BBK13: ಶುರುವಾಯ್ತು ಬಿಗ್ಬಾಸ್ ಹವಾ: ಸೀಸನ್ 13 ಆರಂಭಕ್ಕೆ ದಿನಾಂಕ ನಿಗದಿ
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಆವೃತ್ತಿ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ಬಾಸ್ ತಂಡ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದು, ಹೀಗಾಗಿ ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ. ಬಿಗ್ಬಾಸ್ ಕನ್ನಡ ಸೀಸನ್ 13, ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಲಿದೆ ಎಂದು ‘ಜಿಯೋಸ್ಟಾರ್’ ಸಂಸ್ಥೆ ಘೋಷಿಸಿದೆ. ಈ ಬಾರಿಯ ವಿಶ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಆವೃತ್ತಿ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ಬಾಸ್ ತಂಡ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದು, ಹೀಗಾಗಿ ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ. ಬಿಗ್ಬಾಸ್ ಕನ್ನಡ ಸೀಸನ್ 13, ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಲಿದೆ ಎಂದು ‘ಜಿಯೋಸ್ಟಾರ್’ ಸಂಸ್ಥೆ ಘೋಷಿಸಿದೆ. ಈ ಬಾರಿಯ ವಿಶೇಷ ಏನೆಂದರೆ ಸೆಪ್ಟೆಂಬರ್ನಿಂದ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ ಭಾಷೆಗಳ ಬಿಗ್ಬಾಸ್ ಸೀಸನ್ಗಳು ಒಟ್ಟಿಗೆ ‘ಜಿಯೋಹಾಟ್ಸ್ಟಾರ್’ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗಲಿವೆ.ಬಿಗ್ಬಾಸ್ ಮನೆಗೆ ಹೋಗುವ ಬಯಕೆ ನಿಮಗಿದೆಯೇ? ನಿಮ್ಮ ವಿಡಿಯೊ ಹೀಗಿರಲಿ...ಆರು ಭಾಷೆಗಳಲ್ಲಿ ಒಟ್ಟಿಗೆ ಬಿಗ್ಬಾಸ್ ಆರಂಭ: ನಿರೂಪಣೆಯತ್ತ ಸೌರವ್ ಗಂಗೂಲಿಇನ್ನು, ಈ ಬಾರಿಯ ಕನ್ನಡದ ಬಿಗ್ಬಾಸ್ 13ಕ್ಕೆಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ 13ನೇ ಆವೃತ್ತಿ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರುಗಳು ಹರಿದಾಡುತ್ತಿವೆ. ಅದರಲ್ಲಿ ಯಾರೆಲ್ಲಾ ಬಿಗ್ಬಾಸ್ಗೆ ಎಂಟ್ರಿ ಕೊಡಲಿದ್ದಾರೆ ಎಂದು ಕಾರ್ಯಕ್ರಮ ಆರಂಭಗೊಂಡ ಬಳಿಕವಷ್ಟೇ ಗೊತ್ತಾಗಲಿದೆ.ಈ ಬಾರಿಯ ಕನ್ನಡ ಸೀಸನ್ನ ವಿಶೇಷ ಏನೆಂದರೆ, ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ, ಜನಸಾಮಾನ್ಯರೂ ಕೂಡ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಅವಕಾಶವಿದೆ. ಬಿಗ್ಬಾಸ್ ಹೇಳಿರುವಂತೆ ತಮ್ಮ ಸ್ವ–ಪರಿಚಯವುಳ್ಳ ‘ನಾವು ಏಕೆ ಬಿಗ್ಬಾಸ್ ಮನೆಯಲ್ಲಿರಬೇಕು’? ಎಂಬ ವಿಡಿಯೊ ಮಾಡಿ ‘Colorskannada.jiostar.com’ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ಆಯ್ಕೆ ಆದವರಿಗೆ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ ಎಂದು ಘೋಷಿಸಿದ್ದರು.ಕಲರ್ಸ್ ಕನ್ನಡ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಪ್ರೋಮೊದಲ್ಲಿ ‘ಕೈ ತಟ್ಟಿ ಹುರಿದುಂಬಿಸಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?’ ಅಂತ ಸಾರ್ವಜನಿಕರನ್ನು ತನ್ನ ಮನೆಗೆ ಆಹ್ವಾನಿಸಿದ್ದರು. ಈ ಬಾರಿ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿದೆ.