CJP ಪ್ರತಿಭಟನೆ: ಮುಂಬೈನಲ್ಲಿ ಪೊಲೀಸ್ ವ್ಯಾನ್ ತಡೆದು ನಿಂತ ನಟಿ ರಿಯಾ ಅಹೀರ್
ಮುಂಬೈ: ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆಗೆ ಆಗ್ರಹಿಸಿ ಮುಂಬೈನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ನಟಿ ರಿಯಾ ಅಹೀರ್ (Rhiya Ahir) ಪೊಲೀಸ್ ವ್ಯಾನ್ ತಡೆದು ನಿಲ್ಲಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಾದರ್ನ ಶಿವಾಜಿ ಪಾರ್ಕ್ ಬಳಿ ನಡೆದ ಪ್ರತಿಭಟನೆಯಲ್ಲ

ಮುಂಬೈ: ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆಗೆ ಆಗ್ರಹಿಸಿ ಮುಂಬೈನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ನಟಿ ರಿಯಾ ಅಹೀರ್ (Rhiya Ahir) ಪೊಲೀಸ್ ವ್ಯಾನ್ ತಡೆದು ನಿಲ್ಲಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಾದರ್ನ ಶಿವಾಜಿ ಪಾರ್ಕ್ ಬಳಿ ನಡೆದ ಪ್ರತಿಭಟನೆಯಲ್ಲಿ ನಟಿ ರಿಯಾ ಅಹೀರ್ ಮಳೆಯಲ್ಲೇ ಚಲಿಸುತ್ತಿದ್ದ ಪೊಲೀಸ್ ವ್ಯಾನ್ ತಡೆದು ನಿಂತಿದ್ದಾರೆ. ಇದನ್ನು ಕಂಡು ಸುತ್ತಲಿದ್ದ ಜನರು ನಟಿಗೆ ಬೆಂಬಲವಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಇದನ್ನೂ ಓದಿ: ದೇಶದಲ್ಲಿ ಮುಂಗಾರು ಮಳೆ ಜೋರು – ಅಲ್ಲಲ್ಲಿ ಅವಾಂತರ ಸೃಷ್ಟಿ, ಜನಜೀವನ ಅಸ್ತವ್ಯಸ್ತ ಮೂಲಗಳ ಪ್ರಕಾರ, ನಟಿಯ ಈ ಹೋರಾಟದ ಫಲವಾಗಿ ಪೊಲೀಸರು ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದರು. ಬಳಿಕ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೊಲೀಸರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳದಿದ್ದರೆ, ನಮ್ಮ ದೇಶದ ನಾಗರಿಕರ ರಕ್ಷಣೆಯ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳಬೇಕಾಗುತ್ತದೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ತಪ್ಪು. ಅದಕ್ಕಾಗಿಯೇ ನಾನು ಇಲ್ಲಿ ಬೆಂಬಲವಾಗಿ ನಿಂತಿದ್ದೇನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಮಳೆ ಅಬ್ಬರ; ಸಿದ್ದಾಪುರ, ಜೋಯಿಡಾ, ದಾಂಡೇಲಿ, ಶಿರಸಿ ಶಾಲಾ-ಕಾಲೇಜುಗಳಿಗೆ ಜು.24ಕ್ಕೆ ರಜೆ ಇದೇ ವೇಳೆ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿದ್ದ ಸಂಸತ್ ಚಲೋ ಪ್ರತಿಭಟನೆಯ ಮೇಲೆ ಪೊಲೀಸರು ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿದರು. ಯಾರಿದು ರಿಯಾ ಅಹೀರ್? ಮೂಲಗಳ ಪ್ರಕಾರ, ರಿಯಾ ಅಹೀರ್ ಓರ್ವ ನಟಿ, ಮಾಡೆಲ್ ಹಾಗೂ ಉದ್ಯಮಿ. ಇತ್ತೀಚೆಗೆ ಬಿಡುಗಡೆಯಾದ ‘ದಿಲ್ಬರಾ’ ಎಂಬ ಸಂಗೀತ ವೀಡಿಯೊದಲ್ಲಿ ನಟಿಸಿದ್ದರು. ಅಲ್ಲದೇ ‘ರಿಯಾಸತ್’ ಎಂಬ ಹೆಸರಿನ ಸ್ವಂತ ಗಾರ್ಮೆಂಟ್ಸ್ ಬ್ರ್ಯಾಂಡ್ ಹೊಂದಿದ್ದಾರೆ. ನಟಿಯ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕರು ಹೀರೋ ಎಂದು ಕೊಂಡಾಡುತ್ತಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳೇ ಯೋಚಿಸದಿರಿ, ಮೋದಿ ಅಭಯ ನೀಡಿದ್ದಾರೆ – ಆರೋಪಿಗಳಿಗೆ ಶಿಕ್ಷೆ ಆಗುತ್ತೆ: ಪ್ರತಿಭಟನೆ ಕೈಬಿಡಲು ಸಲ್ಮಾನ್ ಖಾನ್ ಮನವಿ