ಶೂಟಿಂಗ್ ವೇಳೆ ಅವಘಡ – ತೆಲುಗು ಸ್ಟಾರ್ ಬಾಲಯ್ಯಗೆ ಶಸ್ತ್ರಚಿಕಿತ್ಸೆ
ತೆಲುಗು ನಟ, ಶಾಸಕ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಚಿತ್ರವೊಂದರ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಆಂಧ್ರಪ್ರದೇಶದ ಕಾಕಿನಾಡ ಪೋರ್ಟ್ ಬಳಿ ಬಾಲಯ್ಯ ನಟನೆಯ ಮುಂಬರುವ ಹೆಸರಿಡದ ಎನ್ಬಿಕೆ111 ಚಿತ್ರದ ಸಾಹಸ ಚಿತ್ರೀಕರಣ ನಡೆದಿತ್ತು. ಈ ವೇಳೆ ಬಾಲಯ್ಯಗೆ ಸಣ್ಣ ಅಪಘಾತವಾಗಿದೆ. ಈ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ 66 ವರ್ಷದ ಬಾಲಯ್ಯ. ಕೂ

ತೆಲುಗು ನಟ, ಶಾಸಕ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಚಿತ್ರವೊಂದರ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಆಂಧ್ರಪ್ರದೇಶದ ಕಾಕಿನಾಡ ಪೋರ್ಟ್ ಬಳಿ ಬಾಲಯ್ಯ ನಟನೆಯ ಮುಂಬರುವ ಹೆಸರಿಡದ ಎನ್ಬಿಕೆ111 ಚಿತ್ರದ ಸಾಹಸ ಚಿತ್ರೀಕರಣ ನಡೆದಿತ್ತು. ಈ ವೇಳೆ ಬಾಲಯ್ಯಗೆ ಸಣ್ಣ ಅಪಘಾತವಾಗಿದೆ. ಈ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ 66 ವರ್ಷದ ಬಾಲಯ್ಯ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಬಾಲಯ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಸಿನಿಮಾ ಹಾಗೂ ರಾಜಕೀಯದಲ್ಲಿ ಬ್ಯುಸಿ ಇರೋ ಬಾಲಯ್ಯ ಹೆಸರಿಡದ ಚಿತ್ರ ಗೋಪಿಚಂದ್ ಮಾನಿನೇನಿ ನಿರ್ದೇಶನದ ಸಿನಿಮಾದಲ್ಲಿ ತೊಡಗಿದ್ದರು. ಚಿತ್ರೀಕರಣ ಪ್ರಾರಂಭವಾಗಿ ತಿಂಗಳುಗಳೇ ಉರುಳಿದೆ. ಇದೀಗ ಸಾಹಸ ಚಿತ್ರೀಕರಣದ ವೇಳೆ ಸಣ್ಣ ಸ್ಟಂಟ್ ಮಾಡುವ ವೇಳೆ ಬಾಲಯ್ಯ ಸ್ನಾಯುಮುರಿತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಸೂಚಿಸಿದ ವೈದ್ಯರ ಸಲಹೆಯಂತೆ ಕೆಲವೇ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ನಡೆಯಲಿದೆ. ಆಂಧ್ರಪ್ರದೇಶದ ಖಾಸಗಿ ಆಸ್ಪತ್ರೆಯೊಂದಲ್ಲಿ ಬಾಲಯ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಮಾನಿಗಳು ಭಯ ಪಡಬೇಕಿಲ್ಲ ಎಂದು ಆಪ್ತರು ತಿಳಿಸಿದ್ದಾರೆ.