ಸಿಎಂ ಆದಮೇಲೂ ತೆರೆ ಮೇಲೆ ಮೆರೆದ ಸ್ಟಾರ್ಗಳು: MGR, NTR ಹಾದಿಯಲ್ಲಿ ವಿಜಯ್!
ತಮಿಳುನಾಡು ಮುಖ್ಯಮಂತ್ರಿ, ನಟ ಜೋಸೆಫ್ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಕೊನೆಗೂ ತೆರೆಕಂಡಿದೆ. ವಿಜಯ್ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಸಿನಿಮಾ ಸೋರಿಕೆ, ಚಲನಚಿತ್ರ ಮಂಡಳಿಯಿಂದ ಪ್ರಮಾಣಪತ್ರ ಪಡೆಯುವುದರಲ್ಲಿ ತೊಂದರೆ ಹೀಗೆ ಸಾಲು ಸಾಲು ಅಡೆತಡೆಗಳನ್ನು ದಾಟಿ ಜನ ನಾಯಗನ್ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.&n

ತಮಿಳುನಾಡು ಮುಖ್ಯಮಂತ್ರಿ, ನಟ ಜೋಸೆಫ್ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಕೊನೆಗೂ ತೆರೆಕಂಡಿದೆ. ವಿಜಯ್ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಸಿನಿಮಾ ಸೋರಿಕೆ, ಚಲನಚಿತ್ರ ಮಂಡಳಿಯಿಂದ ಪ್ರಮಾಣಪತ್ರ ಪಡೆಯುವುದರಲ್ಲಿ ತೊಂದರೆ ಹೀಗೆ ಸಾಲು ಸಾಲು ಅಡೆತಡೆಗಳನ್ನು ದಾಟಿ ಜನ ನಾಯಗನ್ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ವಿಜಯ್ ಸಿಎಂ ಆಗುವುದಕ್ಕೂ ಮುನ್ನವೇ ಚಿತ್ರಕರಣ ಪೂರ್ಣಗೊಂಡಿದ್ದರೂ ಸಿನಿಮಾ ತೆರೆಕಂಡಿರಲಿಲ್ಲ. ಈಗ ವಿಜಯ್ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ತಮಿಳುನಾಡಿನ ಇತಿಹಾಸದಲ್ಲಿ ಸುಮಾರು 50 ವರ್ಷಗಳ ಬಳಿಕ ಮುಖ್ಯಮಂತ್ರಿಯೊಬ್ಬರ ಸಿನಿಮಾ ಬಿಡುಗಡೆಯಾಗಿದೆ. ಈ ಹಿಂದೆ ಯಾವೆಲ್ಲಾ ನಟರು ಮುಖ್ಯಮಂತ್ರಿಯಾದ ಮೇಲೆ ಸಿನಿಮಾ ತೆರೆಕಂಡಿದೆ ಎನ್ನುವುದನ್ನು ನೋಡುವುದಾದರೆ ಮೊದಲಿಗೆ ಕಾಣಸಿಗುವುದೇ ಎಂಜಿಆರ್.ಎಂ.ಜಿ ರಾಮಚಂದ್ರನ್1977ರಲ್ಲಿ ಎಂ.ಜಿ ರಾಮಚಂದ್ರನ್ ಅವರು ಮುಖ್ಯಮಂತ್ರಿಯಾದ ಮೇಲೆ ಅವರು ನಟಿಸಿದ್ದ ‘ಮೀನವ ನಂಬನ್’ ಸಿನಿಮಾ ಬಿಡುಗಡೆಯಾಗಿತ್ತು.ಎಂಜಿಆರ್ ಮುಖ್ಯಮಂತ್ರಿಯಾಗಿ 2 ತಿಂಗಳ ನಂತರ ‘ಮೀನವ ನಂಬನ್’ ಬಿಡುಗಡೆಯಾಗಿತ್ತು. ಮುಖ್ಯಮಂತ್ರಿಯಾಗಿ ಆರು ತಿಂಗಳ ನಂತರ ಎಂಜಿಆರ್ ನಿರ್ದೇಶಿಸಿ, ನಟಿಸಿದ್ದ ಇನ್ನೊಂದು ಸಿನಿಮಾ ‘ಮಧುರೈ ಮೀಟ್ಟ ಸುಂದರಪಾಂಡಿಯನ್’ ಬಿಡುಗಡೆಯಾಗಿತ್ತು.ಎನ್ಟಿಆರ್ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್.ಟಿ. ರಾಮರಾವ್ ಕೂಡ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರು. 1983ರಲ್ಲಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು. 1984ರಲ್ಲಿ ಇವರು ನಟಿಸಿದ್ದ ಭಕ್ತಿಪ್ರಧಾನ ಸಿನಿಮಾ ‘ಶ್ರೀಮದ್ ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿ ಚರಿತ್ರೆ’ ತೆರೆಕಂಡಿತು. ಮುಖ್ಯಮಂತ್ರಿಯಾಗಿದ್ದಾಗಲೇ ಎನ್ಟಿಆರ್ ಅವರು ‘ಸಾಮ್ರಾಟ್ ಅಶೋಕ್’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ 1992ರಲ್ಲಿ ತರೆಕಂಡಿತ್ತು. ಈಗ ವಿಜಯ್ಎಚ್. ವಿನೋದ್ ನಿರ್ದೇಶನದ ಆ್ಯಕ್ಷನ್-ಡ್ರಾಮಾ ‘ಜನ ನಾಯಗನ್’, ವಿಜಯ್ ಮುಖ್ಯಮಂತ್ರಿಯಾದ ನಂತರ ಬಿಡುಗಡೆಯಾಗಿದೆ. ಸಿಎಂ ಆದ ನಂತರ ಇದು ಅವರ ಮೊದಲ ಹಾಗೂ ಸಿನಿ ಬದುಕಿನ ಕೊನೆಯ ಸಿನಿಮಾವಾಗಿದೆ.ಕನ್ನಡ ಸಿನಿಮಾ ಕ್ಷೇತ್ರ ನೋಡುವುದಾದರೆಕನ್ನಡದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಮಗ ನಿಖಿಲ್ ಕುಮಾರ್ ಸ್ವಾಮಿ ನಟಿಸಿದ್ದ ‘ಜಾಗ್ವಾರ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.