ಹುಬ್ಬಳ್ಳಿ: ಜುಲೈ 26ರಂದು ಚೆಸ್ ಸ್ಪರ್ಧೆ ಏರ್ಪಡಿಸಲಾಗಿದೆ
ಹುಬ್ಬಳ್ಳಿ: ವಚನ ಚದುರಂಗ ಸಂಸ್ಥೆ ಮತ್ತು ನವನಗರ ನಿವಾಸಿಗಳ ಹಿತೋದ್ಧಾರಕ ಸಂಘದ ವತಿಯಿಂದ ಬಸವರಾಜ ಶಿವಪ್ಪ ಬಳಿಗಾರ ಸ್ಮರಣಾರ್ಥ ಜುಲೈ 26ರಂದು ಚೆಸ್ ಸ್ಪರ್ಧೆ ಏರ್ಪಡಿಸಲಾಗಿದೆ.ನವನಗರದ ಎಸ್ಬಿಐ ಬ್ಯಾಂಕ್ ಶಾಖೆ ಎದುರಿನ ಈಶ್ವರ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 9ರಿಂದ ಸಂಜೆ 5.30ರ ವರೆಗೆ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ₹30 ಸಾವಿರ ಮೊತ್ತದ ಬಹುಮಾನ, ಎಂಟು ಟ್ರೋಫ

ಹುಬ್ಬಳ್ಳಿ: ವಚನ ಚದುರಂಗ ಸಂಸ್ಥೆ ಮತ್ತು ನವನಗರ ನಿವಾಸಿಗಳ ಹಿತೋದ್ಧಾರಕ ಸಂಘದ ವತಿಯಿಂದ ಬಸವರಾಜ ಶಿವಪ್ಪ ಬಳಿಗಾರ ಸ್ಮರಣಾರ್ಥ ಜುಲೈ 26ರಂದು ಚೆಸ್ ಸ್ಪರ್ಧೆ ಏರ್ಪಡಿಸಲಾಗಿದೆ.ನವನಗರದ ಎಸ್ಬಿಐ ಬ್ಯಾಂಕ್ ಶಾಖೆ ಎದುರಿನ ಈಶ್ವರ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 9ರಿಂದ ಸಂಜೆ 5.30ರ ವರೆಗೆ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ₹30 ಸಾವಿರ ಮೊತ್ತದ ಬಹುಮಾನ, ಎಂಟು ಟ್ರೋಫಿ, 24 ಪದಕಗಳನ್ನು ನೀಡಲಾಗುವುದು.ಶಂಭು ಬಳಿಗಾರ, ಶಂಕರ ರಾಗಿ, ಬಸವರಾಜ ಪಾಟೀಲ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಹಿತಿಗೆ ವಿಶ್ವನಾಥ ಬಳಿಗಾರ (97318 41969) ಅವರನ್ನು ಅಥವಾ https://karnatakachess.com/tournaments/ ವೆಬ್ಸೈಟ್ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260723-24-1280589724
Read the complete story at Prajavani