ನಿಮ್ಮ ಹೋರಾಟ ಸರಿಯಾಗಿದೆ: ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಸಲ್ಮಾನ್ ಖಾನ್
ಮುಂಬೈ: ‘ಪ್ರಶ್ನೆ ಪತ್ರಿಕೆ ಸೋರಿಕೆ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳು ಒಗ್ಗಟ್ಟಾಗಿ ನಿಂತಿರುವುದು ಮತ್ತು ಅವರ ಹೋರಾಟಕ್ಕೆ ಪೋಷಕರು ಬೆಂಬಲ ನೀಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ’ ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಶಾಂತಿಯುವ ಪ್ರತಿಭಟನೆ ನಡೆಸ

ಮುಂಬೈ: ‘ಪ್ರಶ್ನೆ ಪತ್ರಿಕೆ ಸೋರಿಕೆ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳು ಒಗ್ಗಟ್ಟಾಗಿ ನಿಂತಿರುವುದು ಮತ್ತು ಅವರ ಹೋರಾಟಕ್ಕೆ ಪೋಷಕರು ಬೆಂಬಲ ನೀಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ’ ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಶಾಂತಿಯುವ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ. ಹಿಂಸಾಚಾರದ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.‘ಅದೊಂದು ಶಾಂತಿಯುತ ಚಳವಳಿಯಾಗಿತ್ತು. ಆದರೆ, ಚಳವಳಿ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದಕ್ಕೆ ಬೇಸರವಿದೆ. ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಅದಕ್ಕೆ ಬೆಂಬಲ ನೀಡುತ್ತಿರುವ ಅವರ ಪೋಷಕರನ್ನು ಕಂಡು ಸಂತೋಷವಾಗಿದೆ’ ಎಂದು ಹೇಳಿದ್ದಾರೆ.‘ಅವರು(ವಿದ್ಯಾರ್ಥಿಗಳು) ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಇದು ಅವರಿಗೆ ದೇಶದ ಬಗೆಗಿರುವ ಕಾಳಜಿಯನ್ನು ತೋರಿಸುತ್ತದೆ. ಪ್ರತಿಭಟನೆ ಅವರಿಗಿದ್ದ ಕೊನೆಯ ಆಯ್ಕೆಯಾಗಿದ್ದು, ಅದನ್ನು ಶಾಂತಿಯುತವಾಗಿ ಮಾಡಿದ್ದಾರೆ. ಈ ವಿದ್ಯಾರ್ಥಿಗಳು ಅತ್ಯಂತ ಧೈರ್ಯಶಾಲಿಗಳಾಗಿದ್ದು ನಿಜವಾದ ಧೀರರು. ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ಮತ್ತು ಹಂಬಲ ಹೊಂದಿರುವ ಈ ಪೀಳಿಗೆಯು ಭಾರತವು ಹೆಮ್ಮೆ ಪಡುವಂತೆ ಮಾಡುತ್ತದೆ’ ಎಂದು ತಿಳಿಸಿದ್ದಾರೆ. View this post on Instagram A post shared by Salman Khan (@beingsalmankhan) ಈ ಚಳವಳಿಯು ರಾಜಕೀಯ ವಿಷಯವಾಗಬಾರದು ಎಂದು ಒತ್ತಿ ಹೇಳಿದ ಸಲ್ಮಾನ್, ಇದು ವಿದ್ಯಾರ್ಥಿಗಳ ಹೋರಾಟವಾಗಿದ್ದು, ಅದರ ಶ್ರೇಯಸ್ಸು ಅವರಿಗೆ ಮಾತ್ರ ಸಿಗಬೇಕು ಎಂದಿದ್ದಾರೆ.‘ಈ ಸಮಸ್ಯೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನದ್ದಾಗಿದೆ. ಇದನ್ನು ರಾಜಕೀಯವಾಗಿ ಹೈಜಾಕ್ ಮಾಡಬಾರದು. ಇದರ ಶ್ರೇಯಸ್ಸು ವಿದ್ಯಾರ್ಥಿಗಳಿಗೆ ಮಾತ್ರ ಸಲ್ಲಬೇಕು. ಸರ್ಕಾರವೂ ಸಹ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂಬ ಭರವಸೆ ನನಗಿದೆ. ನಿಮಗೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.‘ಶಿಕ್ಷಣ ಎಂಬುದು ಮುಂದಿನ ಟ್ರೆಂಡ್ ಮತ್ತು ಫ್ಯಾಷನ್ ಆಗಬೇಕು. ವರ್ಷದಿಂದ ವರ್ಷಕ್ಕೆ ಇದು ಇನ್ನಷ್ಟು ಟ್ರೆಂಡಿ ಮತ್ತು ಫ್ಯಾಷನಬಲ್ ಆಗಬೇಕು. ಎಷ್ಟರಮಟ್ಟಿಗೆ ಎಂದರೆ ವಿದೇಶಗಳಿಂದ ಜನರು ಭಾರತಕ್ಕೆ ಬಂದು ಕಲಿಯಬೇಕು ಮತ್ತು ಭಾರತವು ಶಿಕ್ಷಣದ ಪ್ರಮುಖ ಕೇಂದ್ರವಾಗಬೇಕು’ ಎಂದು ಆಶಿಸಿದ್ದಾರೆ.