ಬ್ರೋಕರೇಜ್ ಮಾತು: ಫೆಡರಲ್ ಬ್ಯಾಂಕ್
ಖಾಸಗಿ ವಲಯದ ಫೆಡರಲ್ ಬ್ಯಾಂಕ್ನ ಷೇರಿನ ಬೆಲೆ ₹400ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.2026–27ರ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್ ತೆರಿಗೆ ನಂತರದ ನಿವ್ವಳ ಲಾಭವಾಗಿ ₹1,180 ಕೋಟಿ ಗಳಿಸಿದೆ. ಇದು 2025–26ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 37ರಷ್ಟು ಅಧಿಕ. ನಿವ್ವಳ ಬಡ್ಡಿ ವರಮಾನ ಶ

ಖಾಸಗಿ ವಲಯದ ಫೆಡರಲ್ ಬ್ಯಾಂಕ್ನ ಷೇರಿನ ಬೆಲೆ ₹400ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.2026–27ರ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್ ತೆರಿಗೆ ನಂತರದ ನಿವ್ವಳ ಲಾಭವಾಗಿ ₹1,180 ಕೋಟಿ ಗಳಿಸಿದೆ. ಇದು 2025–26ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 37ರಷ್ಟು ಅಧಿಕ. ನಿವ್ವಳ ಬಡ್ಡಿ ವರಮಾನ ಶೇ 26ರಷ್ಟು ಹೆಚ್ಚಳವಾಗಿದೆ.ಸಾಲ ಮರುಪಾವತಿ ಆಗದೆ ಉಂಟಾಗಬಹುದಾದ ನಷ್ಟ ಸರಿದೂಗಿಸಲು ಬ್ಯಾಂಕ್ ತೆಗೆದಿರಿಸುವ ಮೊತ್ತವು ಶೇ 21ರಷ್ಟು ಕಡಿಮೆಯಾಗಿದೆ. ಇದು ಬ್ಯಾಂಕ್ನ ಗಳಿಕೆ ಹೆಚ್ಚಳಕ್ಕೆ ನೆರವಾಗಿದೆ. ಸಾಲ ನೀಡಿಕೆ ಪ್ರಮಾಣವು ಶೇ 15ರಷ್ಟು ಹೆಚ್ಚಳವಾಗಿದೆ. ಒಟ್ಟು ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಜಿಎನ್ಪಿಎ) ಮತ್ತು ಎನ್ಎನ್ಪಿಎ ಕ್ರಮವಾಗಿ ಶೇ 1.52 ಮತ್ತು ಶೇ 0.18ಕ್ಕೆ ಇಳಿದಿದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ. ಹೆಚ್ಚುತ್ತಿರುವ ಲಾಭ, ಸ್ಥಿರವಾದ ಗಳಿಕೆಯಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್ನ ಆಸ್ತಿ ಮೇಲಿನ ಗಳಿಕೆ (ಆರ್ಒಎ) ಮತ್ತು ಹೂಡಿಕೆ ಮೇಲಿನ ಗಳಿಕೆ (ಆರ್ಒಇ) ಕ್ರಮವಾಗಿ ಶೇ 1.25 ಮತ್ತು ಶೇ 12.1ರಷ್ಟಾಗಬಹುದು ಎಂದು ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಬ್ಯಾಂಕ್ನ ಷೇರಿನ ಮೌಲ್ಯ ₹353 ಆಗಿತ್ತು.(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)