ಪುಟಾಣಿ ದೇವತೆಗೆ 9 ವರ್ಷ: ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ವೇತಾ ಶ್ರೀವಾತ್ಸವ್
ಕನ್ನಡದ ನಟಿ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 9ನೇ ವರ್ಷಕ್ಕೆ ಕಾಲಿಟ್ಟಿರುವ ಮಗಳಿಗೆ ಶ್ವೇತಾ ಶ್ರೀವಾತ್ಸವ್ ಅವರು ಶುಭಕೋರಿದ್ದಾರೆ.ಶ್ವೇತಾ ಶ್ರೀವಾತ್ಸವ್ ಅವರು ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಮೂಲಕ ತಮ್ಮ ಸಿನಿ ಪಯಣವನ್ನು ಆರಂಭಿಸಿದ್ದರು. ಪ್ರತಿ ಕ್ಷಣವನ್ನು ಖುಷಿಯಿಂದ ಕಳೆಯುವ ನಟಿ ಇದೀಗ ತಮ್ಮ ಮಗಳ ಹುಟ್

ಕನ್ನಡದ ನಟಿ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 9ನೇ ವರ್ಷಕ್ಕೆ ಕಾಲಿಟ್ಟಿರುವ ಮಗಳಿಗೆ ಶ್ವೇತಾ ಶ್ರೀವಾತ್ಸವ್ ಅವರು ಶುಭಕೋರಿದ್ದಾರೆ.ಶ್ವೇತಾ ಶ್ರೀವಾತ್ಸವ್ ಅವರು ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಮೂಲಕ ತಮ್ಮ ಸಿನಿ ಪಯಣವನ್ನು ಆರಂಭಿಸಿದ್ದರು. ಪ್ರತಿ ಕ್ಷಣವನ್ನು ಖುಷಿಯಿಂದ ಕಳೆಯುವ ನಟಿ ಇದೀಗ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.ಮಗಳು ಆಶ್ಮಿತಾ ಶ್ರೀವಾತ್ಸವ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.ನಟಿ ಶ್ರೀವಾತ್ಸವ್ ಅವರು ತಮ್ಮ ಮಗಳಿಗೆ ‘ನಮ್ಮ ಸುಂದರ ದೇವತೆ, ಪ್ರೀತಿಯ ಆಶ್ಮಿತಾಗೆ 9ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು’ ಎಂದು ಹಾರೈಸಿದ್ದಾರೆ.‘ನಮ್ಮ ಪ್ರೀತಿಯ ಮುದ್ದು ಮಗಳಿಗೆ ಒಂಬತ್ತು ವರ್ಷ ತುಂಬುತ್ತಿದೆ. ಏಕಸಂಖ್ಯಾ ವಯಸ್ಸಿನ ಕೊನೆಯ ಹುಟ್ಟುಹಬ್ಬ ಇದಾಗಿದ್ದು, ಈ ವರ್ಷ ಅತ್ಯಂತ ವಿಶೇಷವೆನಿಸಿದೆ. ನಿನ್ನನ್ನು ಕೈಗಳಲ್ಲಿ ಎತ್ತಿ ಆಡಿಸಿದ್ದು ನಿನ್ನೆಯಷ್ಟೇ ಅನಿಸುತ್ತಿದೆ. ಆದರೆ ಈಗ ನೀನು ಅತ್ಯಂತ ಬುದ್ಧಿವಂತೆ, ಪ್ರತಿಭಾವಂತೆ ಮತ್ತು ಕರುಣಾಮಯಿ ಹೆಣ್ಣುಮಗಳಾಗಿ ಬೆಳೆಯುತ್ತಿರುವುದನ್ನು ನೋಡಲು ಸಂತಸವಾಗುತ್ತಿದೆ’ ಎಂದು ಭಾವುಕರಾಗಿದ್ದಾರೆ.‘ನಮ್ಮ ಪ್ರೀತಿಯ ಮಗಳಿಗೆ ನೀಡಿರುವ ಪ್ರತಿಯೊಂದು ಆಶೀರ್ವಾದಕ್ಕೂ ಆ ದೇವರಲ್ಲಿ ಧನ್ಯವಾದಗಳು. ದೇವರೆ, ಅವಳಿಗೆ ಸದಾ ದಾರಿ ತೋರಿಸು, ರಕ್ಷಿಸು ಹಾಗೂ ಅವಳ ಜೀವನವನ್ನು ಪ್ರೀತಿ, ಉತ್ತಮ ಆರೋಗ್ಯ, ಸಂತೋಷ, ಜ್ಞಾನ ಮತ್ತು ಸುಂದರ ಅವಕಾಶಗಳಿಂದ ತುಂಬಿಸು ಎಂದು ಪ್ರಾರ್ಥಿಸುತ್ತೇವೆ. ಹುಟ್ಟುಹಬ್ಬದ ಶುಭಾಶಯಗಳು ಮಗಳೇ. ನಿನ್ನ ಮುಗುಳುನಗು ಸದಾ ನಮ್ಮ ಪ್ರಪಂಚವನ್ನು ಬೆಳಗಲಿ, ನಿನ್ನ ಎಲ್ಲಾ ಕನಸುಗಳು ನನಸಾಗಲಿ. ಪದಗಳಲ್ಲಿ ವ್ಯಕ್ತಪಡಿಸಲಾಗದಷ್ಟು ನಿನ್ನನ್ನು ಪ್ರೀತಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.ಆಶ್ಮಿತಾ ಅವರ ಜನ್ಮದಿನದ ಆಚರಣೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ಹಾಗೂ ಆಪ್ತರು ಪುಟಾಣಿಗೆ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.2005ರಲ್ಲಿ ಶ್ವೇತಾ ಶ್ರೀವಾತ್ಸವ್ ಅವರು ಅಮಿತ್ ಶ್ರೀವಾತ್ಸವ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2017ರ ಜುಲೈ 21ರಂದು ಮಗಳಿಗೆ ಜನ್ಮ ನೀಡಿದ್ದರು.ಇನ್ನು, ನಟಿ ಶ್ವೇತಾ ಶ್ರೀವಾತ್ಸವ್ ಅವರು ಮಗಳಿಗೆ ಈಗಿನಿಂದಲೇ ಸಂಸ್ಕಾರಗಳನ್ನು ತಿಳಿಸಿ ಕೊಡುತ್ತಿದ್ದಾರೆ.ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಕಾರ, ಮಗಳಿಗೆ ಸಂಪ್ರದಾಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಪ್ರತಿಯೊಂದು ಹಂತದಲ್ಲೂ ಮಗಳಿಗೆ ಬೆನ್ನೆಲುಬಾಗಿ ನಿಂತುಕೊಂಡಿದ್ದಾರೆ.