ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ವಿಶ್ವಸಂಸ್ಥೆಯಲ್ಲಿ ಪಾಕ್ಗೆ ಭಾರತ ತಿರುಗೇಟು
ನ್ಯೂಯಾರ್ಕ್: 'ಜಮ್ಮು ಮತ್ತು ಕಾಶ್ಮೀರವು ಎಂದೆಂದಿಗೂ ಭಾರತದ ಅವಿಭಾಜ್ಯ ಮತ್ತು ವಿಭಜಿಸಲಾಗದ ಅಂಗ. ಅದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಆಗಿರುವ ಪರ್ವತನೇನಿ ಹರೀಶ್ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 'ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ: ಶಾಂತಿ, ಭದ್ರತೆ ಮತ್ತು ಸಮೃದ್ಧಿಯ ಅಡಿಪಾಯ' ಎಂಬ ವಿಷಯದ ಕುರಿ
ನ್ಯೂಯಾರ್ಕ್: 'ಜಮ್ಮು ಮತ್ತು ಕಾಶ್ಮೀರವು ಎಂದೆಂದಿಗೂ ಭಾರತದ ಅವಿಭಾಜ್ಯ ಮತ್ತು ವಿಭಜಿಸಲಾಗದ ಅಂಗ. ಅದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಆಗಿರುವ ಪರ್ವತನೇನಿ ಹರೀಶ್ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 'ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ: ಶಾಂತಿ, ಭದ್ರತೆ ಮತ್ತು ಸಮೃದ್ಧಿಯ ಅಡಿಪಾಯ' ಎಂಬ ವಿಷಯದ ಕುರಿತು ನಡೆದ ಉನ್ನತ ಮಟ್ಟದ ಚರ್ಚೆಯ ವೇಳೆ ವಿಷಯಾಂತರ ಮಾಡಲು ಯತ್ನಿಸಿದ ಪಾಕಿಸ್ತಾನದ ವಿರುದ್ಧ ಭಾರತದ ಪ್ರತಿನಿಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. 'ಭಾರತದ ಸಂವಿಧಾನ ಹಾಗೂ ಕಾನೂನುಬದ್ಧವಾಗಿ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗವಾಗಿದೆ. ಈ ವಾಸ್ತವವನ್ನು ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದೆ' ಎಂದು ಅವರು ಹೇಳಿದರು. ಸಿಂಧೂ ನದಿ ನೀರು ಒಪ್ಪಂದದ ವಿಚಾರವಾಗಿ ಭಾರತದ ನಿಲುವು ಪುನರುಚ್ಚರಿಸಿದ ಹರೀಶ್, 'ಭಯೋತ್ಪಾದನೆ ಹಾಗೂ ಮಾತುಕತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ತನ್ನ ಸರ್ಕಾರಿ ನೀತಿಯನ್ನಾಗಿ ಬಳಸಿಕೊಳ್ಳುತ್ತಿದೆ' ಎಂದು ತಿರುಗೇಟು ನೀಡಿದರು. 'ಭಾರತದತ್ತ ಬೆರಳು ತೋರುವ ಮೊದಲು ಪಾಕಿಸ್ತಾನ ತನ್ನ ದೇಶದ ಆಂತರಿಕ ಸಮಸ್ಯೆ ಹಾಗೂ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ಕಡೆಗೆ ಗಮನಹರಿಸಿದರೆ ಒಳಿತು' ಎಂದು ಅವರು ಹೇಳಿದರು.ಬಲೂಚಿಸ್ತಾನದಲ್ಲಿ ಪಾಕ್ ಸೇನಾಪಡೆ ಕಾರ್ಯಾಚರಣೆ: 10 ಉಗ್ರರ ಹತ್ಯೆ ಪಶ್ಚಿಮ ಏಷ್ಯಾ ಸಂಘರ್ಷ: ಆರ್ಥಿಕ ಸವಾಲುಗಳ ಬಗ್ಗೆ ಪಾಕ್ ಪ್ರಧಾನಿ ಷರೀಫ್ ಎಚ್ಚರಿಕೆ