ್ಟಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEs)ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಬಲೀಕರಣ ಭಾಗವಹಿಸುವವರಿಗೆ ಇರಬೇಕಾದ ಅರ್ಹತೆಗಳು: ಭಾರತದ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಪದವಿ (UG), ಸ್ನಾತಕೋತ್ತರ (PG) ಮತ್ತು ಪಿಎಚ್.ಡಿ (Ph.d) ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.ಒಬ್ಬ ಸ್ಪರ್ಧಿ ಒಂದು ಲೇಖನವನ್ನು ಮಾತ್ರ ಸಲ್ಲಿಸಬಹುದು.ಜಂಟಿ ಲೇಖನಗಳಿಗೆ (Co-authoring) ಅವಕಾಶ ಇರುವುದಿಲ್ಲ. ಗರಿಷ್ಠ ಪದಗಳು (Words Limit): ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು 4,000 ದಿಂದ 5,000 ಪದಗಳ ಲೇಖನ ಸಿದ್ದಪಡಿಸಬಹುದು.ಪಿಎಚ್.ಡಿ ಸಂಶೋಧಕರು 5,000 ದಿಂದ 6,000 ಪದಗಳ ಲೇಖನ ಸಿದ್ದಪಡಿಸಬಹುದು.ಭಾಷೆ: ರಾಜ್ಯ ಮಟ್ಟದ ಲೇಖನಗಳನ್ನು ಕನ್ನಡ ಸೇರಿದಂತೆ ವಿವಿಧ ಸಂವಿಧಾನದ ಪರಿಶಿಷ್ಟ ಭಾಷೆಗಳಲ್ಲಿ ಬರೆಯಬಹುದು. ರಾಷ್ಟ್ರೀಯ ಮಟ್ಟದ ಲೇಖನಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಯಬೇಕು.ಬಹುಮಾನಗಳು ಮತ್ತು ಗೌರವ: ಈ ಆಂದೋಲನಕ್ಕಾಗಿ CAG ಒಟ್ಟು ₹1 ಕೋಟಿಗೂ ಅಧಿಕ ಬಹುಮಾನ ಮೊತ್ತ ನಿಗದಿಪಡಿಸಿದೆ. ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದೆ.ಬಹುಮಾನದ ಮೊತ್ತರಾಜ್ಯ ಮಟ್ಟಪ್ರಥಮ ಬಹುಮಾನ: ₹75,000ಎರಡನೇ ಬಹುಮಾನ: ₹50,000ಮೂರನೇ ಬಹುಮಾನ: ₹25,000ರಾಷ್ಟ್ರೀಯ ಮಟ್ಟಪ್ರಥಮ ಬಹುಮಾನ: ₹1,25,000 ಎರಡನೇ ಬಹುಮಾನ: ₹1,00,000ಮೂರನೇ ಬಹುಮಾನ: ₹75,000 ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದವರಿಗೆ 2026ರ ನವೆಂಬರ್ 16ರಂದು ನಡೆಯಲಿರುವ 'ಆಡಿಟ್ ದಿವಸ್' (Audit Diwas) ಸಮ್ಮೇಳನದಲ್ಲಿ ನವದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಪ್ರಮುಖ ದಿನಾಂಕಗಳುನೊಂದಣಿ ಹಾಗೂ ಅರ್ಜಿ ಆರಂಭ: ಜೂನ್ 1ರಾಜ್ಯ ಮಟ್ಟದ ಲೇಖನ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 31ರಾಷ್ಟ್ರೀಯ ಮಟ್ಟದ ಸಲ್ಲಿಕೆಯ ಅಂತಿಮ ದಿನಾಂಕ: ಸೆಪ್ಟೆಂಬರ್ 30ರಾಷ್ಟ್ರೀಯ ಪ್ರಶಸ್ತಿ ಪ್ರಧಾನ: ನವೆಂಬರ್ 16ಅರ್ಜಿ ಸಲ್ಲಿಸುವುದು ಹೇಗೆ? ಮೊದಲು ICSSR ಅಧಿಕೃತ ಜಾಲತಾಣವಾದ www.icssr.org ಗೆ ಭೇಟಿ ನೀಡಿ.'CAG-ICSSR Research Article Competition 2026' ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳಿ. ನಿಮ್ಮ ಕಾಲೇಜು/ವಿಶ್ವವಿದ್ಯಾಲಯದಿಂದ ನೀಡಲಾದ ಬೋನಾಫೈಡ್ ಪ್ರಮಾಣಪತ್ರ ಮತ್ತು ನಿಮ್ಮ ಆಧಾರಿತ ಆಡಿಟ್ ವರದಿಯನ್ನು ಆಧರಿಸಿದ ಮೂಲ ಸಂಶೋಧನಾ ಲೇಖನವನ್ನು ಪಿಡಿಎಫ್ (PDF) ರೂಪದಲ್ಲಿ ಅಪ್ಲೋಡ್ ಮಾಡಿ.