ಗ್ಯಾಸ್ ಸೋರಿಕೆಯಾಗಿ ಹೊತ್ತಿ ಉರಿದ ಅಂಗಡಿ – ಬೆಂಕಿ ನಂದಿಸಲು ಹರಸಾಹಸ
ಆನೆಕಲ್: ಗ್ಯಾಸ್ ಸೋರಿಕೆಯಾಗಿ ಹಾಸಿಗೆ ಗೋಡೌನ್ ಹೊತ್ತಿ ಉರಿದ (Fire Accident) ಘಟನೆ ಬನ್ನೇರುಘಟ್ಟ (Bannerugatta) ಸಮೀಪದ ದೊಡ್ಡಕಮ್ಮಮಹಳ್ಳಿಯಲ್ಲಿ ನಡೆದಿದೆ. ಕಟ್ಟಡದ ಕೆಳಮಹಡಿಯಲ್ಲಿ ಹಾಸಿಗೆ ಅಂಗಡಿ ಮಾಡಿಕೊಳ್ಳಲಾಗಿತ್ತು. ಮೇಲಿನ ಮಹಡಿಯಲ್ಲಿ ಗೋಡೌನ್ ಮಾಡಿಕೊಳ್ಳಲಾಗಿತ್ತು. ಕೆಲಸಗಾರರಿಗೆ ಅಡುಗೆ ಮಾಡಿಕೊಳ್ಳಲು ಅಲ್ಲಿಯೇ ಸಿಲಿಂಡರ್ ಇಡಲಾಗಿತ್ತು. ಈ ಸಿಲಿಂಡರ್

ಆನೆಕಲ್: ಗ್ಯಾಸ್ ಸೋರಿಕೆಯಾಗಿ ಹಾಸಿಗೆ ಗೋಡೌನ್ ಹೊತ್ತಿ ಉರಿದ (Fire Accident) ಘಟನೆ ಬನ್ನೇರುಘಟ್ಟ (Bannerugatta) ಸಮೀಪದ ದೊಡ್ಡಕಮ್ಮಮಹಳ್ಳಿಯಲ್ಲಿ ನಡೆದಿದೆ. ಕಟ್ಟಡದ ಕೆಳಮಹಡಿಯಲ್ಲಿ ಹಾಸಿಗೆ ಅಂಗಡಿ ಮಾಡಿಕೊಳ್ಳಲಾಗಿತ್ತು. ಮೇಲಿನ ಮಹಡಿಯಲ್ಲಿ ಗೋಡೌನ್ ಮಾಡಿಕೊಳ್ಳಲಾಗಿತ್ತು. ಕೆಲಸಗಾರರಿಗೆ ಅಡುಗೆ ಮಾಡಿಕೊಳ್ಳಲು ಅಲ್ಲಿಯೇ ಸಿಲಿಂಡರ್ ಇಡಲಾಗಿತ್ತು. ಈ ಸಿಲಿಂಡರ್ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪರದಾಡಿದ್ದಾರೆ. ಇದನ್ನೂ ಓದಿ: ಗುಜರಾತ್ | ಭಾರೀ ಮಳೆಗೆ ಪಾರ್ಕಿಂಗ್ ಸ್ಥಳ ಜಲಾವೃತ; ನೀರಲ್ಲಿ ಮುಳುಗಿದ 50 ಕ್ಕೂ ಹೆಚ್ಚು ಕಾರುಗಳು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕೆಲಸಗಾರರು ಹೊರಗೆ ಓಡಿ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹಿಟ್ & ರನ್ ಕೇಸ್ಗೆ ಬಿಗ್ ಟ್ವಿಸ್ಟ್ – ಸ್ನೇಹಿತನನ್ನು ಕೊಂದು ಸೈಲೆಂಟಾಗಿದ್ದ ಹಂತಕ ತಿಂಗಳ ಬಳಿಕ ಅರೆಸ್ಟ್
Read the complete story at Public TV Kannada