ಐವರು ಯಶಸ್ವಿ ಮಹಿಳಾ ಉದ್ಯಮಿಗಳಿಗೆ ನೀತಿ ಆಯೋಗದಿಂದ ತಲಾ ₹ 1 ಲಕ್ಷ ಅನುದಾನ
ನವದೆಹಲಿ: ನೀತಿ ಆಯೋಗದಲ್ಲಿ ಇನ್ಕ್ಯುಬೇಟ್ ಮಾಡಲಾದ ಮಹಿಳಾ ಉದ್ಯಮಶೀಲತಾ ವೇದಿಕೆ ಮತ್ತು ರಿಲಯನ್ಸ್ ಫೌಂಡೇಶನ್ ಸಹಯೋಗದೊಂದಿಗೆ, ಗ್ರಾಮೀಣ ಮಹಿಳಾ ಕಿರಾಣಿ ಉದ್ಯಮಿಗಳ ಎಟಿಆರ್ ಪ್ರಾಯೋಗಿಕ ಕಾರ್ಯಕ್ರಮದಡಿಯಲ್ಲಿ ಐದು ಮಂದಿ ಉತ್ಕೃಷ್ಟ ಮಹಿಳಾ ಕಿರಾಣಿ ಉದ್ಯಮಿಗಳನ್ನು ಸನ್ಮಾನಿಸಲಾಯಿತು.ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಮಾರಂಭದಲ್ಲಿ ನೀತಿ ಆಯೋಗದ ಸದಸ್ಯರಾದ ಡಾ. ಜೊರ

ನವದೆಹಲಿ: ನೀತಿ ಆಯೋಗದಲ್ಲಿ ಇನ್ಕ್ಯುಬೇಟ್ ಮಾಡಲಾದ ಮಹಿಳಾ ಉದ್ಯಮಶೀಲತಾ ವೇದಿಕೆ ಮತ್ತು ರಿಲಯನ್ಸ್ ಫೌಂಡೇಶನ್ ಸಹಯೋಗದೊಂದಿಗೆ, ಗ್ರಾಮೀಣ ಮಹಿಳಾ ಕಿರಾಣಿ ಉದ್ಯಮಿಗಳ ಎಟಿಆರ್ ಪ್ರಾಯೋಗಿಕ ಕಾರ್ಯಕ್ರಮದಡಿಯಲ್ಲಿ ಐದು ಮಂದಿ ಉತ್ಕೃಷ್ಟ ಮಹಿಳಾ ಕಿರಾಣಿ ಉದ್ಯಮಿಗಳನ್ನು ಸನ್ಮಾನಿಸಲಾಯಿತು.ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಮಾರಂಭದಲ್ಲಿ ನೀತಿ ಆಯೋಗದ ಸದಸ್ಯರಾದ ಡಾ. ಜೊರಮ್ ಅನಿಯಾ, ಡಬ್ಲ್ಯುಇಪಿಯ ಮಿಷನ್ ನಿರ್ದೇಶಕಿ ಮತ್ತು ನೀತಿ ಆಯೋಗದ ಕಾರ್ಯಕ್ರಮ ನಿರ್ದೇಶಕಿ ಅನಾ ರಾಯ್, ರಿಲಯನ್ಸ್ ಫೌಂಡೇಶನ್ನ ಮಹಿಳಾ ಸಬಲೀಕರಣ ಮುಖ್ಯಸ್ಥೆ ದೀಪ್ತಿ ನುಕಲಪತಿ ಮತ್ತು ಮೈಕ್ರೋಸೇವ್ ಕನ್ಸಲ್ಟಿಂಗ್ನ (MSC) ಅಸೋಸಿಯೇಟ್ ಪಾರ್ಟ್ನರ್ ಮತ್ತು ಜಾಗತಿಕ ಲೀಡ್ – ಜಿಇಡಿಎಸ್ಐ ಆದ ಸೋನಲ್ ಜೈಟ್ಲಿ ಅವರು ಪ್ರಶಸ್ತಿ ವಿಜೇತರು ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಉಪಸ್ಥಿತರಿದ್ದರು.ಸನ್ಮಾನಿತರಾದ ಐವರು ಮಹಿಳಾ ಉದ್ಯಮಿಗಳಿಗೆ ಅವರ ಉದ್ಯಮಶೀಲತೆಯ ಬದ್ಧತೆ ಮತ್ತು ಪ್ರಗತಿಯನ್ನು ಗುರುತಿಸಿ ತಲಾ ₹ 1 ಲಕ್ಷ ಅನುದಾನ ನೀಡಲಾಯಿತು.ಮಧ್ಯಪ್ರದೇಶದ ಬರ್ವಾನಿ, ವಿದಿಶಾ ಮತ್ತು ರೈಸೆನ್ ಜಿಲ್ಲೆಗಳಲ್ಲಿ ಮಹಿಳಾ ನೇತೃತ್ವದ ಕಿರಾಣಿ ಅಂಗಡಿಗಳನ್ನು ಬಲಪಡಿಸಲು ಮೈಕ್ರೋಸೇವ್ ಕನ್ಸಲ್ಟಿಂಗ್ (ಎಂಎಸ್ಸಿ) ತಾಂತ್ರಿಕ ಪಾಲುದಾರರಾಗಿ ಕಾರ್ಯಗತಗೊಳಿಸಿದ, ಮಹಿಳಾ ಉದ್ಯಮಶೀಲತಾ ವೇದಿಕೆ (ಡಬ್ಲ್ಯುಇಪಿ) ಜೊತೆಗಿನ ರಿಲಯನ್ಸ್ ಫೌಂಡೇಶನ್ನ ಪ್ರಾಯೋಗಿಕ ಉಪಕ್ರಮವೇ ಗ್ರಾಮೀಣ ಮಹಿಳಾ ಕಿರಾಣಿ ಉದ್ಯಮಿಗಳ ಸಬಲೀಕರಣ ಕಾರ್ಯಕ್ರಮವಾಗಿದೆ.