ಅಯ್ಯನಕೆರೆ, ಮದಗದ ಕೆರೆಯಲ್ಲಿ ನೀರಿಲ್ಲದೇ ಕಂಗಾಲು – ಮಳೆಗಾಗಿ ದೇವರ ಮೊರೆ ಹೋದ ಜನ
ಚಿಕ್ಕಮಗಳೂರು: ಸಖರಾಯಪಟ್ಟಣ ಸಮೀಪದ ಬೃಹತ್ ಕೆರೆಗಳಾದ ಅಯ್ಯನಕೆರೆ ಹಾಗೂ ಮದಗದಕೆರೆ ತಪ್ಪಲಿನ ಜನ ಮಳೆಗಾಗಿ (Rain) ದೇವರ ಮೊರೆ ಹೋಗಿದ್ದಾರೆ. 1300 ಹೆಕ್ಟೇರ್ ವಿಸ್ತೀರ್ಣದ ಅಯ್ಯನಕೆರೆ ಹಾಗೂ 800 ಎಕರೆ ವಿಸ್ತೀರ್ಣದ ಮದಗದ ಕೆರೆ ತುಂಬುವುದೇ ಪಶ್ಚಿಮ ಘಟ್ಟಗಳ ತಪ್ಪಲಿನ ಮಳೆಯಿಂದ. ಆದರೆ, ಈ ವರ್ಷದ ಮುಳ್ಳಯ್ಯನಗಿರಿ ಭಾಗದಲ್ಲೇ ತೀವ್ರ ಮಳೆಯ ಅಭಾವದಿಂದ ರೈತರ ನಿರೀಕ್ಷೆಯಂ

ಚಿಕ್ಕಮಗಳೂರು: ಸಖರಾಯಪಟ್ಟಣ ಸಮೀಪದ ಬೃಹತ್ ಕೆರೆಗಳಾದ ಅಯ್ಯನಕೆರೆ ಹಾಗೂ ಮದಗದಕೆರೆ ತಪ್ಪಲಿನ ಜನ ಮಳೆಗಾಗಿ (Rain) ದೇವರ ಮೊರೆ ಹೋಗಿದ್ದಾರೆ. 1300 ಹೆಕ್ಟೇರ್ ವಿಸ್ತೀರ್ಣದ ಅಯ್ಯನಕೆರೆ ಹಾಗೂ 800 ಎಕರೆ ವಿಸ್ತೀರ್ಣದ ಮದಗದ ಕೆರೆ ತುಂಬುವುದೇ ಪಶ್ಚಿಮ ಘಟ್ಟಗಳ ತಪ್ಪಲಿನ ಮಳೆಯಿಂದ. ಆದರೆ, ಈ ವರ್ಷದ ಮುಳ್ಳಯ್ಯನಗಿರಿ ಭಾಗದಲ್ಲೇ ತೀವ್ರ ಮಳೆಯ ಅಭಾವದಿಂದ ರೈತರ ನಿರೀಕ್ಷೆಯಂತೆ ಕೆರೆಯಲ್ಲಿ ನೀರಿಲ್ಲ. ಇದನ್ನೂ ಓದಿ: ಕಳಸದಲ್ಲಿ ಭಾರೀ ಮಳೆ – ಬಸ್ ನಿಲ್ದಾಣಕ್ಕೆ ನುಗ್ಗಿದ ನೀರು ಜುಲೈ ಮುಗಿದು ಆಗಸ್ಟ್ ಬಂದರೂ ಕೆರೆಯಲ್ಲಿ ನೀರಿಲ್ಲದ ಕಾರಣ ಭವಿಷ್ಯಕ್ಕಾಗಿ ಕೆರೆ ತಪ್ಪಲಿನ ಹಸ್ತಿನಾಪುರ ಗ್ರಾಮಸ್ಥರು ಶಕುನ ರಂಗನಾಥ ಸ್ವಾಮಿ ಹಾಗೂ ಸರಪಳಿ ಕೆಂಚರಾಯನ ಮೊರೆ ಹೋಗಿದ್ದಾರೆ. ಕಾಫಿನಾಡಲ್ಲಿ ಈ ಬಾರಿ ವಾಡಿಕೆಯ ಅರ್ಧದಷ್ಡು ಮಳೆಯಾಗಿಲ್ಲ. ಅದರಲ್ಲೂ ಕಡೂರು ತಾಲೂಕಿನಲ್ಲಿ ಮಳೆ ಅಭಾವ ತೀವ್ರವಾಗಿದೆ. ಪಶ್ಚಿಮ ಘಟ್ಟಗಳ ತಪ್ಪಲಿನ ಮಳೆಯನ್ನೇ ನಂಬಿಕೊಂಡಿರೋ ಕೆರೆಗಳೇ ಖಾಲಿ ಇರೋದು ರೈತರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ, ಅಯ್ಯನಕೆರೆ ಮತ್ತು ಮದಗದಕೆರೆ ತಪ್ಪಲಿನ ಹಳ್ಳಿಗಳ ಗ್ರಾಮಸ್ಥರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಈ 2 ಬೃಹತ್ ಕೆರೆಗಳು ಸುಮಾರು 50 ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರಿನ ಮೂಲವಾಗಿದೆ. ಹಾಗಾಗಿ, ಹಸ್ತಿನಾಪುರ ಗ್ರಾಮದ ಸುಮಾರು 180 ಮನೆಗಳ ಜನರು ಒಂದಾಗಿ ಶಕುನ ರಂಗನಾಥ ಸ್ವಾಮಿ ಹಾಗೂ ಸರಪಳಿ ಕೆಂಚರಾಯನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಕುನ ರಂಗನಾಥ ಸ್ವಾಮಿಗೆ 101 ಎಡೆ ನೈವೇದ್ಯ ಮತ್ತು ಬಾಳೆಹಣ್ಣಿನ ರಸಾಯನ ಮಾಡಿ ಪೂಜೆ ಸಲ್ಲಿಸಿದರೆ, ಸರಪಳಿ ಕೆಂಚರಾಯನಿಗೆ 3 ಕುರಿಗಳ ಬಲಿ ಕೊಟ್ಟು ಮಳೆಗಾಗಿ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಶಿವನಸಮುದ್ರ & ಶಿಂಷಾದಲ್ಲಿ ಜಲವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತ