ಜಂತರ್ ಮಂತರ್ನಲ್ಲಿ ಇಂಟರ್ನೆಟ್ ಸ್ಥಗಿತ, ಮತ್ತೆ ದಾಳಿಗೆ ಸಂಚು: ಸಿಜೆಪಿ ಆತಂಕ
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬುಧವಾರ ಆರೋಪಿಸಿದೆ. ಅಲ್ಲದೆ ಪ್ರತಿಭಟನಾಕಾರರ ಮೇಲೆ ಪೊಲೀಸ್ ಮತ್ತೊಮ್ಮೆ ದಾಳಿ ನಡೆಸಲು ಸ

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬುಧವಾರ ಆರೋಪಿಸಿದೆ. ಅಲ್ಲದೆ ಪ್ರತಿಭಟನಾಕಾರರ ಮೇಲೆ ಪೊಲೀಸ್ ಮತ್ತೊಮ್ಮೆ ದಾಳಿ ನಡೆಸಲು ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, 'ಜಂತರ್ ಮಂತರ್ನಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸರ್ಕಾರ ಮತ್ತೊಂದು ದಾಳಿಗೆ ಯೋಜಿಸುತ್ತಿದೆಯೇ' ಎಂದು ಕೇಳಿದ್ದಾರೆ. ಈ ಸಂಬಂಧ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಧಗಿತಗೊಳಿಸಿರುವ ಮೊಬೈಲ್ ಆಪರೇಟರ್ ಸಂದೇಶದ ಚಿತ್ರವನ್ನು ಹಂಚಿದ್ದಾರೆ. Internet service shutdown at Jantar Mantar. Govt planning another brutal crackdown? pic.twitter.com/GzT5bJuamA— Abhijeet Dipke (@abhijeet_dipke) July 22, 2026 ಮಗದೊಂದು ಪೋಸ್ಟ್ನಲ್ಲಿ ಪ್ರತಿಭಟನಾನಿರತ ಸ್ಥಳದಲ್ಲಿ ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿಗೆ ಮನವಿ ಮಾಡಿರುವ ಅವರು, 'ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿರುವ ಅಮಾಯಕ ಜನರ ಮೇಲೆ ಹಲ್ಲೆ ನಡೆಸುವಂತಹ ಕಾನೂನುಬಾಹಿರ ಆದೇಶಗಳನ್ನು ಪಾಲಿಸಬೇಡಿ. ಇದು ನಿಮಗೂ ಪರೀಕ್ಷೆಯ ಸಮಯ. ಜನಸಾಮಾನ್ಯರ ಪರ ನಿಲ್ಲುತ್ತೀರೋ ಅಥವಾ ಸರ್ವಾಧಿಕಾರಿಗಳ ಪರವೋ' ಎಂದು ಪ್ರಶ್ನಿಸಿದ್ದಾರೆ. ನಜ್ಜುಗುಜ್ಜಾದ ಕಾರು?'ದೆಹಲಿ ಪೊಲೀಸರು ಈಗ ಸಂಪೂರ್ಣ ನಜ್ಜುಗುಜ್ಜಾದ ಕಾರೊಂದನ್ನು ಜಂತರ್ ಮಂತರ್ನ ಪ್ರತಿಭಟನಾ ಸ್ಥಳದ ಹೊರಗಿರಿಸಿದ್ದಾರೆ. ಕಾರನ್ನು ಏಕೆ ಇಲ್ಲಿಗೆ ತರಲಾಗಿದೆ? ಈ ಕಾರಿನ ಮೂಲಕ ಏನನ್ನು ಸಾಧಿಸಲು ಉದ್ದೇಶಿಸಿದ್ದೀರಿ' ಎಂದು ದೆಹಲಿ ಪೊಲೀಸರನ್ನು ಅಭಿಜೀತ್ ಪ್ರಶ್ನಿಸಿದ್ದಾರೆ. 'ಈ ಕಾರನ್ನು ಯಾವ ಸ್ಥಿತಿಯಲ್ಲಿ ಇಲ್ಲಿಗೆ ತರಲಾಗಿದೆ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಆರೋಪ ಹೊರಿಸುವ ಮುನ್ನ ಈ ವಿಷಯ ಉಲ್ಲೇಖಿಸುವುದು ಮುಖ್ಯವಾಗಿದೆ' ಎಂದು ಬುಧವಾರ ತಡರಾತ್ರಿ ಅಭಿಜೀತ್ ಪೋಸ್ಟ್ ಮಾಡಿದ್ದಾರೆ. 23rd July at 2:00 AMDelhi Police has just brought in a totally damaged car and placed it outside the protest site at Jantar Mantar. Why have you placed this car here @DelhiPolice? What do you intend to show with this car? Everyone should remember this car has been brought… pic.twitter.com/egK2pfv2qR— Cockroach is Back (@Cockroachisback) July 22, 2026 Fact Check: ‘ಕಾಕ್ರೋಚ್’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೇ ಸುನಿತಾ ವಿಲಿಯಮ್ಸ್?ಮೋದಿಯ ವಾರಾಣಸಿಯಲ್ಲಿ ‘ಕಾಕ್ರೋಚ್’, ವಾಂಗ್ಚೂಕ್ಗೆ ಬೆಂಬಲ; ವಿದ್ಯಾರ್ಥಿಗಳ ಧರಣಿ