‘ನೀಟ್’ ಅಕ್ರಮದ ವಿರುದ್ಧ ಹೋರಾಟ: ಬಿಜೆಪಿ ಶಾಸಕನ ಮೇಲೆ ಮೊಟ್ಟೆ ಎಸೆತ
ಬೆಂಗಳೂರು: ‘ನೀಟ್’ ಅಕ್ರಮದ ವಿರುದ್ಧ ನಡೆಯುತ್ತಿರುವ ಹೋರಾಟವು ನಗರದಲ್ಲಿ ಬುಧವಾರ ಮಧ್ಯಾಹ್ನ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು–ಮುಖಂಡರ ನಡುವೆ ಜಟಾಪಟಿ, ವಾಗ್ವಾದಕ್ಕೆ ಕಾರಣವಾಯಿತು.ಕೆಪಿಸಿಸಿ ಕಚೇರಿ ಬಳಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯುತ್ತಿದ್ದ ವೇಳೆ, ದಾವಣಗೆರೆ ಜಿಲ್ಲೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರ ಮೇಲೆ ಮೊಟ್ಟೆ

ಬೆಂಗಳೂರು: ‘ನೀಟ್’ ಅಕ್ರಮದ ವಿರುದ್ಧ ನಡೆಯುತ್ತಿರುವ ಹೋರಾಟವು ನಗರದಲ್ಲಿ ಬುಧವಾರ ಮಧ್ಯಾಹ್ನ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು–ಮುಖಂಡರ ನಡುವೆ ಜಟಾಪಟಿ, ವಾಗ್ವಾದಕ್ಕೆ ಕಾರಣವಾಯಿತು.ಕೆಪಿಸಿಸಿ ಕಚೇರಿ ಬಳಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯುತ್ತಿದ್ದ ವೇಳೆ, ದಾವಣಗೆರೆ ಜಿಲ್ಲೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಈ ಘಟನೆಯಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು, ಆಕ್ರೋಶ ಹೊರಹಾಕಿದರು. ಪರಸ್ಪರ ಧಿಕ್ಕಾರ ಕೂಗಲಾಯಿತು. ಕೆಪಿಸಿಸಿ ಕಚೇರಿಯತ್ತ ನುಗ್ಗಲು ಯತ್ನಿಸಿದರು. ಈ ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಿ.ಪಿ.ಹರೀಶ್ ಅವರನ್ನು ಸ್ಥಳದಲ್ಲಿದ್ದ ಪೊಲೀಸರು ಬಿಗಿಭದ್ರತೆಯಲ್ಲಿ ಕರೆದೊಯ್ದು ಪರಿಸ್ಥಿತಿ ನಿಯಂತ್ರಿಸಲು ಯಶಸ್ವಿಯಾದರು. ‘ತಮ್ಮೇಶ್ಗೌಡ ಸೇರಿ ಇತರೆ ಮುಖಂಡರಿದ್ದ ಕಾರಿನ ಮೇಲೂ ಮೊಟ್ಟೆ ಎಸೆಯಲಾಗಿದೆ. ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಮುಖಂಡ ಎಸ್. ಮನೋಹರ್ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಅದನ್ನು ಖಂಡಿಸಿ, ಬಿಜೆಪಿ ಕಾರ್ಯಕರ್ತರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಧಾವಿಸುತ್ತಿದ್ದರು. ಪ್ರತಿಭಟನಕಾರರನ್ನು ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯೇ ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡರು. ಬಿಜೆಪಿಯ ಕೆಲವು ಕಾರ್ಯಕರ್ತರು ಕೆಪಿಸಿಸಿ ಕಚೇರಿಯತ್ತ ಬರುತ್ತಿದ್ದರು. ಆಗ ಕಿಡಿಗೇಡಿಗಳು ಮೊಟ್ಟೆ ತೂರಿದ್ದಾರೆ ಎಂದು ಆರೋಪಿಸಲಾಗಿದೆ. ‘ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕುವ ಮಾಹಿತಿ ಇತ್ತು. ಕಾರಿನಿಂದ ಇಳಿದು ಹೋಗುತ್ತಿರುವಾಗ ನನ್ನ ಮೇಲೆ ಮೊಟ್ಟೆ ಎಸೆಯಲಾಗಿದೆ. ಕೈನಿಂದ ಹಲ್ಲೆ ಸಹ ನಡೆಸಲಾಗಿದೆ. ಪೊಲೀಸರು ಬಂದು ರಕ್ಷಣೆ ಮಾಡದಿದ್ದರೆ ಅನಾಹುತ ಸಂಭವಿಸುತ್ತಿತ್ತು. ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಳ ರೀತಿ ವರ್ತಿಸಿದ್ದಾರೆ’ ಎಂದು ಶಾಸಕ ಬಿ.ಪಿ.ಹರೀಶ್ ಅವರು ಆರೋಪಿಸಿದರು.ಕ್ವಿನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಬಂದ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್-ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷಕಾಂಗ್ರೆಸ್ ಪಕ್ಷದ ಕಚೇರಿ ಕಾರ್ಯಕರ್ತರ ಪಾಲಿಗೆ ಪವಿತ್ರ ಮಂದಿರ. ಬಿಜೆಪಿ ರೀತಿ ಕಚೇರಿಗಳನ್ನು ಗೆಸ್ಟ್ಹೌಸ್ ಮಾಡಿಕೊಂಡಿಲ್ಲ. ನಮ್ಮ ಕಚೇರಿ ಮೇಲೆ ಹಲ್ಲೆ ಮಾಡಲು ಮುಂದಾದಾಗ ರಕ್ಷಣೆಗೆ ಪ್ರಾಣತ್ಯಾಗ ಮಾಡಲು ಸಿದ್ಧ -ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕಕಾಂಗ್ರೆಸ್ ಕಚೇರಿ ಒಳಗಿಂದಲೇ ಮೊಟ್ಟೆ ಲಾಂಗು ಹೊರ ತಂದಿರುವ ವಿಡಿಯೊಗಳಿವೆ. ಲಾಂಗು ಮಚ್ಚು ಹಿಡಿದವರನ್ನು ಗುರುತಿಸುತ್ತೇವೆ. ಕೊತ್ವಾಲ್ ಶಿಷ್ಯರ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ