ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಮೂರು ವಿಡಿಯೊ, ಮೂರು ಸುದ್ದಿ, ಸದ್ದು
ಮುಂಬೈ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನಲ್ಲಿ ನಡೆದ ಪ್ರತಿಭಟನೆ ವೇಳೆ ಮೂರು ವಿಡಿಯೊಗಳು ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡಿದ್ದು ಮಾತ್ರವಲ್ಲ, ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ತೀವ್ರತೆಯನ್ನೂ ತೆರೆದಿಟ್ಟಿವೆ. ಜೊತೆಗೆ, ವಿದ್ಯಾರ್ಥಿಗಳ, ನಾಗರಿಕರ ಬದ್ಧತೆಯನ್ನೂ ಕಾಣಿಸಿದೆ.ಮು

ಮುಂಬೈ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನಲ್ಲಿ ನಡೆದ ಪ್ರತಿಭಟನೆ ವೇಳೆ ಮೂರು ವಿಡಿಯೊಗಳು ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡಿದ್ದು ಮಾತ್ರವಲ್ಲ, ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ತೀವ್ರತೆಯನ್ನೂ ತೆರೆದಿಟ್ಟಿವೆ. ಜೊತೆಗೆ, ವಿದ್ಯಾರ್ಥಿಗಳ, ನಾಗರಿಕರ ಬದ್ಧತೆಯನ್ನೂ ಕಾಣಿಸಿದೆ.ಮುಂಬೈ ಪೊಲೀಸ್ ವಾಹನದ ಚಾಲಕರೊಬ್ಬರು ವಿದ್ಯಾರ್ಥಿಗಳನ್ನು ಬೆದರಿಸಿದರು – ‘ಎಕ್ಸ್’ನಲ್ಲಿದ್ದ ವಿಡಿಯೊದಿಂದ ಪಡೆದ ಚಿತ್ರ‘ಡ್ರಗ್ಸ್ ಕೇಸ್ನಲ್ಲಿ ಒಳಗೆ ಹಾಕುತ್ತೇನೆ’ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಪೊಲೀಸ್ ಕಾರೊಂದರಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರು ಚಾಲನೆ ಮಾಡುತ್ತಿದ್ದ ಪೊಲೀಸ್ ಒಬ್ಬರು ವಿದ್ಯಾರ್ಥಿಗಳಿಗೆ ಧಮಕಿ ಹಾಕಿದ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ.‘ನಿಮ್ಮ ಜೇಬಿನಲ್ಲಿ ಡ್ರಗ್ಸ್ ಇಟ್ಟು, ನಿಮ್ಮ ಉಳಿದ ಜೀವನವನ್ನೆಲ್ಲಾ ಜೈಲಿನಲ್ಲಿ ಕೊಳೆಯವಂತೆ ಮಾಡುತ್ತೇನೆ. ನೀವು ಪ್ರತಿಭಟನೆಯಲ್ಲಿ ಭಾಗವಹಿಸಬಾರದು’ ಎಂದು ಪೊಲೀಸ್ ಹೇಳಿದರು. ಇದನ್ನು ವಿದ್ಯಾರ್ಥಿಗಳೇ ವಿಡಿಯೊ ಮಾಡಿದ್ದಾರೆ. ಪೊಲೀಸ್ ಎಚ್ಚರಿಕೆ ನೀಡುತ್ತಿದ್ದರೆ, ವಿದ್ಯಾರ್ಥಿಗಳು ತುಸುವೂ ಹೆದರದೆಯೇ ನಗುತ್ತಿದ್ದ ದೃಶ್ಯವೂ ವಿಡಿಯೊದಲ್ಲಿದೆ. ‘ವಿಡಿಯೊದ ಸತ್ಯಾಸತ್ಯತೆಯನ್ನು ಪರಿಗಣಿಸಿ, ಚಾಲಕನ ವಿರುದ್ಧ ತನಿಖೆ ನಡೆಸಲಾಗುವುದು. ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಟಿ ರಿಯಾ ಅವರು ಪೊಲೀಸ್ ವಾಹನವನ್ನು ತಡೆದು ನಿಲ್ಲಿಸಿದರು –ಪಿಟಿಐ ಚಿತ್ರಚಲಿಸುತ್ತಿದ್ದ ಪೊಲೀಸ್ ವಾಹನ ತಡೆದ ನಟಿಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಪೊಲೀಸ್ ವಾಹನವನ್ನು ನಟಿ, ಮಾಡೆಲ್ ರಿಯಾ ಅಹೀರ್ ಅವರು ರಸ್ತೆ ಮಧ್ಯದಲ್ಲಿಯೇ ತಡೆದು ನಿಲ್ಲಿಸಿ, ವಿದ್ಯಾರ್ಥಿಗಳು ಬಿಡುಗಡೆಗೊಳ್ಳುವಂತೆ ಮಾಡಿದ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕಾರ್ಯಕ್ಕಾಗಿ ರಿಯಾ ಅವರಿಗೆ ದೇಶದೆಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದೆ.‘ಬುಧವಾರ ಸಂಜೆ ಶಿವಾಜಿ ಪಾರ್ಕ್ ಹತ್ತಿರ ಈ ಘಟನೆ ನಡೆದಿದೆ. ‘ನಾನು ನನ್ನ ಸ್ನೇಹಿತರಿಗಾಗಿ ಕಾಯುತ್ತಾ ನಿಂತಿದ್ದಾಗ, ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಪೊಲೀಸ್ ವ್ಯಾನ್ ನೋಡಿದೆ. ನಾನು ಈ ವಾಹನವನ್ನು ತಡೆಯಬೇಕು ಎಂದು ತಕ್ಷಣವೇ ನನಗೆ ಅನ್ನಿಸಿತು. ನಾನು ಅದನ್ನೇ ಮಾಡಿದೆ’ ಎಂದು ರಿಯಾ ಹೇಳಿದರು.‘ಇವರನ್ನು ಬಂಧಿಸಲು ನಿಮ್ಮ ಬಳಿ ನೋಟಿಸ್ ಇದೆಯೇ ಎಂದು ಕೇಳಿದೆ. ನೋಟಿಸ್ ಇಲ್ಲದೆಯೇ ಯಾರನ್ನೂ ಕರೆದುಕೊಂಡು ಹೋಗುವಂತಿಲ್ಲ ಎಂದು ಹೇಳಿದೆ. ನೀವು ಹೋಮ್ವರ್ಕ್ ಮಾಡಿಕೊಂಡು ಪ್ರತಿಭಟನೆಗೆ ಬರಬೇಕು ಎಂದು ವಿದ್ಯಾರ್ಥಿಗಳಿಗೂ ಹೇಳಿದೆ. ನಾನು ಆ ವ್ಯಾನ್ ಅನ್ನು ಹೋಗಲು ಬಿಟ್ಟು ಬಿಟ್ಟಿದ್ದರೆ, ಒಬ್ಬ ಪ್ರಜೆಯಾಗಿ ನಾನು ಸೋತು ಹೋದಂತಾಗುತ್ತಿತ್ತು’ ಎಂದರು.‘ನನ್ನ ಜೊತೆ ಅಲ್ಲಿದ್ದವರೂ ಸೇರಿಕೊಂಡರು. ಇನ್ಕ್ವಿಲಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಿದೆ. ಜನರು ನನ್ನೊಂದು ಘೋಷಣೆ ಕೂಗಿದರು. ಕೆಲವರು ವಿಡಿಯೊ ಮಾಡಿಕೊಂಡರು. ಕೊನೆಗೆ, ಪೊಲೀಸರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲೇಬೇಕಾಯಿತು’ ಎಂದರು.ಪೊಲೀಸ್ ವಾಹನದ ಚಿಲಕ ತೆರೆದ ವಿದ್ಯಾರ್ಥಿಗಳು – ‘ಎಕ್ಸ್’ನಲ್ಲಿದ್ದ ವಿಡಿಯೊದಿಂದ ಪಡೆದ ಚಿತ್ರಪೊಲೀಸ್ ವಾಹನದ ಚಿಲಕ ತೆರೆದರುಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ತುಂಬಿಕೊಂಡು ಪೊಲೀಸ್ ವಾಹನವೊಂದು ತೆರಳುತ್ತಿತ್ತು. ಮುಂದೆ ವಾಹನ ಇದ್ದ ಕಾರಣ, ಪೊಲೀಸ್ ವಾಹನ ತುಸು ಹೊತ್ತು ನಿಂತುಕೊಳ್ಳಬೇಕಾಯಿತು. ಪೊಲೀಸ್ ವಾಹನ ನಿಲ್ಲುತ್ತಿದ್ದಂತೆಯೇ ರಸ್ತೆಯಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳು, ವಾಹನದ ಹಿಂಬದಿಯ ಬಾಗಿಲಿನ ಚಿಲಕ ತೆರೆದು ಬಿಟ್ಟರು. ತಕ್ಷಣವೇ ಒಳಗಿದ್ದ ವಿದ್ಯಾರ್ಥಿಗಳು ಓಡಿ ಹೊರಟು, ಮತ್ತೊಮ್ಮೆ ಪ್ರತಿಭಟನೆಯಲ್ಲಿ ಭಾಗಿಯಾದರು.