ಮಗನ ಸಾವಿನ ಸುದ್ದಿ ಕೇಳಿ ಆಘಾತದಿಂದ ತಾಯಿ ಕೂಡ ಸಾವು
ಧಾರವಾಡ: ಮಗನ (Son) ಸಾವಿನ ಸುದ್ದಿ ಕೇಳಿ ಆಘಾತದಿಂದ ತಾಯಿ (Mother) ಕೂಡ ಸಾವನ್ನಪ್ಪಿರುವ ಘಟನೆ ಧಾರವಾಡ (Dharwad) ನಗರದ ತೇಜಸ್ವಿನಗರದಲ್ಲಿ (Tejaswi Nagar) ನಡೆದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೆಹಬೂಬ್ ಸಾಬ್ ನದಾಫ್ (47) ಬುಧವಾರ ಬೆಳಗ್ಗೆ ಧಾರವಾಡ ನಗರದ ರಾಜೀವ್ ಗಾಂಧಿನಗರದ ಬಳಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈಲ್ವೆ ಪೊಲೀ

ಧಾರವಾಡ: ಮಗನ (Son) ಸಾವಿನ ಸುದ್ದಿ ಕೇಳಿ ಆಘಾತದಿಂದ ತಾಯಿ (Mother) ಕೂಡ ಸಾವನ್ನಪ್ಪಿರುವ ಘಟನೆ ಧಾರವಾಡ (Dharwad) ನಗರದ ತೇಜಸ್ವಿನಗರದಲ್ಲಿ (Tejaswi Nagar) ನಡೆದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೆಹಬೂಬ್ ಸಾಬ್ ನದಾಫ್ (47) ಬುಧವಾರ ಬೆಳಗ್ಗೆ ಧಾರವಾಡ ನಗರದ ರಾಜೀವ್ ಗಾಂಧಿನಗರದ ಬಳಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈಲ್ವೆ ಪೊಲೀಸರು ಸಂಜೆ ಮೆಹಬೂಬ್ ಶವ ಮರಣೋತ್ತರ ಪರೀಕ್ಷೆ ಮುಗಿಸಿ ಕೊಟ್ಟಿದ್ದರು. ಇದನ್ನೂ ಓದಿ: ಫಾಸ್ಟ್-ಟ್ರ್ಯಾಕ್ ಕೋರ್ಟ್ ಸಾಲದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು: ಪ್ರಧಾನಿ ಮೋದಿಗೆ CJP ತಿರುಗೇಟು ಸಂಜೆ ಏಳು ಗಂಟೆಗೆ ಮೆಹಬೂಬ್ ಅಂತ್ಯಕ್ರಿಯೆ ಮಾಡಲು ತಯಾರಿ ಮಾಡಿದ್ದರು. ಮನೆಯಿಂದ ಮಗನ ಅಂತ್ಯಕ್ರಿಯೆ ಮಾಡಲು ಮೃತದೇಹ ತೆಗೆದುಕೊಂಡು ಹೋಗುತಿದ್ದಂತೆ ತಾಯಿ ಮುಗುಟಬಿ ನದಾಫ್ (68) ಕೂಡ ಸಾವನ್ನಪ್ಪಿದ್ದಾರೆ. ಮಗನ ಅಂತ್ಯಕ್ರಿಯೆ ಮುಗಿಸಿ ಬಂದು ಸಂಬಂಧಿಕರು ಹಾಗೂ ಬಡಾವಣೆಯ ಜನ ತಡ ರಾತ್ರಿ ತಾಯಿಯ ಅಂತ್ಯಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ: ಮೋದಿಯನ್ನು ನಿಂದಿಸಿ ವಿಡಿಯೋ ಹರಿಬಿಟ್ಟ ಯುವಕ ಪೊಲೀಸ್ ವಶಕ್ಕೆ
Read the complete story at Public TV Kannada