ಭಾರತದ ಬಾಕ್ಸರ್ ನೇರ ಸೆಮಿಫೈನಲ್ಗೆ: ಪದಕ ಖಚಿತಪಡಿಸಿಕೊಂಡ ಲವ್ಲಿನಾ
ಗ್ಲಾಸ್ಲೊ: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿಕೊಂಡಿದ್ದಾರೆ. ಮಹಿಳೆಯರ ಬಾಕ್ಸಿಂಗ್ 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿರುವ ಅವರು ನೇರವಾಗಿ ಸೆಮಿಫೈನಲ್ಗೆ ‘ಬೈ ಪಡೆದಿರುವುದರಿಂದ ಕನಿಷ್ಠ ಕಂಚಿನ ಪದಕ ಖಾತರಿಯಾಗಿದೆ.ಈ ಕ್ರೀಡೆಗಳ ಬಾಕ್ಸಿಂಗ್ ಸ್ಪರ್ಧೆಗಳು ಶುಕ್ರವಾರ ಆರಂ

ಗ್ಲಾಸ್ಲೊ: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿಕೊಂಡಿದ್ದಾರೆ. ಮಹಿಳೆಯರ ಬಾಕ್ಸಿಂಗ್ 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿರುವ ಅವರು ನೇರವಾಗಿ ಸೆಮಿಫೈನಲ್ಗೆ ‘ಬೈ ಪಡೆದಿರುವುದರಿಂದ ಕನಿಷ್ಠ ಕಂಚಿನ ಪದಕ ಖಾತರಿಯಾಗಿದೆ.ಈ ಕ್ರೀಡೆಗಳ ಬಾಕ್ಸಿಂಗ್ ಸ್ಪರ್ಧೆಗಳು ಶುಕ್ರವಾರ ಆರಂಭವಾಗಲಿವೆ. 75 ಕೆ.ಜಿ. ವಿಭಾಗದಲ್ಲಿ ಐವರಷ್ಟೇ ಕಣದಲ್ಲಿದ್ದಾರೆ. ಸೆಮಿಫೈನಲ್ ತಲುಪಿದವರಿಗೆ ಪದಕ ಖಚಿತ. ಲವ್ಲಿನಾ ಜುಲೈ 31ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ತುವಾಲು ದೇಶದ ತಾಫಕಿ ಅವರನ್ನು ಎದುರಿಸಲಿದ್ದಾರೆ. ಇದು 28 ವರ್ಷದ ಭಾರತದ ಬಾಕ್ಸರ್ಗೆ ಈ ಕ್ರೀಡೆಗಳಲ್ಲಿ ಮೊದಲ ಪದಕವಾಗಲಿದೆ.ಅಸ್ಸಾಮಿನ ಬಾಕ್ಸರ್ ಈ ಹಿಂದೆ ಒಲಿಂಪಿಕ್ ಕ್ರೀಡೆಗಳಲ್ಲಿ, ವಿಶ್ವ ಚಾಂಪಿಯನ್ಷಿಪ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.ರೆಯಾನ್ಗೆ ಸೋನೊವಾಲ್ ಆಘಾತ: ಭಾರತದ ಪುತುಲ್ ಸೋನೊವಾಲ್ ಅವರು ಗುರುವಾರ ಕಾಮನ್ವೆಲ್ತ್ ಕ್ರೀಡಾಕೂಟದ ಲಾನ್ ಬೌಲ್ಸ್ ಪುರುಷರ ಸಿಂಗಲ್ಸ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ರೆಯಾನ್ ಬೆಸ್ಟರ್ ಅವರಿಗೆ ಟೈಬ್ರೇಕ್ನಲ್ಲಿ ಆಘಾತ ನೀಡಿದರು.ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಪದಾರ್ಪಣೆ ಮಾಡಿದ ಸೋನೊವಾಲ್ ಮೊದಲ ಗೇಮ್ ಅನ್ನು 5-4 ರಿಂದ ಗೆದ್ದುಕೊಂಡರು. ಆದರೆ, ಎರಡನೇ ಗೇಮ್ನಲ್ಲಿ ಕೆನಡಾದ ಬೆಸ್ಟರ್ 7-3ರಿಂದ ಮೇಲುಗೈ ಸಾಧಿಸಿದ್ದರಿಂದ ಪಂದ್ಯ ಟೈಬ್ರೇಕ್ನತ್ತ ಸಾಗಿತು. ಅಲ್ಲಿ ಅಸ್ಸಾಂನ ಸೋನೊ ವಾಲ್ ಗೆಲುವಿನ ನಗೆ ಬೀರಿ ದರು. ಏಷ್ಯನ್ ಚಾಂಪಿಯನ್ ಆಗಿರುವ ಅವರು ಎರಡನೇ ಪಂದ್ಯದಲ್ಲಿ ಫಾಕ್ಲ್ಯಾಂಡ್ ದ್ವೀಪಗಳ ಸೆಸಿಲ್ ಅಲೆಕ್ಸಾಂಡರ್ ಅವರನ್ನು ಎದುರಿಸಲಿದ್ದಾರೆ.ಭಾರತದ ರೂಪಾ ರಾಣಿ ಟಿರ್ಕಿ (ಲೀಡ್) ಮತ್ತು ಪಿಂಕಿ ಸಿಂಗ್ (ಸ್ಕಿಪ್) ಜೋಡಿಯು ಮಹಿಳೆಯರ ಡಬಲ್ಸ್ನಲ್ಲಿ ಮಾಲ್ಟಾ ವಿರುದ್ಧ ಆರಂಭಿಕ ಪಂದ್ಯವನ್ನು ಟೈಬ್ರೇಕ್ನಲ್ಲಿ ಗೆದ್ದುಕೊಂಡಿತು.‘ಬಿ’ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿಯು ಮೊದಲ ಗೇಮ್ನಲ್ಲಿ 7-1 ಅಂತರದ ಗೆಲುವಿನೊಡನೆ 1-0 ಮುನ್ನಡೆ ಪಡೆಯಿತು. ಆದರೆ, ಎರಡನೇ ಗೇಮ್ನಲ್ಲಿ ಮಾಲ್ಟಾದ ರೆಬೆಕಾ ಲೂಯಿಸ್ ರಿಕ್ಸನ್ (ಲೀಡ್) ಮತ್ತು ಕಾನಿ-ಲೀ ರಿಕ್ಸನ್ (ಸ್ಕಿಪ್) ತಿರುಗಿಬಿದ್ದು, 3-4ರಿಂದ ಹಿಡಿತ ಸಾಧಿಸಿದರು.ರೋಚಕ ಟೈ ಬ್ರೇಕರ್ನಲ್ಲಿ ಭಾರತದ ಆಟಗಾರ್ತಿಯರು ತಮ್ಮ ಎದುರಾಳಿ ಗಳಿಗಿಂತ ಹಿನ್ನಡೆಯಲ್ಲಿದ್ದರು. ಆದರೆ, ಪಿಂಕಿ ಅವರು ಕೊನೆಯ ಎಸೆತದಲ್ಲಿ ಅಮೋಘ ಪ್ರದರ್ಶನ ನೀಡಿ ಪಂದ್ಯವನ್ನು ಗೆದ್ದುಕೊಟ್ಟರು.ಟಿರ್ಕಿ ಮತ್ತು ಪಿಂಕಿ ಅವರಿಬ್ಬರೂ 2022ರ ಬರ್ಮಿಂಗ್ಹ್ಯಾಮ್ ಆವೃತ್ತಿಯಲ್ಲಿ ಚಿನ್ನ ಗೆದ್ದ ಬೌಲ್ಸ್ನ ಮಹಿಳಾ ಫೋರ್ಸ್ ತಂಡದ ಭಾಗವಾಗಿದ್ದರು. ಆದರೆ, ಗ್ಲಾಸ್ಗೊ ಕೂಟದಲ್ಲಿ ಪುರುಷ ಮತ್ತು ಮಹಿಳಾ ಫೋರ್ಸ್ ಸ್ಪರ್ಧೆಯನ್ನು ಹೊರಗಿಡಲಾಗಿದೆ. ಪುರುಷರ ಸಿಂಗಲ್ಸ್, ಡಬಲ್ಸ್ ಹಾಗೂ ಮಹಿಳಾ ಸಿಂಗಲ್ಸ್, ಡಬಲ್ಸ್ ಸ್ಪರ್ಧೆಗಳನ್ನು ಮಾತ್ರ ಸೇರಿಸಲಾಗಿದೆ.