ಮಂಗಳೂರು: ದಲಿತ ಮುಖಂಡ ಎಂ.ದೇವದಾಸ್ ನಿಧನ
ಮಂಗಳೂರು: ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹಿರಿಯ ನಾಯಕ ಎಂ.ದೇವದಾಸ್ ಹೃದಯಾಘಾತದಿಂದ ಬುಧವಾರ(ಜುಲೈ 22) ನಿಧನ ಹೊಂದಿದ್ದಾರೆ.ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಪ್ರಾರಂಭಗೊಂಡಾಗ ಕರಾವಳಿ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಪ್ರಾರಂಭಿಸಲು ಎಂ. ದೇವದಾಸ್ ಶ್ರಮ ವಹಿಸಿದ್ದರು. ಜಿಲ್ಲೆಯಾದ್ಯಂತ ಸ

ಮಂಗಳೂರು: ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹಿರಿಯ ನಾಯಕ ಎಂ.ದೇವದಾಸ್ ಹೃದಯಾಘಾತದಿಂದ ಬುಧವಾರ(ಜುಲೈ 22) ನಿಧನ ಹೊಂದಿದ್ದಾರೆ.ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಪ್ರಾರಂಭಗೊಂಡಾಗ ಕರಾವಳಿ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಪ್ರಾರಂಭಿಸಲು ಎಂ. ದೇವದಾಸ್ ಶ್ರಮ ವಹಿಸಿದ್ದರು. ಜಿಲ್ಲೆಯಾದ್ಯಂತ ಸಂಘಟನೆ ಕಟ್ಟಲು ಓಡಾಡಿದ್ದರು. ದಲಿತ ಸಮುದಾಯದ ನಡುವೆ ವೈಚಾರಿಕ ಪ್ರಜ್ಞೆ, ಸ್ವಾಭಿಮಾನ ಮೂಡಿಸಲು ಬಹಳಷ್ಟು ಪ್ರಯತ್ನಿಸಿದ್ದರು. ಜಿಲ್ಲೆಯಲ್ಲಿ ಎಡಪಂಥೀಯ, ವೈಚಾರಿಕ ಸಂಘಟನೆಗಳ ಜೊತೆ ಸೇರಿ ಹಲವು ಹೋರಾಟಗಳು, ಪ್ರತಿಭಟನೆಗಳನ್ನು ಸಂಘಟಿಸಿದ್ದರು. ಸಮಾನ ಮನಸ್ಕರ ವೇದಿಕೆಗಳು, ಜಂಟಿ ಹೋರಾಟಗಳನ್ನು ಸಂಘಟಿಸುವುದರಲ್ಲಿ ದೇವದಾಸ್ ಅವರು ಕೊಡುಗೆ ನೀಡಿದ್ದರು. ಹೊಸ ತಲೆಮಾರಿನ ಕಾರ್ಯಕರ್ತರಿಗೆ ಪ್ರೇರಣೆಯಾಗಿದ್ದರು. ಕರಾವಳಿ ಭಾಗದಲ್ಲಿ ಕೋಮುವಾದದ ವಿರುದ್ಧದ ಹೋರಾಟದಲ್ಲಿ, ದಲಿತರ, ಆದಿವಾಸಿಗಳ, ಶೋಷಿತರ ಪರವಾದ ಹೋರಾಟದಲ್ಲಿ ಸದಾ ಸಕ್ರಿಯರಾಗಿದ್ದರು. ಬಜಪೆ ಸಿದ್ಧಾರ್ಥನಗರದ ಅವರ ಮನೆಯಲ್ಲಿ ಬುಧವಾರ (ಜುಲೈ 22) ಮಧ್ಯಾಹ್ನ 3 ಗಂಟೆಯಿಂದ ಸಂಜೆ 4-30ರ ವರೆಗೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆಪ್ತೇಷ್ಟರು ತಿಳಿಸಿದ್ದಾರೆ.