ದೂರಗಾಮಿ ಕ್ಷಿಪಣಿ ‘ಕುಶಾ’ ಯಶಸ್ವಿ ಹಾರಾಟ
ನವದೆಹಲಿ: ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ‘ಕುಶಾ’ ಎಂಬ ನೆಲದಿಂದ ಆಗಸಕ್ಕೆ ಚಿಮ್ಮುವ ದೂರಗಾಮಿ ಕ್ಷಿಪಣಿಯ ಮೊದಲ ಪ್ರಾಯೋಗಿಕ ಹಾರಾಟವನ್ನು ಡಿಆರ್ಡಿಒ ಗುರುವಾರ ಯಶಸ್ವಿಯಾಗಿ ನಡೆಸಿದೆ.ಅತಿ ವೇಗ ಮತ್ತು ಹೆಚ್ಚು ಎತ್ತರದಲ್ಲಿ ಹಾರಾಡುತ್ತಿದ್ದ, ವಿಮಾನಗಳನ್ನು ಹೋಲುವ ರೀತಿಯ ‘ವಿದ್ಯುನ್ಮಾನ ಗುರಿ’ ವಿರುದ್ಧ ಈ ಪ್ರಯೋಗ ನಡೆಸಲಾಗಿದ್ದು, ಕ್ಷಿಪಣಿಯು

ನವದೆಹಲಿ: ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ‘ಕುಶಾ’ ಎಂಬ ನೆಲದಿಂದ ಆಗಸಕ್ಕೆ ಚಿಮ್ಮುವ ದೂರಗಾಮಿ ಕ್ಷಿಪಣಿಯ ಮೊದಲ ಪ್ರಾಯೋಗಿಕ ಹಾರಾಟವನ್ನು ಡಿಆರ್ಡಿಒ ಗುರುವಾರ ಯಶಸ್ವಿಯಾಗಿ ನಡೆಸಿದೆ.ಅತಿ ವೇಗ ಮತ್ತು ಹೆಚ್ಚು ಎತ್ತರದಲ್ಲಿ ಹಾರಾಡುತ್ತಿದ್ದ, ವಿಮಾನಗಳನ್ನು ಹೋಲುವ ರೀತಿಯ ‘ವಿದ್ಯುನ್ಮಾನ ಗುರಿ’ ವಿರುದ್ಧ ಈ ಪ್ರಯೋಗ ನಡೆಸಲಾಗಿದ್ದು, ಕ್ಷಿಪಣಿಯು ಅದನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ‘ಕುಶಾ’ ಕ್ಷಿಪಣಿ ವ್ಯವಸ್ಥೆಯು ಯುದ್ಧ ವಿಮಾನಗಳು, ಕ್ಷಿಪಣಿಗಳು, ಮಾನವರಹಿತ ವಿಮಾನಗಳು ಮತ್ತು ಶತ್ರುಗಳ ದೊಡ್ಡ ವಿಮಾನಗಳು ಸೇರಿದಂತೆ ವಿವಿಧ ರೀತಿಯ ವೈಮಾನಿಕ ದಾಳಿಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ.ಈ ಪ್ರಯೋಗವು ದೇಶದ ವಾಯು ರಕ್ಷಣಾ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ‘ದೈತ್ಯ ಜಿಗಿತ’ವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಬಣ್ಣಿಸಿದ್ದಾರೆ. ‘ಕುಶಾ’ದ ಕ್ಷಿಪಣಿಗಳು, ರಾಡಾರ್ಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ಸೇರಿದಂತೆ ಒಟ್ಟಾರೆ ವ್ಯವಸ್ಥೆಯನ್ನು ಡಿಆರ್ಡಿಒದ ವಿವಿಧ ಪ್ರಯೋಗಾಲಯಗಳು ಮತ್ತು ಅದರ ಉದ್ಯಮ ಪಾಲುದಾರರು ಅಭಿವೃದ್ಧಿಪಡಿಸಿದ್ದಾರೆ.