ಎಸ್ಐಆರ್ | ಗಣತಿ ನಮೂನೆ ವಿತರಣೆ ಪೂರ್ಣ: ಚುನಾವಣಾಧಿಕಾರಿ ಕಚೇರಿ
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಭಾಗವಾಗಿ ರಾಜ್ಯದ ಎಲ್ಲ ಮತದಾರರ ಗಣತಿ ನಮೂನೆ ವಿತರಣೆ ಕಾರ್ಯ ಶೇ 100ರಷ್ಟು ಪೂರ್ಣಗೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.54 ಕೋಟಿ ಅರ್ಹ ಮತದಾರರು ಇದ್ದಾರೆ. ಗುರುವಾರ ಸಂಜೆ 6ರ ವೇಳೆಗೆ ಎಲ್ಲ 5.54 ಕೋಟಿ ಮ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಭಾಗವಾಗಿ ರಾಜ್ಯದ ಎಲ್ಲ ಮತದಾರರ ಗಣತಿ ನಮೂನೆ ವಿತರಣೆ ಕಾರ್ಯ ಶೇ 100ರಷ್ಟು ಪೂರ್ಣಗೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.54 ಕೋಟಿ ಅರ್ಹ ಮತದಾರರು ಇದ್ದಾರೆ. ಗುರುವಾರ ಸಂಜೆ 6ರ ವೇಳೆಗೆ ಎಲ್ಲ 5.54 ಕೋಟಿ ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.ಈ ಪೈಕಿ 52.97 ಲಕ್ಷ ಮತದಾರರ ಗಣತಿ ನಮೂನೆಗಳನ್ನು ‘ಪತ್ತೆಯಾಗದ, ಶಾಶ್ವತ ಸ್ಥಳಾಂತರ, ಮೃತಪಟ್ಟ, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದ ಮತ್ತು ಇತರೆ (ಸಹಿ ಮಾಡಲು ಒಪ್ಪದ) ಮತದಾರರು’ ಎಂದು ವರ್ಗೀಕರಿಸಲಾಗಿದೆ. ಇನ್ನು 3.85 ಕೋಟಿ ಮತದಾರರಿಂದ ಗಣತಿ ನಮೂನೆಗಳ್ನು ಸಂಗ್ರಹಿಸಿ, ಡಿಜಿಟಲೀಕರಿಸಲಾಗಿದೆ. ಮತದಾರರೇ ಆನ್ಲೈನ್ ಮೂಲಕ ಸಲ್ಲಿಸಿದ 6.07 ಲಕ್ಷ ಗಣತಿ ನಮೂನೆಗಳೂ ಇದರಲ್ಲಿ ಸೇರಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆಯ ದತ್ತಾಂಶ ಹೇಳುತ್ತದೆ.ರಾಜ್ಯದಲ್ಲಿ ಗಣತಿ ನಮೂನೆ ವಿತರಣೆ ಕಾರ್ಯವು ಜೂನ್ 30ರಿಂದ ಆರಂಭವಾಗಿತ್ತು. ಜತೆಯಲ್ಲಿಯೇ ಗಣತಿ ನಮೂನೆಗಳ ಭರ್ತಿ, ಸಂಗ್ರಹ ಮತ್ತು ಡಿಜಿಟಲೀಕರಣ ಕಾರ್ಯ ನಡೆಯುತ್ತಿತ್ತು. ಮೂಲ ವೇಳಾಪಟ್ಟಿಯಂತೆ ಇಷ್ಟೂ ಕಾರ್ಯವು ಜುಲೈ 29ಕ್ಕೆ ಕೊನೆಯಾಗಬೇಕಿತ್ತು. ಆದರೆ ಬೆಂಗಳೂರು ನಗರದಲ್ಲಿ ನಿರೀಕ್ಷಿತ ಪ್ರಗತಿ ಇಲ್ಲದ ಕಾರಣಕ್ಕೆ, ಅವಧಿಯನ್ನು ವಿಸ್ತರಿಸಿ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಅದರಂತೆ ಆಯೋಗವು ಗಣತಿ ನಮೂನೆ ವಿತರಣೆ, ಸಂಗ್ರಹ ಮತ್ತು ಡಿಜಿಟಲೀಕರಣ ಪ್ರಕ್ರಿಯೆಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿತ್ತು.ಕರಡು ಮತದಾರರ ಪಟ್ಟಿಯು ಆಗಸ್ಟ್ 17ಕ್ಕೆ ಪ್ರಕಟವಾಗಲಿದೆ.