Video: ‘ಜನ ನಾಯಗನ್’ ನೋಡಲು ಚಿತ್ರಮಂದಿರಕ್ಕೆ ಬಂದ ನಟಿ ತ್ರಿಷಾ ಕೃಷ್ಣನ್
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ಸಿ. ವಿಜಯ್ ಜೋಸೆಫ್ ಅವರ ಕೊನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಗುರುವಾರ (ಜು.23) ಅದ್ದೂರಿಯಾಗಿ ತೆರೆಕಂಡಿದೆ. ನೆಚ್ಚಿನ ನಟ ವಿಜಯ್ ಅವರ ಕೊನೆ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂದು ದೊಡ್ಡ ಪರದೆ ಮೇಲೆ ವಿಜಯ್ ಅವರನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.ವಿಜಯ್ ನಟನೆಯ ‘ಜನ ನಾಯಗನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ಸಿ. ವಿಜಯ್ ಜೋಸೆಫ್ ಅವರ ಕೊನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಗುರುವಾರ (ಜು.23) ಅದ್ದೂರಿಯಾಗಿ ತೆರೆಕಂಡಿದೆ. ನೆಚ್ಚಿನ ನಟ ವಿಜಯ್ ಅವರ ಕೊನೆ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂದು ದೊಡ್ಡ ಪರದೆ ಮೇಲೆ ವಿಜಯ್ ಅವರನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ನೋಡಲು ಚೆನ್ನೈನ ಚಿತ್ರಮಂದಿರವೊಂದಕ್ಕೆ ನಟಿ ತ್ರಿಷಾ ಕೃಷ್ಣನ್ ಅವರು ಆಗಮಿಸಿದ್ದರು. ಸಿನಿಮಾ ನೋಡಿ ಹೊರಬಂದ ತ್ರಿಷಾ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇನ್ನು, ನಟಿ ತ್ರಿಷಾ ಕೃಷ್ಣನ್ ಅವರನ್ನು ಚಿತ್ರಮಂದಿರದ ಬಳಿ ನೋಡುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡ ದೃಶ್ಯ ಕಂಡು ಬಂದಿದೆ.‘ಜನ ನಾಯಗನ್’ ಅಬ್ಬರ: ಮುಗಿಲು ಮುಟ್ಟಿದ ವಿಜಯ್ ಅಭಿಮಾನಿಗಳ ಸಂಭ್ರಮರಾಜಕೀಯ ಲಾಭಕ್ಕಾಗಿ ಜನ ನಾಯಗನ್ ಸೋರಿಕೆ; ಆರೋಪ ತಳ್ಳಿಹಾಕಿದ ನಿರ್ದೇಶಕ ಎಚ್.ವಿನೋದ್#WATCH | Chennai, Tamil Nadu: Actor Trisha Krishnan leaves from Rohini Theatre in Koyambedu after watching Actor and Tamil Nadu Chief Minister C Joseph Vijay's movie 'Jana Nayagan' pic.twitter.com/pUaoQmZagh— ANI (@ANI) July 23, 2026 ತ್ರಿಷಾ ಮತ್ತು ವಿಜಯ್ ಜೋಡಿ ಮೊದಲು 2004ರ ಸೂಪರ್ ಹಿಟ್ ‘ಗಿಲ್ಲಿ’ ಚಿತ್ರದಲ್ಲಿ ಒಂದಾಗಿ ನಟಿಸಿತ್ತು. ನಂತರ ‘ತಿರುಪಾಚಿ’, ‘ಆದಿ’, ‘ಕುರುವಿ’ ಹಾಗೂ 2023ರ ಬ್ಲಾಕ್ ಬಸ್ಟರ್ ‘ಲೇವೋ ಚಿತ್ರಗಳಲ್ಲಿ ಜತೆಯಾಗಿ ಅಭಿನಯಿಸಿದ್ದರು. ವಿಜಯ್ ಅವರ ‘ಗೋಟ್’ ಚಿತ್ರದಲ್ಲೂ ತ್ರಿಷಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.‘ಲೇವೋ’, ‘ಗೋಟ್’ ದಾಖಲೆಗಳನ್ನು ಮುರಿಯಲಿದೆಯೇ ‘ಜನ ನಾಯಗನ್’..?ವರದಿಗಳ ಪ್ರಕಾರ, ‘ಜನ ನಾಯಗನ್’ ಚಿತ್ರಕ್ಕೆ ಹಲವು ಪ್ಲಸ್ ಪಾಯಿಂಟ್ಗಳಿವೆ. ಇದು ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ ಎಂಬ ಭಾವುಕತೆ ಪ್ರೇಕ್ಷಕರಲ್ಲಿದೆ. ಹೀಗಾಗಿ ಅತಿ ಹೆಚ್ಚು ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ‘ಲೇವೋ’ ₹606 ಕೋಟಿ, ‘ಗೋಟ್’ ಗಳಿಸಿದ ₹458 ಕೋಟಿ ಗಳಿಕೆಯ ದಾಖಲೆಯನ್ನು ಮಾಡುವುದು ಸಾಮಾನ್ಯ ವಿಚಾರವಲ್ಲ. ಇದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಜೊತೆಗೆ ಚಿತ್ರಮಂದಿಗಳು ಹೌಸ್ ಫುಲ್ ಆಗುವ ಅಗತ್ಯವಿದೆ. ‘ಜನ ನಾಯಗನ್’ ಬಿಡುಗಡೆಯ ನಂತರ ಬಾಕ್ಸ್ ಆಫೀಸ್ನಲ್ಲಿ ಹೇಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.