ಶಿವನಸಮುದ್ರ & ಶಿಂಷಾದಲ್ಲಿ ಜಲವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತ
ಮಂಡ್ಯ: ಕಾವೇರಿ ಕಣಿವೆಯಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟ ಕಾರಣ ಕಾವೇರಿ ನದಿ ಬತ್ತಿಹೋಗಿ ಜಲವಿದ್ಯುತ್ (Hydroelectric Power) ಘಟಕಗಳಿಗೆ ನೀರಿನ ಅಭಾವ ಉಂಟಾಗಿದೆ. ಇದರಿಂದ ಕಳೆದ ಒಂದೂವರೆ ತಿಂಗಳಿಂದ (ಜೂನ್ 6 ರಿಂದ) ಈ ಘಟಕಗಳಲ್ಲಿ ಜಲವಿದ್ಯುತ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಶ್ರೀರಂಗಪಟ್ಟಣ ತ

ಮಂಡ್ಯ: ಕಾವೇರಿ ಕಣಿವೆಯಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟ ಕಾರಣ ಕಾವೇರಿ ನದಿ ಬತ್ತಿಹೋಗಿ ಜಲವಿದ್ಯುತ್ (Hydroelectric Power) ಘಟಕಗಳಿಗೆ ನೀರಿನ ಅಭಾವ ಉಂಟಾಗಿದೆ. ಇದರಿಂದ ಕಳೆದ ಒಂದೂವರೆ ತಿಂಗಳಿಂದ (ಜೂನ್ 6 ರಿಂದ) ಈ ಘಟಕಗಳಲ್ಲಿ ಜಲವಿದ್ಯುತ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಇದನ್ನೂ ಓದಿ: ಗುಜರಾತ್ | ಭಾರೀ ಮಳೆಗೆ ಪಾರ್ಕಿಂಗ್ ಸ್ಥಳ ಜಲಾವೃತ; ನೀರಲ್ಲಿ ಮುಳುಗಿದ 50 ಕ್ಕೂ ಹೆಚ್ಚು ಕಾರುಗಳು ಅಣೆಕಟ್ಟೆಯಲ್ಲಿ ಪ್ರಸ್ತುತ 92.38 ಅಡಿ ನೀರು ಮಾತ್ರವಿದ್ದು, ಭರ್ತಿಯಾಗಲು ಇನ್ನೂ 32 ಅಡಿ ನೀರು ಬೇಕಾಗಿದೆ. ಡ್ಯಾಂ ಭರ್ತಿಯಾಗದ ಕಾರಣ ಕಾವೇರಿ ನದಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಶಿವನಸಮುದ್ರ ಯೋಜನೆಯು ವಾರ್ಷಿಕ 518 ದಶಲಕ್ಷ ಯುನಿಟ್ ಸಾಮರ್ಥ್ಯ ಹೊಂದಿದ್ದು, ಇಲ್ಲಿರುವ 10 ಘಟಕಗಳು ವಾರ್ಷಿಕ 367.92 ದಶಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಶಿಂಷಾ ಯೋಜನೆಯಲ್ಲಿ ಎರಡು ಘಟಕಗಳಿದ್ದು, ವಾರ್ಷಿಕವಾಗಿ 150.67 ದಶಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಪ್ರತಿ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ 35 ಕ್ಯೂಸೆಕ್ ನೀರು ಬೇಕಾಗಲಿದ್ದು, 42 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ನಿತ್ಯ ಸುಮಾರು 1,400 ಕ್ಯೂಸೆಕ್ ನೀರಿನ ಅವಶ್ಯಕತೆಯಿರುತ್ತದೆ. ನೀರಿನ ಅಭಾವದಿಂದಾಗಿ ಕಾವೇರಿ ನದಿಯ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ನೀರಿಲ್ಲದೆ ಬಣಗುಡುತ್ತಿವೆ. ಇದನ್ನೂ ಓದಿ: ಹಡಗಲಿಯಲ್ಲಿ ಬೆಳ್ಳಂಬೆಳಗ್ಗೆ ಸಿಎನ್ಜಿ ಇಂಧನ ಸೋರಿಕೆ – ತಪ್ಪಿದ ಭಾರೀ ಅನಾಹುತ ಶಿವನಸಮುದ್ರದ 7 ಘಟಕಗಳ ದುರಸ್ತಿ ಈಗ ಬಹುತೇಕ ಪೂರ್ಣಗೊಂಡಿದ್ದು, ಕೇವಲ 3 ಘಟಕಗಳ ದುರಸ್ತಿ ಮಾತ್ರ ಬಾಕಿ ಇದೆ. ಉಳಿದ ಘಟಕಗಳ ದುರಸ್ತಿ ಕಾರ್ಯ ಪೂರ್ಣಗೊಂಡರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ ಎಂದು ಎಂಜಿನಿಯರ್ಗಳು ತಿಳಿಸಿದ್ದಾರೆ.