ಕಾಮನ್ವೆಲ್ತ್ ಕ್ರೀಡೆ | ನಾಡಾದಿಂದ ಅಮಾನತು: ಹಿಂದೆಸರಿದ ಜುಡೊ ಸ್ಪರ್ಧಿ ಅರುಣ್
ನವದೆಹಲಿ: ಭಾರತದ ಜೂಡೊ ಪಟು ಅರುಣ್ ಕುಮಾರ್ ಅವರು ಸ್ಪರ್ಧಾಪೂರ್ವ ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ್ದು, ಗ್ಲಾಸ್ಗೊದ ಕಾಮನ್ವೆಲ್ತ್ ಕ್ರೀಡೆಗಳಿಂದ ಹಿಂದೆಸರಿದಿದ್ದಾರೆ.73 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಅವರು ಕಳೆದ ತಿಂಗಳು ಕ್ವಿಂಗ್ದಾವೊ ಗ್ರ್ಯಾನ್ಪ್ರಿಯಲ್ಲಿ ಪಾಲ್ಗೊಂಡಿದ್ದರು. ಅವರಿಂದ ಪಡೆದ ಮಾದರಿಯಲ್ಲಿ ಅನಬಾಲಿಕ್ ಸ್ಟೆರಾಯಿಡ್ ಅಂಶ ಕಂಡುಬಂದ ಕಾರಣ ರ

ನವದೆಹಲಿ: ಭಾರತದ ಜೂಡೊ ಪಟು ಅರುಣ್ ಕುಮಾರ್ ಅವರು ಸ್ಪರ್ಧಾಪೂರ್ವ ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ್ದು, ಗ್ಲಾಸ್ಗೊದ ಕಾಮನ್ವೆಲ್ತ್ ಕ್ರೀಡೆಗಳಿಂದ ಹಿಂದೆಸರಿದಿದ್ದಾರೆ.73 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಅವರು ಕಳೆದ ತಿಂಗಳು ಕ್ವಿಂಗ್ದಾವೊ ಗ್ರ್ಯಾನ್ಪ್ರಿಯಲ್ಲಿ ಪಾಲ್ಗೊಂಡಿದ್ದರು. ಅವರಿಂದ ಪಡೆದ ಮಾದರಿಯಲ್ಲಿ ಅನಬಾಲಿಕ್ ಸ್ಟೆರಾಯಿಡ್ ಅಂಶ ಕಂಡುಬಂದ ಕಾರಣ ರಾಷ್ಟ್ರೀಯ ಉದ್ದೀಪನಮದ್ದು ನಿಗ್ರಹ ಘಟಕ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ.‘ಅಮಾನತಿನ ಮಾಹಿತಿ ತಲುಪಿದೆ. ಅವರನ್ನು ಕೈಬಿಡಲಾಗಿದೆ’ ಎಂದು ಫೆಡರೇಷನ್ನ ಮೂಲವೊಂದು ಪಿಟಿಐಗೆ ತಿಳಿಸಿವೆ.ಜುಡೊ ಸ್ಪರ್ಧೆಗಳು ಜುಲೈ 31ರಿಂದ ನಡೆಯಲಿರುವ ಕಾರಣ ಭಾರತದ ಸ್ಪರ್ಧಿಗಳು ಜುಲೈ 27ರಂದು ಗ್ಲಾಸ್ಗೊಗೆ ತೆರಳಲಿದ್ದಾರೆ. ಭಾರತ 14 ಮಂದಿಯ (ಏಳು ಪುರುಷರು, ಏಳು ಮಹಿಳೆಯರು) ತಂಡ ಕಳುಹಿಸಿದ್ದು ಈಗ ಜುಡೊ ತಂಡದ ಸಂಖ್ಯೆ 13ಕ್ಕೆ ಇಳಿಯಿತು. ಭಾರತದ ಒಟ್ಟಾರೆ ಸ್ಪರ್ಧಿಗಳ ಸಂಖ್ಯೆ 126 ರಿಂದ 124ಕ್ಕೆ ಇಳಿದಿದೆ. ಪ್ಯಾರಾ ಈಜುಪಟು ತೇಜಸ್ ನಂದಕುಮಾರ್ ಅವರು ಕ್ಲಾಸಿಫಿಕೇಷನ್ ಮಾನದಂಡದಲ್ಲಿ ಬರದ ಕಾರಣ ಅವರನ್ನು ಕೈಬಿಡಲಾಗಿತ್ತು.21 ವರ್ಷದ ಅರುಣ್ ಕಳೆದ ವರ್ಷ ತೈಪೆ ಏಷ್ಯನ್ ಓಈಪನ್ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದರು. ಈ ಹಿಂದಿನ (2022) ಆವೃತ್ತಿಯಲ್ಲಿ ಭಾರತ ಜೂಡೊದಲ್ಲಿ ಮೂರು ಪದಕಗಳನ್ನು (ಎರಡು ಬೆಳ್ಳಿ, ಒಂದು ಕಂಚು) ಗೆದ್ದುಕೊಂಡಿತ್ತು. ಆಗ ಆರು ಮಂದಿಯ ತಂಡ ಭಾಗವಹಿಸಿತ್ತು.ಆಗಿನ ತಂಡದಲ್ಲಿದ್ದ ತುಲಿಕಾ ಮಾನ್ ಬೆಳ್ಳಿ ಗೆದ್ದಿದ್ದು, ಈ ಬಾರಿ ಚಿನ್ನಕ್ಕೆ ಯತ್ನಿಸಲಿದ್ದಾರೆ. ಈ ಬಾರಿಯ ಕ್ರೀಡೆಗಳ ಸಿದ್ಧತೆಗಾಗಿ ಜುಡೊ ಪಟುಗಳು ಜುಲೈ 17ರವರೆಗೆ ಜಪಾನ್ನ ತ್ಸಕುಬಾ ವಿ.ವಿ.ಯಲ್ಲಿ ತರಬೇತಿ ಪಡೆದಿದ್ದರು.