ಸೂರ್ಯವಂಶಿ ಸ್ಫೋಟಕ ಫಿಫ್ಟಿ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ 7 ವಿಕೆಟ್ಗಳ ಜಯ
ಹರಾರೆ: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಸ್ಫೋಟಕ ಫಿಫ್ಟಿ ನೆರವಿನಿಂದ ಜಿಂಬಾಬ್ವೆ ವಿರುದ್ಧ ಭಾರತ (India vs Zimbabwe) ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಟ

ಹರಾರೆ: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಸ್ಫೋಟಕ ಫಿಫ್ಟಿ ನೆರವಿನಿಂದ ಜಿಂಬಾಬ್ವೆ ವಿರುದ್ಧ ಭಾರತ (India vs Zimbabwe) ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 40 ಬಾಲ್ಗಳು ಬಾಕಿ ಇರುವಾಗಲೇ ಗುರಿ ತಲುಪಿ ಗೆದ್ದು ಬೀಗಿತು. ಇದನ್ನೂ ಓದಿ: FIFA ವಿಶ್ವಕಪ್ನಿಂದ ಅರ್ಜೆಂಟೀನಾ ಬ್ಯಾನ್ ಮಾಡಿ: ಗಿನ್ನಿಸ್ ರೆಕಾರ್ಡ್ನತ್ತ ಸಹಿ ಸಂಗ್ರಹ ಕ್ಯಾಂಪೇನ್ ತಂಡದ ಪರ ಸೂರ್ಯವಂಶಿ 18 ಎಸೆತಗಳಲ್ಲಿ (4 ಫೋರ್, 4 ಸಿಕ್ಸರ್) ಅರ್ಧಶತಕ ಬಾರಿಸಿ ಗಮನ ಸೆಳೆದರು. ಇಶಾನ್ ಕಿಶನ್ 35, ಶ್ರೇಯಸ್ ಅಯ್ಯರ್ (ಔಟಾಗದೇ) 28 ರನ್ ಗಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆಯನ್ನು ಭಾರತ 20 ಓವರ್ಗಳಲ್ಲಿ 7 ವಿಕೆಟ್ಗೆ 125 ರನ್ಗಳಿಗೆ ಕಟ್ಟಿಹಾಕಿತು. ವೆಸ್ಲಿ ಮಾಧೇವೆರೆ 34 ಎಸೆತಗಳಲ್ಲಿ 39 ರನ್ ಗಳಿಸಿ ಆತಿಥೇಯರ ಪರ ಅಗ್ರ ಸ್ಕೋರರ್ ಆದರು. ಟೀಂ ಇಂಡಿಯಾ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿದರು. ಮಾಯಾಂಕ್ ಯಾದವ್ (2/18) ಮತ್ತು ಪ್ರಿನ್ಸ್ ಯಾದವ್ (2/19) ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು. ಶಿವಂ ದುಬೆ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಪದಕ ಖಚಿತ