ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ಖ್ಯಾತ ಜೋಡಿ ನಟಿ ತೇಜಸ್ವಿನಿ–ವಿರಾಟ್
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಿಕಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ತೇಜಸ್ವಿನಿ ಹಾಗೂ ನಟ ವಿರಾಟ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ಧಾರಾವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತೇಜಸ್ವಿನಿ ಹಾಗೂ ನಾಯಕನಾಗಿ ನಟಿಸಿದ್ದ ವಿರಾಟ್ ಇದೇ ವರ್ಷದ ಫೆಬ್ರುವರಿ 6ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಿಕಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ತೇಜಸ್ವಿನಿ ಹಾಗೂ ನಟ ವಿರಾಟ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ಧಾರಾವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತೇಜಸ್ವಿನಿ ಹಾಗೂ ನಾಯಕನಾಗಿ ನಟಿಸಿದ್ದ ವಿರಾಟ್ ಇದೇ ವರ್ಷದ ಫೆಬ್ರುವರಿ 6ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಈ ಖುಷಿ ವಿಚಾರವನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಜೋಡಿ, ‘ಈಗ ನಾವು 3 ಜನ’ ಎಂದು ಅಡಿ ಬರಹ ಬರೆದುಕೊಂಡಿದೆ. ಇದೇ ಫೋಟೊಗಳನ್ನು ನೋಡಿದ ಅಭಿಮಾನಿಗಳು, ಸಹ ಕಲಾವಿದರು ಹಾಗೂ ಸ್ನೇಹಿತರು ಕಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ. ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ತೇಜಸ್ವಿನಿ–ವಿರಾಟ್ ಲಕ್ಷಣ ಧಾರಾವಾಹಿ ನಟಿಗೆ ಒಲಿದ ಅದೃಷ್ಟ.. ತೆಲುಗು ಅಂಗಳಕ್ಕೆ ಕಾಲಿಟ್ಟ ವಿಜಯಲಕ್ಷ್ಮೀ View this post on Instagram ಇನ್ನು, ನಟಿ ತೇಜಸ್ವಿನಿ ಮೂಲತಃ ಮೈಸೂರಿನವರು. ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹು ಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ನಟ ವಿರಾಟ್ ಅವರು ದಾವಣಗೆರೆ ಮೂಲದವರು. ಇವರ ತಾಯಿ ನಾಗವೇಣಿ ಅವರು ರಂಗಭೂಮಿ ಕಲಾವಿದೆ. ಬಣ್ಣದ ನಂಟು ಚಿಕ್ಕವಯಸ್ಸಿನಿಂದ ವಿರಾಟ್ಗೆ ಒಲಿದು ಬಂದಿದೆ. ‘ಸಂಘರ್ಷ’, ‘ರಾಧಿಕಾ’, ‘ನನ್ನ ದೇವ್ರು’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.ತೇಜಸ್ವಿನಿ ಹಾಗೂ ವಿರಾಟ್ ಪರಿಚಯ..ನಟಿ ತೇಜಸ್ವಿನಿ ಹಾಗೂ ವಿರಾಟ್ ‘ಸಂಘರ್ಷ’ ಧಾರಾವಾಹಿ ಮೂಲಕ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಮತ್ತೊಮ್ಮೆ ‘ರಾಧಿಕಾ’ ಧಾರಾವಾಹಿಯಲ್ಲಿ ಜೋಡಿಯಾಗಿ ಮಿಂಚಿದ್ದರು. ಈ ಇಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಬಳಿಕ ಕುಟುಬಸ್ಥರ ಸಮ್ಮುಖದಲ್ಲಿ ತೇಜಸ್ವಿನಿ ಹಾಗೂ ವಿರಾಟ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು.