ವಿಶ್ವಕಪ್ ಶೂಟಿಂಗ್: 2ನೇ ದಿನವೂ ಭಾರತಕ್ಕೆ ಬರಿಗೈ
ಹಾಂಗ್ಝೌ: ಭಾರತದ ಶೂಟರ್ಗಳಿಗೆ, ಐಎಸ್ಎಸ್ಎಫ್ ವಿಶ್ವಕಪ್ (ರೈಫಲ್, ಪಿಸ್ತೂಲ್ ಮತ್ತು ಶಾಟ್ಗನ್) ಟೂರ್ನಿಯ ಎರಡನೇ ದಿನವಾದ ಗುರುವಾರವೂ ಯಾವುದೇ ಪದಕ ಬರಲಿಲ್ಲ. ಕತಾರ್, ಸ್ವೀಡನ್ ಮತ್ತು ನಾರ್ವೆ ಅಂಥ ತಂಡಗಳೂ ಪದಕಪಟ್ಟಿಯಲ್ಲಿ ಖಾತೆ ತೆರೆದವು.ಈ ವರ್ಷದ ಸೆಪ್ಟೆಂಬರ್ ಮಧ್ಯದಲ್ಲಿ ಜಪಾನ್ನ ಐಚಿ ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಪೂರ್ವಭಾವ

ಹಾಂಗ್ಝೌ: ಭಾರತದ ಶೂಟರ್ಗಳಿಗೆ, ಐಎಸ್ಎಸ್ಎಫ್ ವಿಶ್ವಕಪ್ (ರೈಫಲ್, ಪಿಸ್ತೂಲ್ ಮತ್ತು ಶಾಟ್ಗನ್) ಟೂರ್ನಿಯ ಎರಡನೇ ದಿನವಾದ ಗುರುವಾರವೂ ಯಾವುದೇ ಪದಕ ಬರಲಿಲ್ಲ. ಕತಾರ್, ಸ್ವೀಡನ್ ಮತ್ತು ನಾರ್ವೆ ಅಂಥ ತಂಡಗಳೂ ಪದಕಪಟ್ಟಿಯಲ್ಲಿ ಖಾತೆ ತೆರೆದವು.ಈ ವರ್ಷದ ಸೆಪ್ಟೆಂಬರ್ ಮಧ್ಯದಲ್ಲಿ ಜಪಾನ್ನ ಐಚಿ ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಪೂರ್ವಭಾವಿ ತಾಲೀಮು ಆಗಿದ್ದ ಈ ವಿಶ್ವಕಪ್ನಲ್ಲಿ ಮೊದಲ ದಿನದಂತೆ ಎರಡನೇ ದಿನವೂ ನಿರಾಶೆ ಮುಂದುವರಿಯಿತು.ವಿದರ್ಸಾ ವಿನೋದ್ ಮಾತ್ರ ಇದ್ದುದರಲ್ಲಿ ಗಮನಾರ್ಹ ಕೌಶಲ ತೋರಿ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್ ಫೈನಲ್ ತಲುಪಿದ್ದರು. ಆದರೆ ಫೈನಲ್ ಸುತ್ತನ್ನು ಆರನೇ ಸ್ಥಾನದಲ್ಲಿ ಮುಗಿಸಿದರು. ವಿಶ್ವದ ಮೂರನೇ ಕ್ರಮಾಂಕದ ಸಿಯೊನೆದ್ ಮೆಕಿಂಟೋಶ್ (ಬ್ರಿಟನ್) ಚಿನ್ನ ಗೆದ್ದರೆ, ಚೀನಾದ ಹಾನ್ ಜಿಯಾಯು ಬೆಳ್ಳಿ ಮತ್ತು ನಾರ್ವೆಯ ಜೆನ್ನಿ ಸ್ಟೀನ್ ಕಂಚಿನ ಪದಕ ಕೊರಳಿಗೇರಿಸಿಕೊಂಡರು.ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನದೊಡನೆ (587) ವಿದರ್ಸ ಅವರು ಎಂಟು ಮಂದಿ ಸ್ಪರ್ಧಿಗಳಿರುವ ಫೈನಲ್ ತಲುಪಿದ್ದರು.ಭಾರತದ ಉಳಿದವರು ಪರದಾಡಿದರು. ಆಶಿ ಚೋಸ್ಕಿ 585 ಶಾಟ್ನೊಡನೆ ಅರ್ಹತಾ ಸುತ್ತಿನಲ್ಲಿ 23ನ ಸ್ಥಾನ ಪಡೆದರೆ, ತಿಲೋತ್ತಮಾ ಸೇನ್ (580) ಅವರು 40ನೇ ಸ್ಥಾನಕ್ಕೆ ಸರಿದರು.ಏಷ್ಯಾ ಖಂಡದ ಬಹುದೊಡ್ಡ ಕ್ರೀಡಾಮೇಳವಾದ ಏಷ್ಯನ್ ಗೇಮ್ಸ್ಗೆ ಶೂಟರ್ಗಳ ತಯಾರಿ ಸಾಲದು ಎಂಬುದಕ್ಕೆ ಈ ಕೂಟದಲ್ಲಿ ಭಾರತದ ನಿರ್ವಹಣೆ ಪುರಾವೆಯಾಯಿತು.ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಗುರ್ಜೋತ್ ಖಂಗುರ ಅವರು ಎರಡು ಸುತ್ತುಗಳಲ್ಲಿ ಪರಿಪೂರ್ಣ 25 ಅಂಕಗಳೊಡನೆ 121/125 ಸ್ಕೋರ್ ದಾಖಲಿಸಿ ನಿರೀಕ್ಷೆ ಮೂಡಿಸಿದ್ದರು. ಎಂಟನೇ ಸ್ಥಾನದೊಡನೆ ಫೈನಲ್ ತಲುಪಿದರೂ, ಅಂತಿಮವಾಗಿ ಅಲ್ಲಿ ಆರನೇ ಸ್ಥಾನಕ್ಕೆ ಸರಿದರು.ಅಭಯ್ ಸಿಂಗ್ ಸೆಖೋನ್ 20ನೇ ಸ್ಥಾನ (119/125) ಪಡೆದರೆ, ಹಿರಿಯ ಸ್ಪರ್ಧಿ ಪರಂಪಾಲ್ ಸಿಂಗ್ ಗುರೊನ್ (107/125) ಅವರು 86 ಸ್ಪರ್ಧಿಗಳಲ್ಲಿ 81ನೇ ಸ್ಥಾನ ಗಳಿಸಲಷ್ಟೇ ಶಕ್ತರಾದರು. ಈ ನಿರಾಸೆಯು ರಾಷ್ಟ್ರೀಯ ರಾಷ್ಟ್ರೀಯ ರೈಫಲ್ ಸಂಸ್ಥೆಯ ಆಯ್ಕೆ ನೀತಿಯನ್ನೂ ಪ್ರಶ್ನಿಸುವಂತೆ ಕಂಡಿತು.ಚೀನಾ ಎರಡು ಚಿನ್ನ, ಮೂರು ಬೆಳ್ಳಿ, ಎರಡು ಕಂಚಿನ ಪದಕದೊಡನೆ ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಮೆರಿಕ (1–1–0) ಎರಡನೇ ಸ್ಥಾನದಲ್ಲಿದೆ. ಬ್ರಿಟನ್ ಮತ್ತು ಕತಾರ್ ತಲಾ ಒಂದು ಚಿನ್ನ ಪಡೆದಿವೆ.