250 ಬಿಲಿಯನ್ ಡಾಲರ್ ಗಾತ್ರಕ್ಕೆ ದೇಶದ ಇ–ವಾಣಿಜ್ಯ ಮಾರುಕಟ್ಟೆ
ಬೆಂಗಳೂರು: ಸರಕು ಸಾಗಣೆ ಕ್ಷೇತ್ರದ ಶಿಪ್ರಾಕೆಟ್ ಕಂಪನಿಯು ಭಾರತದ ಇ–ವಾಣಿಜ್ಯ ಕ್ಷೇತ್ರದ ಬೆಳವಣಿಗೆ ಕುರಿತಾಗಿ ಡೆಲಾಯ್ಟ್ ಜೊತೆಗೂಡಿ ಹೊಸ ವರದಿಯೊಂದನ್ನು ಸಿದ್ಧಪಡಿಸಿದ್ದು, 2030ರ ವೇಳೆಗೆ ಇ–ವಾಣಿಜ್ಯ ಮಾರುಕಟ್ಟೆಯ ಗಾತ್ರವು 250 ಬಿಲಿಯನ್ ಡಾಲರ್ ಆಗಲಿದೆ ಎಂದು ಹೇಳಿದೆ.ಈಗ ದೇಶದ ಇ–ವಾಣಿಜ್ಯ ಮಾರುಕಟ್ಟೆ ಗಾತ್ರವು 2025ರಲ್ಲಿ 90 ಬಿಲಿಯನ್ ಡಾಲರ್ನಷ್ಟು ಇತ್ತು.

ಬೆಂಗಳೂರು: ಸರಕು ಸಾಗಣೆ ಕ್ಷೇತ್ರದ ಶಿಪ್ರಾಕೆಟ್ ಕಂಪನಿಯು ಭಾರತದ ಇ–ವಾಣಿಜ್ಯ ಕ್ಷೇತ್ರದ ಬೆಳವಣಿಗೆ ಕುರಿತಾಗಿ ಡೆಲಾಯ್ಟ್ ಜೊತೆಗೂಡಿ ಹೊಸ ವರದಿಯೊಂದನ್ನು ಸಿದ್ಧಪಡಿಸಿದ್ದು, 2030ರ ವೇಳೆಗೆ ಇ–ವಾಣಿಜ್ಯ ಮಾರುಕಟ್ಟೆಯ ಗಾತ್ರವು 250 ಬಿಲಿಯನ್ ಡಾಲರ್ ಆಗಲಿದೆ ಎಂದು ಹೇಳಿದೆ.ಈಗ ದೇಶದ ಇ–ವಾಣಿಜ್ಯ ಮಾರುಕಟ್ಟೆ ಗಾತ್ರವು 2025ರಲ್ಲಿ 90 ಬಿಲಿಯನ್ ಡಾಲರ್ನಷ್ಟು ಇತ್ತು. ದೇಶದ ಗ್ರಾಮೀಣ ಪ್ರದೇಶಗಳ ಕೊಡುಗೆಯು ಈ ಬೆಳವಣಿಗೆಯ ಪಯಣದಲ್ಲಿ ಮಹತ್ವದ್ದಾಗಿರಲಿದೆ ಎಂಬುದನ್ನು ಕೂಡ ವರದಿಯು ಹೇಳಿದೆ.ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 48 ಕೋಟಿ ಮಂದಿ ಇಂಟರ್ನೆಟ್ ಸಂಪರ್ಕ ಹೊಂದಿದ್ದಾರೆ. ಇವರ ಪಾಲು ದೇಶದಲ್ಲಿ ಇಂಟರ್ನೆಟ್ ಬಳಸುವವರಲ್ಲಿ ಶೇ 55ರಷ್ಟಿದೆ. ದೇಶದಲ್ಲಿ ಇಂಟರ್ನೆಟ್ ಬಳಸುವವರಲ್ಲಿ ಶೇ 98ರಷ್ಟು ಮಂದಿ ಭಾರತದ ಭಾಷೆಗಳಲ್ಲಿ ಸೇವೆಗಳನ್ನು ಬಳಸುತ್ತಿದ್ದಾರೆ. ಇಂಗ್ಲಿಷ್ಗೆ ಹೋಲಿಸಿದರೆ, ದೇಶಿ ಭಾಷೆಗಳಲ್ಲಿ ನಡೆಸುವ ಧ್ವನಿ ಆಧಾರಿತ ಶೋಧನವು ಶೇ 157ರಷ್ಟು ಜಾಸ್ತಿ ಆಗಿದೆ ಎಂದು ವರದಿ ಹೇಳಿದೆ.ಉದ್ದಿಮೆಗಳು ಹೆಚ್ಚು ಒಳಗೊಳ್ಳುವ ಹಾಗೂ ದೇಶಿ ಭಾಷೆಗಳಿಗೆ ಆದ್ಯತೆ ನೀಡುವ ಬಗೆಯಲ್ಲಿ ಇರಬೇಕು ಎಂದು ಅದು ಸಲಹೆ ನೀಡಿದೆ. ಭಾರತದಲ್ಲಿ ಆನ್ಲೈನ್ ಮೂಲಕ ಖರೀದಿ ಮಾಡುವವರಲ್ಲಿ ಎರಡನೆಯ ಹಾಗೂ ಮೂರನೆಯ ಹಂತಗಳ ನಗರಗಳಿಗೆ ಸೇರಿದವರ ಪ್ರಮಾಣವು ಶೇ 60ಕ್ಕಿಂತ ಜಾಸ್ತಿ ಇದೆ.