ದೇಶದಲ್ಲಿ ಮಕ್ಕಳಿಗಿಂತ ಗೋವುಗಳೇ ಹೆಚ್ಚು ಸುರಕ್ಷಿತ; ಮೆಹಬೂಬಾ ಮುಫ್ತಿ
ನವದೆಹಲಿ: ಪ್ರಸ್ತುತ ನಮ್ಮ ದೇಶದಲ್ಲಿ ಮಕ್ಕಳಿಗಿಂತ ಗೋವುಗಳೇ ಹೆಚ್ಚು ಸುರಕ್ಷಿತವಾಗಿವೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಮೆಹಬೂಬಾ ಮುಫ್ತಿ ಮಾತನಾಡಿದ
ನವದೆಹಲಿ: ಪ್ರಸ್ತುತ ನಮ್ಮ ದೇಶದಲ್ಲಿ ಮಕ್ಕಳಿಗಿಂತ ಗೋವುಗಳೇ ಹೆಚ್ಚು ಸುರಕ್ಷಿತವಾಗಿವೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಮೆಹಬೂಬಾ ಮುಫ್ತಿ ಮಾತನಾಡಿದರು.#WATCH | Delhi: At Jantar Mantar, PDP chief Mehbooba Mufti says, "I believe the entire country is facing its biggest test since 1947, and the youth have joined in. Cows are safer in our country today, not children. Our judiciary says it doesn't have time. If these people don't… pic.twitter.com/s0tTPReNl2— ANI (@ANI) July 23, 2026 1947ರ ನಂತರ ಮೊದಲ ಬಾರಿಗೆ ಇಡೀ ದೇಶವು ಇಂದು ಅಗ್ನಿ ಪರೀಕ್ಷೆ ಎದುರಿಸುತ್ತಿದ್ದು, ಈ ಹೋರಾಟದಲ್ಲಿ ಯುವಜನತೆಯೂ ಕೈಜೋಡಿಸಿದ್ದಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯೋ ತನಗೆ ಸಮಯವಿಲ್ಲ ಎಂದು ಹೇಳುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ಈ ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ಜನರು ಧ್ವನಿ ಎತ್ತದಿದ್ದರೆ, ನಮ್ಮ ದೇಶದ ಪರಿಸ್ಥಿತಿಯು 1947ರ ಪೂರ್ವದ ದಿನಗಳಿಗಿಂತಲೂ ಅತ್ಯಂತ ಕೆಟ್ಟದಾಗಲಿವೆ ಎಂದು ಅವರು ಹೇಳಿದರುದೇಶದಲ್ಲಿ ಬದಲಾವಣೆ ಬರಬೇಕಾದರೆ ಅದು ಯುವ ಜನರಿಂದ ಮಾತ್ರ ಸಾಧ್ಯ. ದೇಶದ ಸಂವಿಧಾನವನ್ನು ಉಳಿಸಬೇಕಾದರೂ ಅವರೇ ಬೇಕು ಎಂದು ಒತ್ತಿ ಹೇಳಿದರು.ಬಂಗಾಳದಲ್ಲಿ ಚುನಾವಣಾ ಆಯೋಗದ ಕೈವಾಡದಿಂದಲೇ ಬಿಜೆಪಿ ಗೆದ್ದಿದೆ: ಮೆಹಬೂಬಾ ಮುಫ್ತಿಬಿಜೆಪಿ ನಾಯಕರದ್ದು ದ್ವಂದ್ವ ನೀತಿ; ಮೆಹಬೂಬಾ ಮುಫ್ತಿ ಕಿಡಿ